ದಿಲ್ಲಿಯ ಗಣರಾಜ್ಯೋತ್ಸವ ಪರೇಡ್‌ಗೆ ಕೇರಳ ರಾಜ್ಯ ಕೇಂದ್ರಕ್ಕೆ ಕಳಿಸಿದ್ದ ಸಂತ ಮಾನವತಾವಾದಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ದ ಚಿತ್ರವನ್ನು ಕೇಂದ್ರ ಸರ್ಕಾರ ನಿರಾಕರಿಸಿದ್ದನ್ನು ಖಂಡಿಸಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ವತಿಯಿಂದ ಶಿವಮೊಗ್ಗದಲ್ಲಿ ಸ್ವಾಭಿಮಾನ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗೋಪಿ ವೃತ್ತದಿಂದ ಪ್ರಾರಂಭಿಸಿ ಪ್ರಮುಖ ಬೀದಿಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದ ಚಿತ್ರದೊಂದಿ ಮೆರವಣಿಗೆ ನಡೆಸಿದ ಗುರುಗಳ ಅನುಯಾಯಿಗಳು ಗೋಪಿ ವೃತ್ತದಿಂದ ನೆಹರು ರಸ್ತೆ, ಅಮೀರ್ ಅಹಮದ್ ವೃತ್ತದ ಮೂಲಕ ಖಾಸಗಿ ಬಸ್ ನಿಲ್ದಾಣ ವೃತ್ತ ಮಾರ್ಗವಾಗಿ ಆರ್ಯ ಈಡಿಗರ ಭವನದವರೆಗೆ ಸಾಗಲಾಯಿತು.
ಈ ಸಂದರ್ಭ ಮಾತನಾಡಿದ ಈಡಿಗ ಸಮಾಜದ ಪ್ರಮುಖರು, ಕೇಂದ್ರ ಸರಕಾರ ದಾರ್ಶನಿಕ ನಾರಾಯಣಗುರುಗಳ ಸ್ತಬ್ಧಚಿತ್ರ ನಿರಾಕರಿಸುವ ಮೂಲಕ ಅವರ ಅನುಯಾಯಿಗಳಿಗೆ ನೋವು ತಂದಿದೆ ಎಂದು ಹೇಳಿದರು.
ಶ್ರೀ ನಾರಾಯಣಗುರು ವಿಚಾರ ವೇದಿಕೆ ಕಾರ್ಯಾಧ್ಯಕ್ಷ ಮುಡುಬ ರಾಘವೇಂದ್ರ, ಉಮೇಶ್ ತೀರ್ಥಹಳ್ಳಿ, ಪ್ರಮುಖರಾದ ಕಲಗೋಡು ರತ್ನಾಕರ್, ಜಿ.ಡಿ. ಮಂಜುನಾಥ್, ಪಲ್ಲವಿ, ಬಂಡಿ ರಾಮಚಂದ್ರ, ಶ್ವೇತಾ ಬಂಡಿ, ಗೀತಾ ಲಿಂಗಪ್ಪ, ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇ ಇಡಗೋಡು, ವಕೀಲ ಕೆ.ಎಲ್. ಉಮೇಶ್,ಸುಧಾಕರ್ ಶೆಟ್ಟಿಹಳ್ಳಿ, ಬಿ. ಯೋಗೇಶ್, ನಟರಾಜ್, ಹೆಚ್.ವಾಸಪ್ಪ, ಶಿವಕುಮಾರ್ ಬಿಳವಗೋಡು, ಚಂದ್ರಶೇಖರ್‌ಸೂರಗುಪ್ಪೆ, ವಿಶಾಲ್‌ಕುಮಾರ್, ಕೇಶವಮೂರ್ತಿ ಮೊದಲಾದವರಿದ್ದರು.