ಗೃಹ ಸಚಿವ ಆರಗ ಜ್ಞಾನೇಂದ್ರ ರವರು, ತಮ್ಮ ಮತಕ್ಷೇತ್ರದ ನಾಯಕರ ನಿಯೋಗದೊಂದಿಗೆ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ತೀರ್ಥಹಳ್ಳಿ ತಾಲೂಕಿನ ಧೀರ್ಘ ಕಾಲದ ಬೇಡಿಕೆಯಾದ ತೂದೂರು – ಮುಂಡುವಳ್ಳಿ ನಡುವೆ, ತುಂಗಾ ನದಿಗೆ ಅಡ್ಡಲಾಗಿ ಸುಮಾರು ರೂಪಾಯಿ 20 ಕೋಟಿ ಅಂದಾಜು ವೆಚ್ಚದ ನೂತನ ಸೇತುವೆ ನಿರ್ಮಾಣ ಕಾಮಗಾರಿಯ, ಯೋಜನೆಗೆ, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮದ ವತಿಯಿಂದ ಕಾರ್ಯಗತ ಗಳಿಸಲು, ಮನವಿ ಸಲ್ಲಿಸಿದರು.
ಮನವಿಗೆ ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ, ನೂತನ ಸೇತುವೆ ನಿರ್ಮಾಣ ಕಾಮಗಾರಿಯ ಯೋಜನೆಯನ್ನು ಆದ್ಯತೆಯ ಮೇಲೆ ಕೈಗೊಳ್ಳಲು, ನಿರ್ದೇಶನ ನೀಡುವುದಾಗಿ ಭರವಸೆ ನೀಡಿದ್ದಾರೆ.
ನೂತನ ಸೇತುವೆ ನಿರ್ಮಾಣ ಕಾಮಗಾರಿ ಅನುಷ್ಟಾನಗೊಂಡರೆ, ಸುಮಾರು ಏಳರಿಂದ ಎಂಟು ಗ್ರಾಮ ಪಂಚಾಯತ್ ಗಳಿಗೆ ಸಂಪರ್ಕ ಸಾಧಿಸಲು ಅನುಕೂಲ ವಾಗುತ್ತದೆ. ಪ್ರವಾಸಿ ಮತ್ತು ಯಾತ್ರಾ ಸ್ಥಳ ಗಳಾದ ಕುಪ್ಪಳ್ಳಿ, ಮೃಗವಧೆ, ಚಿಬ್ಬಲಗುಡ್ಡೆ, ಶೃಂಗೇರಿ, ಹೊರನಾಡು ಹಾಗೂ ಎನ್ ಆರ್ ಪುರ ಮುಂತಾದ ಪ್ರದೇಶಗಳಿಗೆ, ಸಮೀಪದ ಮಾರ್ಗವಾಗುತ್ತದೆ.
ಮಾಳುರು ಶಾಲೆ ಕಾಲೇಜುಗೆ ವ್ಯಾಸಂಗಕ್ಕೆ ಬರುವ ವಿದ್ಯಾರ್ಥಿಗಳಿಗೂ ಅನುಕೂಲ ವಾಗುತ್ತದೆ, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ರವರು, ಮುಖ್ಯಮಂತ್ರಿ ಯವರಿಗೆ ಮನವರಿಕೆ ಮಾಡಿದ್ದಾರೆ.
ನಿಯೋಗದಲ್ಲಿ ನವೀನ್ ಹೆದ್ದೂರು, ಸತೀಶ್ ಬೇಗುವಳ್ಳಿ, ಕವಿರಾಜ್, ಕಾನುಕೊಪ್ಪ ಶಿವ ಕುಮಾರ್, ಮಧು ತೂದೂರು, ಯಶಸ್ವಿ ಹಾಗೂ ಇತರರೂ ಉಪಸ್ಥಿತರಿದ್ದರು.
previous post