ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶಿವಮೊಗ್ಗ ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣದಲ್ಲಿ 21 ದಿನಗಳ ಈಜು, ಲಾನ್ಟೆನ್ನಿಸ್ ಹಾಗೂ ಸ್ಕೇಟಿಂಗ್ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.
ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು , ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣದಲ್ಲಿ ನಗರದಲ್ಲೇ ಏಕೈಕ ಅಂತರಾಷ್ಟ್ರೀಯ ಮಟ್ಟದ ಈಜುಕೊಳ, ಲಾನ್ಟನ್ನಿಸ್ ಮತ್ತು ಸ್ಕೇಟಿಂಗ್ ರಿಂಗ್ ಅಂಕಣಗಳು, ತೆರೆದ ವ್ಯಾಯಾಮ ಶಾಲೆಯನ್ನೊಳಗೊಂಡಿದೆ ಹಾಗೂ ಸುರಕ್ಷಿತವಾಗ ವಾಕಿಂಗ್ ಪಥ ಮತ್ತು ಜಿಮ್ ವ್ಯವಸ್ಥೆ ಇದೆ. ಹಾಗೂ ಸಿಂಥೆಟಿಕ್ ಲಾನ್ ಕೆಲಸ ಕೂಡ ಆಗುತ್ತಿದ್ದು ಇನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
ವಿಶೇಷ ಈಜು ಶಿಬಿರ:
ನಗರದಲ್ಲಿರುವ ಅಂತರಾಷ್ಟ್ರೀಯ ಗುಣಮಟ್ಟದ ಏಕೈಕ ಈಜುಕೊಳ ಇದಾಗಿದ್ದು, ಇಲ್ಲಿ 1ನೇ ಶಿಬಿರವು ಏ.3ರಿಂದ 26ರವರೆಗೆ ಹಾಗೂ 2ನೇ ಶಿಬಿರವು ಮೇ 2 ರಿಂದ26 ರವರೆಗೆ ತಲಾ 21 ದಿನ ವಿಶೇಷ ಈಜು ಶಿಬಿರ ಕೈಗೊಳ್ಳಲಾಗಿದೆ.
ಅಂತರಾಷ್ಟ್ರೀಯ ಗುಣಮಟ್ಟದ 50*25 ಅಳತೆಯ 10 ಲೈನ್ಸ್ನ್ನು ಈಜುಕೊಳ ಹೊಂದಿದೆ. ಮಕ್ಕಳು, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ಸಮಯ ನಿಗದಿಯಾಗಿದೆ. ಮಕ್ಕಳಿಗೆ ಪ್ರತ್ಯೇಕ ಬೇಬಿ ಪೂಲ್ ಸಹ ಇದೆ. ನುರಿತ ಈಜು ತರಬೇತುದಾರರಿಂದ ತರಬೇತಿ ನೀಡಲಾಗುವುದು. 21 ದಿನಗಳ ವಿಶೇಷ ಈಜು ತರಬೇತಿ ಶಿಬಿರವನ್ನು ಹೊರತುಪಡಿಸಿ ಮಾಸಿಕ ತರಬೇತಿ ಶಿಬಿರವನ್ನು ಸಹ ನೀಡಲಾಗುವುದು. ವಾಹನ ಪಾರ್ಕಿಂಗ್, ಪ್ರತ್ಯೇಕ ಸ್ನಾನಗೃಹ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇದೆ ಎಂದು ಮಾಹಿತಿ ನೀಡಿದರು.
ಲಾನ್ಟೆನ್ನಿಸ್ ಮತ್ತು ಸ್ಕೇಟಿಂಗ್ ಶಿಬಿರ:
ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣದಲ್ಲಿರುವ ಲಾನ್ಟನ್ನಿಸ್ ಮತ್ತು ಸ್ಕೇಟಿಂಗ್ ರಿಂಗ್ ಅಂಕಣದಲ್ಲಿ ಮಕ್ಕಳು, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸಮಯದಲ್ಲಿ ನುರಿತ ಲಾನ್ಟೆನ್ನಿಸ್ ತರಬೇತುದಾರರಿಂದ 21c ದಿನಗಳ ವಿಶೇಷ ಲಾನ್ಟೆನ್ನಿಸ್ ಮತ್ತು ಸ್ಕೇಟಿಂಗ್ ತರಬೇತಿ ಶಿಬಿರ ನಡೆಸಲಾಗುವುದು. ಇದಲ್ಲದೇ ಮಾಸಿಕ ತರಬೇತಿ ಶಿಬಿರ ಕೂಡ ಸಂಘಟಿಸಲಾಗುವುದು.
