Malenadu Mitra
ರಾಜ್ಯ ಶಿವಮೊಗ್ಗ

ಒಂದೇ ಒಂದು ಗುಡಿಸಲು ವಿದ್ಯುತ್ ಸಂಪರ್ಕ ರಹಿತರಾಗಿರಬಾರದು: ಗೃಹಸಚಿವ ಆರಗ ಜ್ಞಾನೇಂದ್ರ, ಖಡಕ್ ಎಚ್ಚರಿಕೆ

ರಾಜ್ಯದ ಯಾವುದೇ ಹಳ್ಳಿ ಅಥವಾ ಪಟ್ಟಣದಲ್ಲಿ, ವಿದ್ಯುತ್ ಸಂಪರ್ಕ ವಂಚಿತ ಗುಡಿಸಲು ಅಥವಾ ಮನೆಗಳು ಇರದಂತೆ, ಅಭಿಯಾನ ರೂಪದಲ್ಲಿ, ಮಹತ್ವಾಾಂಕ್ಷೆಯ ” ಬೆಳಕು” ಯೋಜನೆಯನ್ನು, ಅನುಷ್ಟಾನ ಗೊಳಿಸಬೇಕೆಂದು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಇಂದು, ಅಧಿಕಾರಿಗಳಿಗೆ, ನಿರ್ದೇಶನ ನೀಡಿದರು.

ತೀರ್ಥಹಳ್ಳಿ ತಾಲೂಕು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಳಕು, ಯೋಜನೆಯ ಅನುಷ್ಠಾನಕ್ಕೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪ್ರಾಶಸ್ತ್ಯ ನೀಡಬೇಕು ಹಾಗೂ ಕೇಂದ್ರ ಪ್ರಾಯೋಜಿತ ಈ ಯೋಜನೆಯ ಆಶಯಗಳನ್ನು ಪ್ರತಿ ಬಡವರ ಮನೆ ತಲುಪಬೇಕು ಎಂದು, ಆಗ್ರಹಿಸಿದರು.

” ಯೋಜನೆಯ ಅರ್ಹ ಫಲಾನುಭವಿ ಗಳು, ಬಂದು ಅರ್ಜಿ ಕೊಡಲಿ ಆಮೇಲೆ ನೋಡೋಣ ಎಂಬ ಧೋರಣೆ ಬಿಡಿ ಎಂದು ಸೂಚಿಸಿದ ಸಚಿವರು, ನೀವೇ ಅವರ ಬಳಿ ಹೋಗಿ, ಯೋಜನೆಯ ಬಗ್ಗೆ ಮಾಹಿತಿ ನೀಡಿ, ವಿದ್ಯುತ್ ಸಂಪರ್ಕಕ್ಕೆ ಕ್ರಮ ವಹಿಸಬೇಕು” ಎಂದು ತಾಕೀತು ನೀಡಿದರು.

ಯಾವುದೇ ಪಂಚಾಯತ್ ವ್ಯಾಪ್ತಿಯಲ್ಲಿ ಯಾರ ಮನೆ ಯಲ್ಲಿಯೂ, ನಮ್ಮ ಮನೆಗೆ ಕರೆಂಟ್ ಕನೆಕ್ಷನ್ ಇಲ್ಲ ಎಂಬ ದೂರು ಬರಬಾರದು.

” ನೂರಕ್ಕೆ ನೂರು ಪ್ರತಿಶತ ಯೋಜನೆ ಕಾರ್ಯಗತ ವಾಗಬೇಕು” ಎಂದು ಸಚಿವರು ನಿರ್ದೇಶಿಸಿದರು.

ಬೆಳಕು ಯೋಜನೆಯ ನಿರ್ವಹಣೆ ಮತ್ತು ಕಾರ್ಯಗತಗೊಂಡಿದ್ದರ ಬಗ್ಗೆ ವರದಿ ಸಲ್ಲಿಸಬೇಕು ಎಂದೂ ಸಚಿವರು ತಿಳಿಸಿದರು.

Ad Widget

Related posts

ಸಾಮೂಹಿಕ ನಾಯಕತ್ವ: ಶಾ ಹೇಳಿಕೆಗೆ ಈಶ್ವರಪ್ಪ ತದ್ವಿರುದ್ಧ ಹೇಳಿಕೆ

Malenadu Mirror Desk

ಬಿಜೆಪಿ- ಜೆಡಿಎಸ್ ನಡುವೆಯೇ ಪೈಪೋಟಿ, ಅನುಕಂಪದ ಮುಂದೆ ಆರ್ಥಿಕ ಬಲದ ಸವಾರಿ 

Malenadu Mirror Desk

ಸಿಗಂದೂರು ದೇವಿಯ ದಯೆ ನಾಡಿನ ಮೇಲಿದೆ , ಅದ್ದೂರಿ ಜಾತ್ರೆಗೆ ಚಾಲನೆ ನೀಡಿದ ಶಿವಗಿರಿಯ ಸಚ್ಚಿದಾನಂದ ಸ್ವಾಮೀಜಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.