ಶಿವಮೊಗ್ಗ ನಗರದಲ್ಲಿ ರಾತ್ರಿ ಕರ್ಫ್ಯೂ ಹಾಗೂ ನಿಷೇಧಾಜ್ಜೆ ಇರುವ ಕಾರಣ ಮಾ.1 ರ ಮಹಾ ಶಿವರಾತ್ರಿಯಂದು ಹರಕೆರೆಯ ಶ್ರೀ ರಾಮೇಶ್ವರ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ ಭಕ್ತರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಪ್ರತಿವರ್ಷ ಶಿರಾತ್ರಿಯಂದು ಜಾತ್ರೆ ನಡೆಯುತಿದ್ದು, ರಾತ್ರಿಯಿಂದಲೇ ಭಕ್ತ ಸಮೂಹ ಸರದಿ ಮೇಲೆ ನಿಂತು ದೇವರ ದರ್ಶನ ಮಾಡುತಿದ್ದರು. ತುಂಗಾ ನದಿ ದಡದಲ್ಲಿರುವ ಈ ಶಿವನ ದೇಗುಲ ಇತ್ತೀಚಿನ ವರ್ಷಗಳಲ್ಲಿ ಬಹಳ ಪ್ರಸಿದ್ದಿಯಾಗಿತ್ತು. ಕಳೆದ ಎರಡು ವರ್ಷ ಕೊರೊನ ಕಾರಣದಿಂದ ಜಾತ್ರೆ ಮಸುಕಾಗಿತ್ತು.ಈಗ ನಗರದಲ್ಲಿನ ವಿಷಮ ಪರಿಸ್ಥಿತಿಯಿಂದಾಗಿ ಹರಕೆರೆ ರಾಮೇಶ್ವರ ಜಾತ್ರೆ ಇಲ್ಲವಾಗಿದೆ