Malenadu Mitra
ರಾಜ್ಯ ಶಿವಮೊಗ್ಗ

‘ವಿ ದ ಪೀಪಲ್ ಆಫ್ ಇಂಡಿಯಾ’ ನಾಟಕ

ರಂಗಾಯಣ ಶಿವಮೊಗ್ಗವು ಕರ್ನಾಟಕ ಸರ್ಕಾರದ ‘ಸರ್ವರಿಗೂ ಸಂವಿಧಾನಯೋಜನೆಯಡಿ ಭಾರತೀಯ ಸಂವಿಧಾನವನ್ನು ಸಮಾಜದ ವಿವಿಧ ವರ್ಗಗಳಿಗೆ ಸುಲಭವಾಗಿ ಅರ್ಥೈಸಲು ಸಹಾಯವಾ ಗುವಂತೆ ಸಂವಿಧಾನದ ಕುರಿತು ‘ವಿ ದ ಪೀಪಲ್ ಆಫ್ ಇಂಡಿಯಾ’ ನಾಟಕ ಸಿದ್ದ ಪಡಿಸಿದ್ದು, ಇದರ ಪ್ರಥಮ ಪ್ರದರ್ಶನ ಜ.26ರಂದು ಸಂಜೆ6.30 ಕ್ಕೆ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ, ರಾಜ್ಯದ ಖ್ಯಾತ ನಾಟಕಕಾರ ಡಾ. ರಾಜಪ್ಪ ದಳವಾಯಿರವರ ರಚನೆಯ ಈ ನಾಟಕವನ್ನು ಉದಯೋನ್ಮುಖ ರಂಗ ನಿರ್ದೇಶಕ ಕೆ.ಪಿ.ಲಕ್ಷ್ಮಣ್ ನಿರ್ದೇಶಿಸಿದ್ದಾರೆ.1 ಗಂಟೆ 25ನಿಮಿಷದ ನಾಟಕದಲ್ಲಿ20 ಕಲಾವಿದರು ಅಭಿನಯಿಸಲಿದ್ದಾರೆ ಎಂದರು.
ಕಳೆದ ಆರು ತಿಂಗಳುಗಳಿಂದ ಈ ನಾಟಕ ರಚನೆಯ ಬಗ್ಗೆ ಅನೇಕ ನಾಟಕ ರಚನಾ ಕಮ್ಮಟಗಳು, ವಿಶೇಷ ಉಪನ್ಯಾಸ-ವಿಚಾರ ಸಂಕಿರಣಗಳನ್ನು ಆಯೋಜಿಸಿ ವಿಶಿಷ್ಟವಾಗಿ ಈ ನಾಟಕವನ್ನು ಕಟ್ಟಲಾಗಿದೆ. ಸಂವಿಧಾನದ ಆಶಯಗಳು, ಮೂಲಭೂತ ಹಕ್ಕುಗಳು, ಕರ್ತವ್ಯಗಳು,ಮಹಿಳಾ ಹಕ್ಕುಗಳು, ಸಂವಿಧಾನ ಕರಡುರಚನಾ ಸಮಿತಿಯಲ್ಲಿನ ಚರ್ಚೆಗಳು,ಸಂವಿಧಾನದಲ್ಲಿ ಮಹಿಳೆಯರ ಆಶಯಗಳು, ಇತ್ಯಾದಿ ವಿಷಯಗಳನ್ನು ಬಳಸಿ ಈ ನಾಟಕವನ್ನು ಸಿದ್ಧಪಡಿಸಲಾಗಿದೆ ಎಂದರು.

