ಶಿವಮೊಗ್ಗ ನಗರದಲ್ಲಿ ಗಾಂಜಾ ಸೇವನೆ ಮತ್ತು ಮಾರಾಟವನ್ನು ತಡೆಗಟ್ಟುವಲ್ಲಿ ಪೊಲೀಸರ ದಿಟ್ಟ ಕ್ರಮ ಕೈಗೊಳ್ಳಬೇಕೆಂದು ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಕೆ.ಬಿ.ಪ್ರಸನ್ನ ಕುಮಾರ್ ಆಗ್ರಹಿಸಿದ್ದಾರೆ.
ನಗರದಲ್ಲಿ ಮತ್ತೂರಿನಿಂದ ಸೂಳೈಬೈಲಿಗೆ ಹೋಗಿ ವಾಪಸ್ಸಾಗುತ್ತಿದ್ದಾಗ ಕೆಲವರು ಕಾರಿನ ಗಾಜುಗಳನ್ನು ಒಡೆದು ಹಾಕಿದ್ದಾರೆ. ಆಗ ಸ್ಥಳದಲ್ಲಿ ಬಹಳಷ್ಟು ಜನ ಸೇರಿದ್ದಾರೆ. ಅದೇ ಸಂದರ್ಭದಲ್ಲಿ ಮತ್ತೊಂದು ಗುಂಪು ಕೆಲವು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದೆ. ನಂತರ ಪೊಲೀಸರ ಸ್ಥಳಕ್ಕೆ ತೆರಳಿ ಕಾರಿನ ಗಾಜು ಒಡೆದವರನ್ನು ಬಂಧಿಸಿದ್ದಾರೆ. ಅದೇ ರೀತಿ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದವರನ್ನೂ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ನಗರದಲ್ಲಿ ಪದೆ ಪದೇ ಇಂತಹ ಘಟನೆಗಳ ನಡೆಯುತ್ತಲೇ ಇವೆ. ಇದಕ್ಕೆ ಗಾಂಜಾ ಸೇವನೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಗಾಂಜಾ ಮಾರಾಟ, ಸೇವನೆ ಹಾಗೂ ಓಸಿಯಂತಹ ಚಟುವಟಿಕೆಗಳನ್ನು ಹತ್ತಿಕ್ಕಿದ್ದಲ್ಲಿ ಇಂತಹ ಘಟನೆಗಳ ನಡೆಯವುದಿಲ್ಲ. ಪೊಲೀಸರ ವೈಫಲ್ಯ ಈ ವಿಚಾರದಲ್ಲಿ ಎದ್ದು ಕಾಣುತ್ತಿದೆ ಎಂದಿದ್ದಾರೆ.
ಗಾಂಜಾ ಸೇವನೆ ಮಾಡಿ ಬೈಕ್‌ಗಳನ್ನ ಸುಡುವುದು, ಕಾರುಗಳಿಗೆ ಕಲ್ಲು ತೂರಾಟ ನಡೆಸುವ ಸಂದರ್ಭಗಳನ್ನು ಕೆಲವರು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಕೋಮಗಲಭೆಗಳು ಉಂಟಾಗುವಂತೆ ಮಾಡುತ್ತಾರೆ. ಇದರಿಂದ ವರ್ತಕರು ಸೇರಿದಂತೆ ಜನ ಸಾಮಾನ್ಯರಿಗೆ ತೊಂದರೆಯಾಗತ್ತವೆ. ಜೊತೆಗೆ ಶಿವಮೊಗ್ಗಕ್ಕೂ ಕೆಟ್ಟ ಹೆಸರು ಬರುವಂತಾಗುತ್ತದೆ ಎಂದು ಹೇಳಿದ್ದಾರೆ.
ಕೃತ್ಯಗಳ ನಡೆದ ನಂತರ ಆರೋಪಿಗಳನ್ನು ಪೊಲೀಸರು ಬಂಧಿಸುವುದು, ಅವರಿಗೆ ಶಿಕ್ಷೆ ಕೊಡಿಸುವುದು ಆಗುತ್ತದೆ. ಅದರ ಬದಲು ಗಾಂಜಾ, ಓಸಿಗಳು ನಡೆಯದಂತೆ ತಡೆಗಟ್ಟಿದಲ್ಲಿ ಪುಂಡರ ಕೈಗೆ ಹಣ ಸಿಗುವುದಿಲ್ಲ. ಆಗ ಅವರುಗಳು ಕಲ್ಲು ಹೊಡೆಯುವ, ಬೆಂಕಿ ಹಚ್ಚುವ ಕೃತ್ಯಗಳನ್ನು ಮಾಡವುದಿಲ್ಲ. ಈ ನಿಟ್ಟಿನಲ್ಲಿ ಪೊಲೀಸರು ಮುಂದಾಗಬೇಕಿದೆ ಎಂದಿದ್ದಾರೆ. ಕೂಡಲೇ ಪೊಲೀಸರು ಗಾಂಜಾ, ಓಸಿಗಳಿಗೆ ಕಡಿವಾಣ ಹಾಕಬೇಕು. ಇದರಲ್ಲಿ ಯಾರೇ ತೊಡಗಿದ್ದರೂ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ಮಾನಸಿಕತೆಯನ್ನು ಪೊಲೀಸರು ಬಗ್ಗುಬಡಿಯಬೇಕು. ಮತಾಂಧ ಮುಸ್ಲಿಂ ಗೂಂಡಾಗಳಿಂದ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಮಿತಿಮೀರಿದೆ. ಶಿವಮೊಗ್ಗದಲ್ಲಿ ಹಲವೆಡೆ ಈ ತರಹದ ಘಟನೆಗಳು ನಡೆಯುತ್ತಿವೆ. ಜಿಲ್ಲಾ ರಕ್ಷಣಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು.
ಎಸ್.ದತ್ತಾತ್ರಿ , ಬಿಜೆಪಿ ಮುಖಂಡ