Malenadu Mitra
ರಾಜ್ಯ ಶಿವಮೊಗ್ಗ

ಆ ಕ್ಷಣಕ್ಕೆ ಸಿಕ್ಕ ಮಾಹಿತಿಯಂತೆ ಆರಗ ಹೇಳಿಕೆ, ಪ್ರತಿಪಕ್ಷದವರ ಆರೋಪಕ್ಕೆ ಅರ್ಥವಿಲ್ಲ: ಈಶ್ವರಪ್ಪ

ಆ ಕ್ಷಣಕ್ಕೆ ಸಿಕ್ಕ ಮಾಹಿತಿ ಆದರಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದು, ಸರಿಯಾದ ಮಾಹಿತಿ ಸಿಕ್ಕ ಬಳಿಕ ಪ್ರಾಮಾಣಿಕ ಹೇಳಿಕೆ ನೀಡಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ಆರಗ ಪರ ಬ್ಯಾಟಿಂಗ್ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದವರು ವಿರೋಧ ಮಾಡುವುದಕ್ಕೇ ಇರೋದು. ಅವರು ಈ ವಿಷಯವನ್ನು ಯಾಕೆ ದೊಡ್ಡದು ಮಾಡುತ್ತಾರೊ ಗೊತ್ತಿಲ್ಲ. ನಿರಪರಾಧಿ ಚಂದ್ರುವಿನ ಕೊಲೆಯಾಗಿದೆ. ಗೂಂಡಾಗಿರಿ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಹೇಳಿಕೆಯನ್ನು ವಿಪಕ್ಷದವರು ನೀಡಬೇಕಿತ್ತು. ಮೊನ್ನೆ ಕುಮಾರಸ್ವಾಮಿಯವರು ಕೂಡ ಈ ರೀತಿಯ ಹೇಳಿಕೆ ನೀಡಿ, ಬಳಿಕ ಕ್ಷಮೆ ಕೋರಿದ್ದರು. ಜ್ಞಾನೇಂದ್ರ ಭಾವನಾತ್ಮಕವಾಗಿ ಮಾತನಾಡುತ್ತಾರೆ. ಹಿಂದೆಯೇ ಇದೇ ರೀತಿ ಹೇಳಿಕೆ ನೀಡಿದ್ದರು ಆಗಲೂ ಪ್ರತಿಪಕ್ಷದವರು ಆರೋಪಿಸಿದ್ದರು. ಮೊದಲ ಹೇಳಿಕೆ ಸರಿ ಎಂದು ಅವರೇನು ವಾದ ಮಾಡಿಲ್ಲ ಹೀಗಿರುವಾಗ ಇದನ್ನು ಬೆಳೆಸುವುದು ತರವಲ್ಲ ಎಂದರು.
ಅಧಿಕೃತ ವಿಪಕ್ಷ ಸ್ಥಾನವೂ ದೊರೆಯಲ್ಲ:
ರಾಷ್ಟ್ರಭಕ್ತರು ಯಾರು, ರಾಷ್ಟ್ರದ್ರೋಹಿಗಳು ಯಾರು ಎಂಬುದನ್ನು ಮುಂದಿನ ಚುನಾವಣೆಯಲ್ಲಿ ಮತದಾರರೇ ತೀರ್ಮಾನಿಸುತ್ತಾರೆ. ಕಾಂಗ್ರೆಸ್ ತನ್ನ ನಡವಳಿಕೆ ಬದಲಿಸಿಕೊಳ್ಳದಿದ್ದಲ್ಲಿ ಮುಂದೆ ಅವರಿಗೆ ಅಧಿಕೃತ ವಿಪಕ್ಷ ಸ್ಥಾನವೂ ದೊರೆಯುವುದಿಲ್ಲ ಎಂದು ಹೇಳಿದರು.
ಕೋಮುವಾದವನ್ನು ಬಿಜೆಪಿ ಬೆಳೆಸುತ್ತಿಲ್ಲ. ಕಾನೂನುಗಳನ್ನು ಗೌರವಿಸಿಯೇ ಬಿಜೆಪಿ ನಾಯಕರು ಪ್ರತಿಕ್ರಿಯಿಸುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಆರೋಪ ಹೊರಿಸುವುದೇ ಒಂದು ಕೆಲಸವಾಗಿದೆ.
ರಾಷ್ಟ್ರೀಯ ವಿಷಯಗಳು ಬಂದಾಗ ಹೇಗೆ ಮಾತಾಡಬೇಕು, ಏನು ಮಾತಾಡಬೇಕೆಂದು ಬಿಜೆಪಿಗೆ ಗೊತ್ತಿದೆ. ಕಾಂಗ್ರೆಸ್ ನವರಿಂದ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ.ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ನಡೆಯಲಿದೆ ಎಂದು ಹೇಳಿದರು.

ಬೆಲೆ ಏರಿಕೆ ಇಂದು ಅನಿವಾರ್ಯವಾಗಿದೆ. ಕೊರೋನಾದಂತಹ ಸಂಕಷ್ಟದ ಜವಾಬ್ದಾರಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊತ್ತುಕೊಂಡಿವೆ. ಮತ್ತು ಈಗಿರುವ ಪರಿಸ್ಥಿತಿಯಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಿದೆ. ಆದರೂ, ಹಲವು ಪರಿಹಾರಗಳನ್ನು ನೀಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರ ಮತ್ತು ರೈತರ ಪರವಾಗಿ ನಿಂತಿವೆ
ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು

Ad Widget

Related posts

ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

Malenadu Mirror Desk

ಸಂಸದರು ಪಬ್ಲಿಸಿಟಿ ಸ್ಟಂಟ್ ನ ಹಳೆ ಚಾಳಿ ಬಿಡಲಿ : ಮಧು ಬಂಗಾರಪ್ಪ

Malenadu Mirror Desk

ಕಚೇರಿ ಮುತ್ತಿಗೆ ಮುಂದಕ್ಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.