Malenadu Mitra
ರಾಜ್ಯ ಶಿವಮೊಗ್ಗ

ಡಿಜಿಟಲ್ ಮೀಡಿಯಾದಿಂದ ಯುವಕರಿಗೆ ಉತ್ತಮ ಭವಿಷ್ಯ , ಮುಖ್ಯಮಂತ್ರಿ ಸಲಹೆಗಾರ ಪ್ರಶಾಂತ್ ಪ್ರಕಾಶ್ ಅಭಿಪ್ರಾಯ

ಮುಂದಿನ 10ವರ್ಷಗಳಲ್ಲಿ ಅಂತರ್ಜಾಲ ಮತ್ತು ತಂತ್ರಾಂಶಗಳು ಉತ್ತಮ ಉದ್ಯೋಗ ಸೃಷ್ಠಿಸುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸಲಿದ್ದು, ದೇಶದ ಯುವ ಜನತೆಗೆ ಆಶಾಕಿರಣವಾಗಲಿದೆ ಎಂದು ಬೆಂಗಳೂರಿನ ಎಕ್ಸೆಲ್ ಸಂಸ್ಥೆ ಸಂಸ್ಥಾಪಕ ಪಾಲುದಾರ ಮತ್ತು ಮುಖ್ಯಮಂತ್ರಿಗಳ ಸಲಹೆಗಾರರಾದ ಪ್ರಶಾಂತ್ ಪ್ರಕಾಶ್ ಅಭಿಪ್ರಾಯಪಟ್ಟರು.
ಶಿವಮೊಗ್ಗ ಪೆಸಿಟ್ ಕಾಲೇಜ್‌ನಲ್ಲಿ ಇಂಜಿನಿಯರಿಂಗ್ ಮತ್ತು ಎಂಬಿಎ ಪದವೀಧರರಿಗೆ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಡಿಜಿಟಲ್ ಮೀಡಿಯಾದಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ವಿಪುಲ ಅವಕಾಶವಿದೆ. ಲಿಂಕ್ಡ್ ಇನ್, ಫೋರ್ಡ್ ಕಾಸ್ಟ್ ವೆಬಿನಿಯರ್‌ಗಳು ಉದ್ಯೋಗವನ್ನು ಕಲ್ಪಿಸುತ್ತಿವೆ. ಅವುಗಳನ್ನು ಸದುಪಯೋಗಗೊಳಿಸುವ ಬಗ್ಗೆ ಗೊತ್ತಿದ್ದರೆ ಸಾಕು ಎಂದು ತಿಳಿಸಿದರು.
ಡಿಜಿಟಲ್ ಮೀಡಿಯಾ ದೇಶದಲ್ಲಿಆರ್ಥಿಕತೆಯನ್ನೇ ಬದಲಾಯಿಸುತ್ತಿದ್ದು, ಮುಂದಿನ ೨೫ ವರ್ಷದಲ್ಲಿ ರಾಷ್ಟ್ರವು ಕಳೆದ ೭೫ ವರ್ಷಗಳಲ್ಲಿ ಸಾಧಿಸಲು ಆಗದೇ ಇರುವ ಕೆಲಸಗಳನ್ನು ಸಾಧ್ಯವಾಗಿಸಲಿದೆ. ವಿಶ್ವದ ಭೂಪಟದಲ್ಲಿ ಭಾರತಕ್ಕೆ ಎತ್ತರದ ಸ್ಥಾನ ಸಿಗಲಿದೆ. ಯುವಕರಿಗೆ ಆಯ್ಕೆಯೂ ಹೆಚ್ಚಾಗಿದೆ. ಸಣ್ಣ ಉದ್ಯಮವನ್ನು ಸ್ಥಾಪಿಸಿದರೆ ಮಾತ್ರ ಸಾಧನೆ ಮಾಡಿದಂತಲ್ಲ. ಬೇರೆ ಉದ್ಯಮದಲ್ಲಿ ಕೆಲಸ ಮಾಡಿ ತಾವೂ ಬೆಳೆದು ಉದ್ಯಮವೂ ಬೆಳೆಯುವಂತೆ ಮಾಡುವುದೂ ಸಹ ಸಾಧನೆಯೇ ಆಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಟ್ರಸ್ಟಿ ಮತ್ತು ಜಂಟಿ ಖಜಾಂಚಿ ಬಿ.ವೈ. ವಿಜಯೇಂದ್ರ ಮಾತನಾಡಿ, ಪದವಿ ಪಡೆದ ನಂತರ ಯಾವ ದಾರಿಯಲ್ಲಿ ಹೋಗಬೇಕೆಂಬುದನ್ನು ಮೊದಲೇ ನಿರ್ಧಾರ ಮಾಡಬೇಕು. ಯಾವುದೇ ಕ್ಷೇತ್ರದಲ್ಲಿ ಕೂಡ ಸಫಲವಾಗಬೇಕಾದರೆ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ಯಶಸ್ಸಿಗೆ ಶ್ರಮ ಮತ್ತು ಸಾಧನೆ ಅವಶ್ಯಕ ಎಂಪ್ಲಾಯಿ ಆಗ ಬೇಡಿ, ಕೆಲಸ ಕೊವುವ ಎಂಪ್ಲಾ ಯರ್ಸ್ ಆಗಿ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಪಿಇಎಸ್ ಟ್ರಸ್ಟ್ ನ ಸಿಸಿಎ ಡಾ. ನಾಗರಾಜ್ ಆರ್., ಪ್ರಾಂಶುಪಾಲ ಡಾ. ಚೈತನ್ಯ ಕುಮಾರ್ ಎಂ.ವಿ., ಪಿಇಎಸ್ ಟ್ರಸ್ಟಿ ಉಮಾದೇವಿ ಎಸ್.ವೈ., ತೇಜಸ್ವಿನಿ ರಾಘವೇಂದ್ರ, ಸುಭಾಷ್, ಆದಿತ್ಯ ಮೊದಲಾದವರಿದ್ದರು.

