ಮಾಜಿ ಸಚಿವ ಹಾಗೂ ಎಂಎಸ್ಐಲ್ ಅಧ್ಯಕ್ಷರೂ ಆದ ಸಾಗರ ಶಾಸಕ ಹರತಾಳು ಹಾಲಪ್ಪ ಅವರ ಪುತ್ರ ಚೇತನ್ ಕುಮಾರ್ ಅವರ ವಿವಾಹ ಬೆಂಗಳೂರಿನಲ್ಲಿ ಗುರುವಾರ ವಿಜೃಂಬಣೆಯಿಂದ ನೆರವೇರಿತು.
ರಾಜ್ಯದ ಗಣ್ಯಾತಿ ಗಣ್ಯರು ನೂತನ ದಂಪತಿ ಚೇತನ್ ಮತ್ತು ಮೇಘನಾ ಅವರಿಗೆ ಶುಭಹಾರೈಸಿದರು. ಪ್ರತಿಪಕ್ಷ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಆರ್. ಅಶೋಕ್ ,ಶಿವರಾಮ ಹೆಬ್ಬಾರ್ ಸೇರಿದಂತೆ ಸಂಪುಟದ ಹಲವು ಸದಸ್ಯರು, ಮಾಜಿ ಶಾಸಕ ಬಿ.ಸ್ವಾಮಿರಾವ್ ಕಲಾವಿದರು ಉದ್ಯಮಿಗಳು ಬಂಧುಗಳು ಹಲವು ಸ್ವಾಮೀಜಿಗಳು, ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನೂತನ ವಧುವರರಿಗೆ ಶುಭಕೋರಿದರು.
ಹಾಲಪ್ಪ ಪತ್ರಿ ಯಶೋಧ, ಬೀಗರಾದ ಜಯಪ್ರಕಾಶ್ ಮತ್ತು ಯಶೋದ ದಂಪತಿಗಳು ಅತಿಥಿಗಳನ್ನು ಬರಮಾಡಿಕೊಂಡರು