ಈ ಬೇಸಿಗೆ ಶಿಬಿರದಲ್ಲಿ ಸ್ಮಿಮ್ಮಿಂಗ್, ಲಾನ್ಟೆನ್ನಿಸ್ ಮತ್ತು ಸ್ಕೇಟಿಂಗ್ನ ಬೆಳಿಗ್ಗೆ ನಾಲ್ಕು ಹಾಗೂ ಸಂಜೆ ನಾಲ್ಕು ಬ್ಯಾಚ್ಗಳು ನಡೆಯಲಿವೆ. ಪ್ರತಿ ಆಟದ ತರಬೇತಿಗೆ ರೂ.1900 ಶುಲ್ಕ ನಿಗದಿಗೊಳಿಸಲಾಗಿದೆ. ಪ್ರತಿ ಸೋಮವಾರ ರಜೆ ಇದ್ದು, ಶಿಬಿರದ ಪ್ರವೇಶಕ್ಕಾಗಿ ಮೊಬೈಲ್ ಸಂಖ್ಯೆಗಳಾದ 9743820293 (ಈಜು) 7019475379, 9686419812, (ಟೆನ್ನಿಸ್) 72259867739 (ಸ್ಕೇಟಿಂಗ್)ನ್ನು ಸಂಪರ್ಕಿಸಬಹುದೆಂದು ಅವರು ತಿಳಿಸಿದರು.
ಸಾಗರ ಈಜುಕೊಳ :
ಸಾಗರ ನಗರದ ವಿಜಯನಗರ1ನೇ ತಿರುವಿನಲ್ಲಿ 25*20ಮೀಟರ್ ಅಳತೆಯ 8ಲೈನ್ಸ್ ಹೊಂದಿರುವ ವ್ಯವಸ್ಥಿತವಾದ ಈಜುಕೊಳ ನಿರ್ಮಾಣವಾಗಿದ್ದು, ಇಲ್ಲಿಯೂ ಸಹ 21 ದಿನಗಳ ಬೇಸಿಗೆ ಈಜು ತರಬೇತಿ ಶಿಬಿರವನ್ನು ಏಪ್ರಿಲ್ 3ರಿಂದ ಮೊದಲನೇ ಶಿಬಿರ ಮತ್ತು ಮೇ 2 ರಿಂದ ಎರಡನೇ ಶಿಬಿರವನ್ನು ಆರಂಭಿಸಲಾಗುವುದು. ತರಬೇತಿ ಶುಲ್ಕ ರೂ.1500 ಇದೆ. ಬೇಸಿಗೆ ಶಿಬಿರ ಹೊರತಾಗಿ 15ವರ್ಷ ಒಳಗಿನವರಿಗೆ 3 ತಿಂಗಳಿಗೆ ರೂ.2200, ಒಂದು ವರ್ಷಕ್ಕೆ ರೂ5500/- ಹಾಗೂ ೧೫ ವರ್ಷ ಮೇಲ್ಪಟ್ಟವರಿಗೆ ಮೂರು ತಿಂಗಳಿಗೆ ರೂ2500 ಹಾಗೂ ಒಂದು ವರ್ಷಕ್ಕೆ ರೂ.7200 ನಿಗದಿಪಡಿಸಲಾಗಿದೆ. ಪ್ರವೇಶಕ್ಕಾಗಿ ಮೊ.ಸಂ: 9731233184 ನ್ನು ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ, ಕ್ರೀಡಾ ಸಂಕೀರ್ಣ ಸಮಿತಿಯ ಸದಸ್ಯ ಗೌತಮ್ ಇತರರು ಇದ್ದರು.