ಪೆಸಿಟ್ ಶಿಕ್ಷಣ ಸಂಸ್ಥೆಯನ್ನು ಬೆಂಗಳೂರು ಸೇರಿದಂತೆ ಎಲ್ಲಿಯಾದರೂ ಆರಂಭಿಸಬಹುದಾಗಿತ್ತು. ಆದರೆ ನಮ್ಮ ತಂದೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಲೆನಾಡಿನ ಯುವಕರಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಬೇಕೆಂಬ ಕನಸಿತ್ತು. ಹಾಗಾಗಿ ಇಲ್ಲಿಯೇ ಸಂಸ್ಥೆಯನ್ನು ಆರಂಭಿಸಲಾಯಿತು. ತಮ್ಮ ಸಹೋದರ ಬಿ.ವೈ.ರಾಘವೇಂದ್ರ ಅವರ ಶ್ರಮ ದಿಂದಾಗಿ ಇಂದು ಸಂಸ್ಥೆ ಬೃಹತ್ ಆಗಿ ಬೆಳೆದಿದೆ
ಬಿ.ವೈ.ವಿಜಯೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ

Ad Widget

Related posts

ರಾತ್ರಿತನಕ ಚೆನ್ನಿ ಹೆಸರಿದೆ,ಬೆಳಗ್ಗೆ ಬದಲಾದರೆ ನಮಗೆ ಗೊತ್ತಿಲ್ಲ!
ಕುತೂಹಲ ಉಳಿಸಿಕೊಂಡಿರುವ ಬಿಜೆಪಿ ಶಿವಮೊಗ್ಗ ಅಭ್ಯರ್ಥಿ

Malenadu Mirror Desk

ಬಡವರ ಸಂಗಾತಿ ಡಾ. ಈಶ್ವರಪ್ಪ ನಿಧನ

Malenadu Mirror Desk

ಶಿವಮೊಗ್ಗ ಅದ್ಧೂರಿ ಹಿಂದೂಮಹಾ ಸಭಾ ಗಣಪತಿ ವಿಸರ್ಜನೆ
ವೈಭವದ ರಾಜಬೀದಿ ಉತ್ಸವ, ಕುಣಿದು ಕುಪ್ಪಳಿಸಿದ ಯುವ ಸಮೂಹ, ಕಲಾತಂಡಗಳ ಆಕರ್ಷಣೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.