Malenadu Mitra
ರಾಜ್ಯ ಶಿವಮೊಗ್ಗ

ಶಾಂತವೇರಿ ಗೋಪಾಲಗೌಡರ ಚಿಂತನೆಗಳು ಇಂದಿಗೂ ಪ್ರಸ್ತುತ : ಆರಗ ಜ್ಞಾನೇಂದ್ರ

ಲಕ್ಷಾಂತರ ಜನರ ಬದುಕಿಗೆ ಭರವಸೆ ತುಂಬಿದ, ಭೂಮಿ ಹಕ್ಕು ಕೊಡಿಸಲು ಮಲೆನಾಡಿನಲ್ಲಿ ಹೊತ್ತಿಸಿದ ಕಿಡಿ ರಾಜ್ಯಾದ್ಯಂತ ಹರಡಿ ಸಮಸಮಾಜದ ಬದುಕಿಗೆ ಕಟ್ಟಿದ ಹೊಸ ಕನಸನ್ನು ನನಸು ಮಾಡಲು ಸಾಧ್ಯ ಎಂದು ತೋರಿಸಿಕೊಟ್ಟ ಕರ್ನಾಟಕ ರಾಜಕಾರಣದಲ್ಲಿ ತಮ್ಮದೇ ಆದ ವಿಶೇಷ ಛಾಪು ಮೂಡಿಸಿರುವ ಶಾಂತವೇರಿ ಗೋಪಾಲಗೌಡರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು ಗ್ರಾಮದಲ್ಲಿ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಶಾಂತವೇರಿ ಗೋಪಾಲಗೌಡರ ನೂತನ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಾಂತವೇರಿ ಗೋಪಾಲಗೌಡರ ರಾಜಕಾರಣವೆಂಬುದು ಬರಿಯ ಘೋಷಣೆಯ ನೀರಸವಾದ ಹೋರಾಟವಾಗಿರಲಿಲ್ಲ. ಇವರ ಉಳುವವನೇ ಹೊಲದೊಡೆಯ ಉದ್ಘೋಷಣೆಯ ಮೂಲಕ ರಾಜ್ಯದಲ್ಲಿ ಭೂ ಸುಧಾರಣೆ ಜಾರಿಗೆ ಬಂದಿತು. ಸುಮಾರು ೭.೩೦ ಲಕ್ಷಕ್ಕಿಂತಲೂ ಹೆಚ್ಚು ರೈತ ಕುಟುಂಬಗಳು ಭೂಮಾಲೀಕತ್ವ ಪಡೆಯಲು ಸಾಧ್ಯವಾಯಿತು ಎಂದರು.

ಶಾಂತವೇರಿ ಗೋಪಾಲಗೌಡರ ಒಡನಾಡಿಗಳು ಹಾಗೂ ಮಾಜಿ ಸಚಿವರು ಆದ ಕಾಗೋಡು ತಿಮ್ಮಪ್ಪ ಮಾತನಾಡಿ ಕರ್ನಾಟಕದಲ್ಲಿ ಸಮಾಜವಾದಿ ರಾಜಕಾರಣವನ್ನು ತಳಮಟ್ಟದಿಂದ ರೂಪಿಸಿ ಚಳುವಳಿಯ ರಾಜಕಾರಣ ಮತ್ತು ಶಾಸನಸಭೆಯ ರಾಜಕಾರಣ ಎರಡನ್ನೂ ಬೆಸೆದ ಧೀಮಂತ ರಾಜಕಾರಣಿ ಶಾಂತವೇರಿ ಗೋಪಾಲಗೌಡರು ಆಗಿದ್ದರು. ಕರ್ನಾಟಕದ ರಾಜಕಾರಣ ಗೋಪಾಲಗೌಡರಲ್ಲಿ ನಿಷ್ಟುರ ಪ್ರಾಮಾಣಿಕ ರಾಜಕಾರಣಿಯ ಮಾದರಿಯನ್ನು ಆಗಾಗ್ಗೆ ಹುಡುಕುತ್ತಿರುತ್ತದೆ. ಶಾಂತವೇರಿ ಗೋಪಾಲಗೌಡರ ಹಲವಾರು ಜನಪರ ಚಳುವಳಿಗಳು ಹಾಗೂ ಹೋರಾಟಗಳು ಅವರಲ್ಲಿ ದಣಿವರಿಯದ ಚಳುವಳಿಯ ಸ್ಪೂರ್ತಿ ಮೂಲವನ್ನು ಹುಡುಕುತ್ತಿರುತ್ತದೆ ಎಂದರು.
ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಬಿ. ಸ್ವಾಮಿ ರಾವ್. ಹಿರಿಯ ಸಮಾಜವಾದಿ ಮುಖಂಡ ಪುಟ್ಟಯ್ಯ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಪದ್ಮನಾಭ ಭಟ್. ಹೆದ್ದಾರಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತಾ ಗಂಗಾಧರ್. ಜೆಡಿಎಸ್ ರಾಜ್ಯ ಮುಖಂಡ ಆರ್. ಎ. ಚಾಬುಸಾಬ್ ಇನ್ನಿತರರಿದ್ದರು.
ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಅಧ್ಯಕ್ಷತೆ ವಹಿಸಿದ್ದರು.
ರಿಪ್ಪನ್ ಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಪತಿ ಹಳಗುಂದ ಸಮಸಮಾಜ ಮತ್ತು ಶಾಂತವೇರಿ ಗೋಪಾಲಗೌಡರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು

ಸಾಭಿಮಾನ ಹೋರಾಟ ಪ್ರಾಮಾಣಿಕತೆಯ ಸಂಕೇತ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು ಲಕ್ಷಾಂತರ ಜನರ ಬದುಕಿಗೆ ಭರವಸೆ ತುಂಬಿದರು. ತಮ್ಮ ಬದುಕಿನ ಕ್ಷಣ ಕ್ಷಣವನ್ನು ಜನರಿಗಾಗಿ ತೊಡಗಿಸಿಕೊಂಡ ಮಹಾನ್ ಚೇತನವಾಗಿದ್ದರು.

-ಕಿಮ್ಮನೆ ರತ್ನಾಕರ್, ಮಾಜಿ ಸಚಿವ

Ad Widget

Related posts

ರೈಲ್ವೆ ಯೋಜನೆಗಳಿಗೆ 112 ಕೋಟಿ ಅನುದಾನ

Malenadu Mirror Desk

ಆಗಸ್ಟ್ 27ರಂದು ಈಡಿಗ ಸಮುದಾಯ ಭವನದ ಗುದ್ದಲಿ ಪೂಜೆ

Malenadu Mirror Desk

ಬಿಜೆಪಿ ಚುನಾವಣೆ ವ್ಯಾಮೋಹದಿಂದ ಕೊರೊನ ಹೆಚ್ಚಳ: ಕಾಂಗ್ರೆಸ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.