ಕರ್ನಾಟಕದ ಬೇರೆ ಬೇರೆ ಭಾಗಗಳ ಕಲಾವಿದರನ್ನು ಸಂದರ್ಶನದ ಮೂಲಕ ತಾತ್ಕಾಲಿಕವಾಗಿ ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದ್ದು, ಶಿವಮೊಗ್ಗ ರಂಗಾಯಣ ವ್ಯಾಪ್ತಿಯ 9 ಜಿಲ್ಲೆಗಳಲ್ಲಿ ಮತ್ತು ರಾಜ್ಯದ ವಿವಿಧ ಕಡೆಗಳಲ್ಲಿ ಈ ನಾಟಕದ ಪ್ರದರ್ಶನಗಳನ್ನು ರಂಗಪಯಣದ ಮೂಲಕ ಆಯೋಜಿಸುವ ಯೋಜನೆ ಇದೆ.
ಈ ನಾಟಕದ ಪ್ರಥಮ ಪ್ರದರ್ಶನವು ಸಂವಿಧಾನದ ದಿನವಾದ ಗಣರಾಜ್ಯೋತ್ಸವದ ದಿನದಂದು ಆಯೋಜಿಸಿದ್ದು, ಪ್ರದರ್ಶನವನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ್ ಎಸ್.ಎ. ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗ ಳಾಗಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಮೇಯರ್ ಸುನಿತಾ ಅಣ್ಣಪ್ಪ,ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ಜಗದೀಶ್, ವಕೀಲೆ ಇ.ಪ್ರೇಮಾ, ಬೆಂಗಳೂರು ರಂಗ ಸಮಾಜದ ಸದಸ್ಯ ಆರ್. ಎಸ್.ಹಾಲಸ್ವಾಮಿ ಆಗಮಿಸಲಿದ್ದಾರೆ ಎಂದರು.
ಸಭಾ ಕಾರ್ಯಕ್ರಮದ ನಂತರ ನಾಟಕ ಪ್ರದರ್ಶನ ನಡೆಯಲಿದ್ದು, ಪ್ರವೇಶ ಉಚಿತವಾಗಿದೆ. ಕೋವಿಡ್-19 ರ ಹಿನ್ನೆಲೆಯಲ್ಲಿ ಕೇವಲ ೨೫೦ ಜನರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ. ಕೋವಿಡ್-೧೯ರ ಸರ್ಕಾರದ ನಿಯಾಮವಳಿಗಳನ್ನು ಪಾಲಿಸುವುದು ಕಡ್ಡಾಯ. ಈ ನಾಟಕದ ಪ್ರದರ್ಶನ ಜನವರಿ 27,28 ರಂದು ಸಹ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸಂಜೆ ೬.೩೦ಕ್ಕೆ ನಡೆಯಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ರಂಗಾಯಣದ ಆಡಳಿತಾಧಿಕಾರಿ ಡಾ. ಶೈಲಜಾ, ರಂಗ ನಿರ್ದೇಶಕ ಕೆ.ಪಿ. ಲಕ್ಷ್ಮಣ್, ರಂಗ ಸಮಾಜದ ಸದಸ್ಯ ಆರ್.ಎಸ್. ಹಾಲಸ್ವಾಮಿ ಉಪಸ್ಥಿತರಿದ್ದರು.

Ad Widget

Related posts

‘ಮಲೆನಾಡಿಗರ ಶೋಷಣೆ ವಿರುದ್ಧ ಸತ್ಯಾಗ್ರಹ’ : ಪ್ರತ್ಯೇಕ ರಾಜ್ಯ ಹೋರಾಟದ ಎಚ್ಚರಿಕೆ.

Malenadu Mirror Desk

ಮಕ್ಕಳ ಶಿಕ್ಷಣದಲ್ಲಿ ಸೂಕ್ಷ್ಮ, ಎಚ್ಚರಿಕೆಯ ಹೆಜ್ಜೆ ಅಗತ್ಯ, ಶಿವಮೊಗ್ಗದಲ್ಲಿ ಶಿಕ್ಷಕರ ದಿನಾಚರಣೆ ಉದ್ಘಾಟಿಸಿದ ಸಂಸದ ರಾಘವೇಂದ್ರ ಹೇಳಿಕೆ

Malenadu Mirror Desk

ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆತರಬೇಕು:ಜಿಲ್ಲಾಧಿಕಾರಿ ಸೆಲ್ವಮಣಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.