Malenadu Mitra
ರಾಜ್ಯ ಶಿವಮೊಗ್ಗ

ಹರ್ಷನ ಕೊಲೆ ಹಿಂದೆ 6 ಆರೋಪಿಗಳು, ಮೂವರ ಬಂಧನ ,ಉಳಿದವರು ವಶಕ್ಕೆ

ಶಿವಮೊಗ್ಗ ಬಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಹಿಂದೆ ಹಳೆಯ ದ್ವೇಷವಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಕೊಲೆ ನಡೆದ ೨೪ ಗಂಟೆಯಲ್ಲಿ ಇಬ್ಬರು ಆರೊಪಿಗಳನ್ನು ಖೆಡ್ಡಾಕ್ಕೆ ಬೀಳಿಸಿದ್ದ ಪೊಲೀಸರು ಉಳಿದ ನಾಲ್ವರನ್ನು ಸೆರೆಹಿಡಿದಿದ್ದಾರೆ. ಪ್ರಕರಣದಲ್ಲಿ ಒಟ್ಟು ಹತ್ತಕ್ಕೂ ಹೆಚ್ಚು ಮಂದಿಯಲ್ಲಿ ವಶಕ್ಕೆ ಪಡೆದಿರುವ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ.

ಬುಧವಾರ ಖಾಸಿಫ್, ಸೈಯದ್ ನದೀಮ್ ಮತ್ತು ರಿಹಾನ್ ಪ್ರಮುಖ ಆರೋಪಿಗಳಾಗಿದ್ದು, ಇವರನ್ನು ಅಧಿಕೃತವಾಗಿ ಬಂಧನ ಎಂದು ತೋರಿಸಿದ್ದು, ಉಳಿದ ಆರೋಪಿಗಳಾದ ನಿಹಾಲ್, ಆಸಿಫ್, ಅಫಾನ್ ರನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಖಾಸಿಫ್ ಎಂಬಾತ ಕೋಮು ಗಲಭೆಯಲ್ಲಿ ಭಾಗಿಯಾಗಿದ್ದ ಆರೋಪ ಹೊಂದಿದ್ದು, ಈತ ಹತ್ಯೆಯಾದ ಹರ್ಷನ ಜೊತೆ ಹಿಂದೆಯೂ ಗಲಾಟೆ ಮಾಡಿಕೊಂಡಿದ್ದ ಎನ್ನಲಾಗಿದೆ. ಹಿಜಾಬ್ -ಕೇಸರಿ ಶಾಲಿನ ಗಲಾಟೆಯಲ್ಲಿ ಹರ್ಷ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸುವಲ್ಲಿ ಮುಂಚೂಣಿಯಲ್ಲಿದ್ದ ಈ ಸಂದರ್ಭದಲ್ಲಿಯೇ ಹರ್ಷನ ಮೇಲೆ ಅಟ್ಯಾಕ್ ಮಾಡುವ ಸಿದ್ಧತೆ ಮಾಡಿಕೊಂಡಿರುವ ಆರೋಪಿಗಳು ಆತನನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಎಡಿಜಿಪಿ ಪ್ರತಾಪ್‌ರೆಡ್ಡಿ ಶಿವಮೊಗ್ಗದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ಹರ್ಷನ ಕೊಲೆ ಯಾರು ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಎಲ್ಲಾ ಆರೋಪಿಗಳೂ ಶಿವಮೊಗ್ಗದವರೇ ಆಗಿದ್ದು, ಮೂವರನ್ನು ಬಂಧಿಸಿದ್ದು, ಉಳಿದವರ ಬಗ್ಗೆ ತನಿಖೆ ನಡೆಯುತ್ತಿದೆ ಎಲ್ಲವನ್ನೂ ಈಗಲೇ ಬಹಿರಂಗಪಡಿಸಲಾಗದು ಎಂದರು.
ಪರಿಸ್ಥಿತಿ ಹತೋಟಿಗೆ:
ಶಿವಮೊಗ್ಗ ನಗರಕ್ಕೆ ರಾಜ್ಯದ ಅನೇಕ ಕಡೆಯಿಂದ ಪೊಲೀಸ್ ಪಡೆ ಕರೆಸಿಕೊಳ್ಳಲಾಗಿದೆ. ಆರ್‌ಎಎಫ್ ತುಕಡಿ ಕೂಡ ನಿಯೋಜನೆ ಮಾಡಲಾಗಿದ್ದು, ಪರಿಸ್ಥಿತಿ ಹತೋಟಿಯಲ್ಲಿ ಎಡಿಜಿಪಿ ಮುರುಗನ್,ಐಜಿ ತ್ಯಾಗರಾಜನ್ ಹಾಗೂ ಎಸ್ಪಿ ನೇತೃತ್ವದಲ್ಲಿ ಶಾಂತಿಸುವ್ಯಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಶಾಂತಿ ನೆಲೆಸಬೇಕಿದೆ ಈ ಹಿನ್ನೆಲೆಯಲ್ಲಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

Ad Widget

Related posts

ಲಾರಿ ಡಿಕ್ಕಿ- ಚಿಕ್ಕಜೇನಿಯಲ್ಲಿ ಖಾಸಗಿ ಬಸ್ ಪಲ್ಟಿ- ಹಲವರಿಗೆ ಗಾಯ

Malenadu Mirror Desk

ಹರಿಗೆಯಲ್ಲಿ ಯುವಕನ ಕೊಲೆ

Malenadu Mirror Desk

ಬಿಜೆಪಿ 42 ನೇ ಸಂಸ್ಥಾಪನಾ ದಿನಾಚರಣೆ: ಶೋಭಾಯಾತ್ರೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.