ಸಿವಮೊಗ್ಗ ನಗರದಲ್ಲಿ ಮಂಗಳವಾರ ರಾತ್ರಿ ಹಣಕಾಸು ವಿಚಾರಕ್ಕೆ ನಡೆದ ಜಗಳದಲ್ಲಿ ಚಾಕು ಇರಿತಕ್ಕೊಳಗಾದ ಪಾಚಾಖಾನ್ (45) ಎಂಬುವವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಂಕರ ಮಠ ರಸ್ತೆ ಟಾಟಾ ಶೋರೂಂ ಬಳಿ ಘಟನೆ ನಡೆದಿದೆ. ಆರ್ ಎಮ್ ಎಲ್ ನಗರದ ದಸ್ತಗೀರ್ ಎಂಬಾತ ಚಾಕು ಇರಿದಿದ್ದಾನೆ ಎನ್ನಲಾಗಿದೆ. ಇಬ್ಬರ ನಡುವೆ ಒಂದು ಲಕ್ಷ ರೂ ವ್ಯವಹಾರ ಇತ್ತೆಂದು ಹೇಳಲಾಗಿದೆ. ಪಾಚಾಖಾನ್ ಗೆ ಗಂಭೀರ ಗಾಯವಾಗಿದೆ. ಕೋಟೆ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.