ಉಡಾನ್ 4.2 ಯೋಜನೆಯಡಿ ಶಿವಮೊಗ್ಗ ಜಿಲ್ಲೆ ಹಾಗೂ ನೆರೆ ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತೆ ವಿವಿಧ ಮಾರ್ಗಗಳಿಗೆ ಕೂಡಲೇ ಟೆಂಡರ್ ಕರೆದು ವಿಮಾನ ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳು ವಂತೆ ಸಂಸದ ಬಿ.ವೈ.ರಾಘ ವೇಂದ್ರ ಕೇಂದ್ರ ನಾಗರಿಕ ವಿಮಾನ ಖಾತೆ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರಿಗೆ ಮನವಿ ಸಲ್ಲಿಸಿದರು.
ಗುರುವಾರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂಸದರು, ಶಿವಮೊಗ್ಗ ವಿಮಾನ ನಿಲ್ದಾಣ ಸದ್ಯದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ, ಇದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ರಾಜ್ಯದ ಎರಡನೇ ಅತಿ ಉದ್ದವಿರುವ ರನ್‌ವೇ ಹೊಂದಿದೆ. ಶಿವಮೊಗ್ಗ ಕರ್ನಾಟಕ ಭೂಪಟದ ಮಧ್ಯಭಾಗದಲ್ಲಿ ಇರುತ್ತದೆ. ಆದ್ದರಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆದಷ್ಟು ಬೇಗ ಮಲ್ಟಿ ಡಿಸಿಪ್ಲನರಿ ಟೀಂ ಅನ್ನು ಕೂಡಲೇ ಕಳುಹಿಸಿಕೊಡುವಂತೆ ಕೋರಿದರು.
ವಿದ್ಯುತ್ ಉಪಕರಣಗಳ ನಿಧಿ ಹಾಗೂ ಉಡಾನ್- 4.2 ಯೋಜನೆ ಅಡಿಯಲ್ಲಿ ಶಿವಮೊಗ್ಗ ಜಿ ಹಾಗೂ ನೆರೆಯ ಜಿಗಳ ಜನರಿಗೆ ದೇಶದ ಮಹಾನಗರಗಳಿಗೆ ಹೋಗಿಬರಲು ಮತ್ತು ವ್ಯಾಪಾರ ಹಾಗೂ ಪ್ರವಾಸೋದ್ಯಮ ಸಲುವಾಗಿ ಬರುವ ಪ್ರಯಾಣಿಕರನ್ನು ಉತ್ತೇಜನ ನೀಡುವ ಸಲುವಾಗಿ ಶಿವಮೊಗ್ಗ ವಿಮಾನ ನಿಲ್ದಾಣದ ಮೂಲಕ ದೇಶ ದ 11 ಪ್ರಮುಖ ನಗರ ಗಳ ವಿಮಾನ ನಿಲ್ದಾಣಕ್ಕೆ ಜೋಡಣೆ ಮಾಡುವ ಮಾರ್ಗಗಳಾದ ಮುಂಬೈ- ಶಿವಮೊಗ್ಗ- ಮುಂಬೈ, ಮುಂಬೈ-ಶಿವಮೊಗ್ಗ-ಮಂಗಳೂರು, ಮುಂಬೈ- ಶಿವಮೊಗ್ಗ-ಚೆನ್ನೈ, ಮುಂಬೈ- ಶಿವಮೊಗ್ಗ-ತಿರುಪತಿ, ಶಿವಮೊಗ್ಗ- ಗುಲ್ಬರ್ಗಾ- ಹೈದರಾಬಾದ್, ಶಿವಮೊಗ್ಗ- ಗುಲ್ಬರ್ಗಾ-ಡೆಲ್ಲಿ, ಬೆಂಗಳೂರು- ಶಿವಮೊಗ್ಗ-ಬೆಳಗಾಂ, ಬೆಂಗಳೂರು-ಶಿವಮೊಗ್ಗ-ಡೆಲ್ಲಿ, ಕೊಚ್ಚಿನ್-ಶಿವಮೊಗ್ಗ-ಡೆಲ್ಲಿ, ಬೆಂಗಳೂರು-ಶಿವಮೊಗ್ಗ-ಗೋವ ಹಾಗೂ ಹೈದರಾಬಾದ್- ಶಿವ ಮೊಗ್ಗ- ಕೊಚಿನ್ ಮಾರ್ಗಗಳನ್ನು ಕೂಡಲೇ ಟೆಂಡರ್ ಕರೆಯುವ ಮೂಲಕ ವಿಮಾನ ಸಂಚರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಮುಂಬೈ-ಶಿವಮೊಗ್ಗ-ಮುಂಬೈ, ಮುಂಬೈ-ಶಿವಮೊಗ್ಗ-ಮಂಗಳೂರು, ಮುಂಬೈ-ಶಿವಮೊಗ್ಗ-ಚೆನ್ನೈ, ಮುಂಬೈ-ಶಿವಮೊಗ್ಗ-ತಿರುಪತಿ, ಶಿವಮೊಗ್ಗ- ಗುಲ್ಬರ್ಗಾ-ಹೈದರಾಬಾದ್, ಶಿವಮೊಗ್ಗ-ಗುಲ್ಬರ್ಗಾ-ಡೆಲ್ಲಿ, ಬೆಂಗಳೂರು-ಶಿವಮೊಗ್ಗ-ಬೆಳಗಾಂ, ಬೆಂಗಳೂರು-ಶಿವಮೊಗ್ಗ-ಡೆಲ್ಲಿ, ಕೊಚ್ಚಿನ್-ಶಿವಮೊಗ್ಗ- ಡೆಲ್ಲಿ, ಬೆಂಗಳೂರು-ಶಿವಮೊಗ್ಗ-ಗೋವ ಹಾಗೂ ಹೈದರಾಬಾದ್- ಶಿವಮೊಗ್ಗ-ಕೊಚಿನ್ ಮಾರ್ಗಗಗಳಿಗೆ ಟೆಂಡರ್ ಕರೆಯಲು ಸಚಿವರಲ್ಲಿ ಮನವಿ ಮಾಡಲಾಗಿದೆ.
– ಬಿ.ವೈ.ರಾಘವೇಂದ್ರ, ಸಂಸದರು.