ಕುವೆಂಪು ವಿವಿಯಲ್ಲಿ ಎನ್‌ಎಸ್‌ಎಸ್ ಪ್ರಶಸ್ತಿ ಪ್ರದಾನ ಸಮಾರಂಭ
ರಾಷ್ಟ್ರೀಯ ಸೇವಾ ಯೋಜನೆ ದೇಶಪ್ರೇಮ ಬೆಳೆಸುವ ಅತ್ಯುತ್ತಮ ವೇದಿಕೆ. ವಿದ್ಯಾರ್ಥಿಗಳು ಇತರೆ ಸಂಘಸಂಸ್ಥೆಗಳ ಆಕರ್ಷಣೆಗೆ ಒಳಗಾಗದೆ ಎನ್ಎಸ್ಎಸ್ ನಲ್ಲಿ ತೊಡಕಿಸಿಕೊಳ್ಳಲಿ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಅನುರಾಧ. ಜಿ. ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದ 2019-20ಮತ್ತು 2020-21ನೇಸಾಲಿನ. ವಿ.ವಿ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಮಾತನಾಡುತ್ತಿದ್ದರು.
ಏನ್. ಎಸ್. ಎಸ್. ಗ್ರಾಮೀಣ ಪ್ರದೇಶದ ಜನರ ಸಮಸ್ಯೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುತ್ತದೆ.ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರು.
ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಶೋಕ್ ರೇವಣಕರ್ ಮಾತನಾಡಿ, ಇಂದು ಎನ್. ಎಸ್. ಎಸ್. ಹಲವು ವಿಧದಲ್ಲಿ ದೇಶಕಟ್ಟುವ ಕೆಲಸ ನಿರ್ವಹಿಸುವಂತೆ ಮಾಡಿದೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಇದು ಸಹಕಾರಿಯಾಗಿದೆ. ಎಲ್ಲಾ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕ ವರ್ಗ ಇದರಲ್ಲಿ ತೊಡಗಿಸಿಕೊಳ್ಳಬೇಕೆಂದರು.
ವಿ.ವಿ ಯ ಎನ್. ಎಸ್. ಎಸ್. ಸಂಯೋಜನಾಧಿಕಾರಿ ಡಾ.ನಾಗರಾಜ್ ಪರಿಸರ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ವಿ.ವಿ ಗೆ ಪ್ರತಿ ವರ್ಷ ಅನೇಕ ಪ್ರಶಸ್ತಿಗಳನ್ನು ನಮ್ಮ ಅಧಿಕಾರಿಗಳೂ, ಸ್ವಯಂಸೇವಕರೂ ತಂದುಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ,ಇತರರಿಗೆ ಸ್ಪೂರ್ತಿಯಾಗುತ್ತಿದ್ದಾರೆ ಎಂದು ತಿಳಿಸಿದರು. ಹಣಕಾಸು ಅಧಿಕಾರಿಗಳಾದ ಎಸ್. ರಾಮಕೃಷ್ಣ, ಮಾರುತಿ, ಡಾ. ಅಣ್ಣಪ್ಪ ಎನ್., ಡಾ.ಉಮೇಶ್ ಕು.ಭಾರ್ಗವಿ, ಡಾ.ಎಂ.ವೆಂಕಟೇಶ್, ಮಾಲತೇಶ ಎಚ್, ಶ್ರೀ ಹರ್ಷ ವಿಶ್ವವಿದ್ಯಾಲಯ ಮಟ್ಟದ ಪ್ರಶಸ್ತಿಗಳನ್ನು ಪಡೆದರು.
ಈ ಸಂದರ್ಭದಲ್ಲಿ ರಾಜ್ಯ ಎನ್. ಎಸ್. ಎಸ್. ಪ್ರಶಸ್ತಿ ಪಡೆದ , ಡಾ. ನಾಗರಾಜ ನಾಯ್ಕ್, ಡಾ. ಮೋಹನ್ ಹೆಚ್. ಎಸ್., ಪ್ರೊ. ಕೆ. ಎಮ್. ನಾಗರಾಜು, ಪ್ರಾಂಶುಪಾಲರುಗಳಾದ ಪ್ರೊ. ಹೆಚ್. ಎಸ್. ಸುರೇಶ್, ಪ್ರೊ. ಬಿ. ಜಿ. ಧನಂಜಯ, ಸ್ವಯಂ ಸೇವಕರಾದ ಮಮತಾ, ಮಾರುತಿ ಇವರನ್ನು ಸನ್ಮಾನಿಸಲಾಯಿತು.
ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಧರ್ಮೆಗೌಡ, ಕಟೀಲ್ ಅಶೋಕ್ ಪೈ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.