ಶಿವಮೊಗ್ಗ ಹೊಸಮನೆ ಬನಶಂಕರಿ ಬಡಾವಣೆಯ ಶ್ರೀ ದೊಡ್ಡಮ್ಮ ಜಲದುರ್ಗಮ್ಮ ದೇವಾ ಲಯ ಸಮಿತಿ ಹಾಗೂ ಶ್ರೀ ಯಾಗ ಕ್ಷತ್ರಿಯ ಸಾಧುಶೆಟ್ಟಿ ಸಂಘ ಇವರ ಆಶ್ರಯದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಕಾಮಾಕ್ಷಿ ಸಮುದಾಯ ಭವನ ಮತ್ತು ಶ್ರೀ ದೊಡ್ಡಮ್ಮ ಜಲದುರ್ಗಮ್ಮ ದೇವಾಲಯದ ನವೀಕರಣ ಕಾಮಗಾರಿಗೆ ಸಚಿವ ಕೆ.ಎಸ. ಈಶ್ವರಪ್ಪ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ಮಾತನಾಡಿದ ಸಚಿವ ಈಶ್ವರಪ್ಪ, ಈ ಜನಾಂಗದ ಬಹು ದಿನದ ಕನಸು ಇದಾಗಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಸಮಾಜ ಇದಾಗಿದೆ. ಕಳೆದ ೧೫ ವರ್ಷಗಳಿಂದ ಈಚೆಗೆ ಸಮಾಜ ಬೆಳೆದಿದೆ. ಮತ್ತು ವಿದ್ಯಾವಂತರಾಗುತ್ತಿದ್ದಾರೆ ಎಂದರು.
ಸಮಾಜ ಬಾಂಧವರು, ಭಕ್ತಾದಿಗಳು ಒಟ್ಟಾಗಿ ಸುಸಜ್ಜಿತ ಸಮುದಾಯ ಭವನ, ದೇವಾಲಯ ನವೀಕರಣಕ್ಕೆ ಕೈಹಾಕಿದ್ದಾರೆ. ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಂಡಿದ್ದು, ಇದು ಯಶಸ್ವಿಯಾಗಲಿ. ಈ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ವಿನಂತಿಸಿದರು.
ದೇವಾಲಯ ಸಮಿತಿ ಅಧ್ಯಕ್ಷ ಎನ್. ಉಮಾಪತಿ, ಉಪಾಧ್ಯಕ್ಷ ಎಸ್.ಆರ್.ಸೋಮು, ಪ್ರಧಾನ ಕಾರ್ಯದರ್ಶಿ ಕಿಬ್ಬನಹಳ್ಳಿ ನರ ಸಿಂಹ, ಪದಾಧಿಕಾರಿಗಳಾದ ಸ.ನ. ಹೊನ್ನಪ್ಪ, ಎನ್. ವೇಣುಗೋಪಾಲ, ಡಿ. ರಘು, ನಿರ್ದೇಶಕರಾದ ಡಿ. ಗೋವಿಂದರಾಜ್, ಸ.ನ.ಮೂರ್ತಿ, ಸೋಮಶೇಖರ್, ಎಸ. ವೈ. ರಮೇಶ್, ಹನುಮಂತಪ್ಪ, ಡಿ.ಎಲ. ಕೃಷ್ಣಮೂರ್ತಿ, ಆರ್.ಮೋಹನ್, ಹಸೂಡಿ ಕುಮಾರ್‌ಮೊದಲಾದವರಿದ್ದರು. ಪಾಲಿಕೆ ಸದಸ್ಯೆಮೀನಾಕ್ಷಿ ಗೋವಿಂದರಾಜ್ ಅವರನ್ನು ಸನ್ಮಾನಿಸಲಾಯಿತು.