ಕರ್ನಾಟಕ ರಾಜ್ಯ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಮಹಾಬಲೇಶ್ವರ ಹೆಗಡೆ ತಂಡಕ್ಕೆ ಭರ್ಜರಿ ಜಯ ದೊರೆತಿದ್ದು, ಚುನಾವಣೆ ನಡೆದ 16 ಸ್ಥಾನಗಳಿಗೂ ಇವರ ತಂಡದವರೇ ಆಯ್ಕೆಯಾಗಿದ್ದಾರೆ.
ನಿಕಟಪೂರ್ವ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಅತಿ ಹೆಚ್ಚು ಮತ(೧೩೫೭) ಪಡೆಯುವ ಮೂಲಕ ಮೊದಲ ಸ್ಥಾನ ಕಾಯ್ದುಕೊಂಡಿದ್ದು, ಈ ತಂಡವೇ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಉಳಿದಂತೆ ಇವರ ತಂಡದ ತಿಮ್ಮಪ್ಪ ಎಂ.ಎಸ್ 1233, ಪುಟ್ಟಪ್ಪ ಕೆ.ವಿ.1208, ನಾಗರಾಜ್ ಹೆಚ್. 1192ನಾಗರಾಜಪ್ಪ ಎಂ. 1169 ಮಂಜಪ್ಪ ಬಿ.1189 ಲಕ್ಷ್ಮಣ್ ಟಿ.ಆರ್.1171, ಜನಾರ್ಧನ ನಾರಾಯಣ ಗೌಡ 1149, ಹನುಮಂತಪ್ಪ ಎಂ. 1139 ರಾಮಪ್ಪ ಎಸ್.1131, ದತ್ತಾತ್ರೇಯ ಸುಬ್ರಾಯ ಹೆಗಡೆ 1128, ಮಂಜನಾಥ ಪಿ.1149, ಹಾಲೇಶಪ್ಪ ಎನ್. (ನವುಲೆ) 1088, ಗೀತಾ ಎಂ.ಎನ್. 1196, ಗಾಯತ್ರಿ ಕೆ. 1241 ಭಾರತಿ ಜಿ1163, ಮತಗಳನ್ನು ಪಡೆದು ನಿರ್ದೇಶಕರುಗಳಾಗಿ ಆಯ್ಕೆಯಾಗಿದಾರೆ.
2022 ರಿಂದ2027 ನೇ ಸಾಲಿಗಾಗಿ 06 ಮಾರ್ಚ್ 2022 ರಂದು ಚುನಾವಣೆ ನಡೆದಿತ್ತು. 19 ಸ್ಥಾನಗಳ ನಿರ್ದೇಶಕ ಪೈಕಿ ೩ ಸ್ಥಾನಗಳಿಗೆ ಮಹಾಬಲೇಶ್ವರ ಹೆಗಡೆ ತಂಡದ ನಾಗಪ್ಪ ತಳವಾರ್, ರೇವಣಪ್ಪ ಎಂ.ಆರ್. ಮತ್ತು ಟಿ.ದಾನೇಶಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 16 ಸ್ಥಾನಗಳಿಗೆ ಚುನಾವಣೆ ನಡೆಯಿತು. ಹೆಗಡೆ ಅವರ ಎದುರಾಳಿ ತಂಡದಿಂದ ಸತ್ಯ ನಾರಾಯಣ್ ಅವರ ನೇತೃತ್ವದಲ್ಲಿ ಕಣಕ್ಕಿಳಿದಿದ್ದವರೆಲ್ಲಾ ಠೇವಣಿ ಕಳೆದು ಕೊಂಡಿದ್ದಾರೆ. ಸತ್ಯನಾರಾಯಣ್ 371, ಮತ್ತಿವರ ತಂಡದ ಗುರಪ್ಪ228, ಅನಿತಾ 286, ಇಂದಿರಾ218, ಕರಿಬಸಮ್ಮ 231, ಗುರುದೇವ186 ತಾರಾ211, ತಿಪ್ಪೆಸ್ವಾಮಿ 294 ಪಂಚಾಕ್ಷರಿ 253 , ಮೂರ್ತಿನಾಯ್ಕ 250 ರವಿಕುಮಾರ್252, ರುದ್ರೇಶ್ 272, ಲಕ್ಷ್ಮಣ 237, ವಜ್ರಕಾಂತ್ 371, ಹೊನ್ನೇಶ್ 308 ಮತ ಪಡೆದು ಪರಾಜಿತರಾಗಿದ್ದಾರೆ.
ಸಂಘದ ಸ್ಥಾಪಕ ಅಧ್ಯಕ್ಷಾರಾಗಿರುವ ಮಹಾಬಲೇಶ್ವರ ಹೆಗಡೆ 3ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಜಿಲ್ಲಾ ಮಟ್ಟದಲ್ಲಿ ಪ್ರಾರಂಭವಾದ ಸಂಘವು ರಾಜ್ಯಮಟ್ಟಕ್ಕೆ ವಿಸ್ತಾರಗೊಂಡಿದ್ದು, ಈವರೆಗೆ 2ಸಾವಿರಕ್ಕೂ ಅಧಿಕ ನಿವೇಶನ ನೀಡಲಾಗಿದೆ. ಷೇರುದಾರ ಶಿಕ್ಷಕರಿಗೆ ಶಿವಮೊಗ್ಗ ನಗರ ವ್ಯಾಪ್ತಿ, ಸೋಗಾನೆ ಬಳಿಯ ಏರ್‌ಪೋರ್ಟ್ ಹತ್ತಿರ ಮತ್ತು ಬೆಂಗಳೂರಿನಲ್ಲಿ ನಿವೇಶನ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ.