Malenadu Mitra
ರಾಜ್ಯ ಶಿವಮೊಗ್ಗ

ಶರಾವತಿ ಸಂತ್ರಸ್ಥರ ಸಮಸ್ಯೆ ಇತ್ಯರ್ಥಕ್ಕೆ ಒಂದು ವರ್ಷ ಕಾಲಮಿತಿ, ವಿಶೇಷ ಜಿಲ್ಲಾಧಿಕಾರಿ ನೇತೃತ್ವದ ತಂಡ ರಚನೆ

ಶರಾವತಿ ಸಂತ್ರಸ್ಥರಿಗೆ ಪುನರ್‌ವಸತಿ ಕಲ್ಪಿಸಲು ಸರಕಾರಿ ವಿಶೇಷ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯನ್ನು ರಚನೆ ಮಾಡಿದ್ದು, ಒಂದು ವರ್ಷದೊಳಗೆ ಸಂತ್ರಸ್ಥರ ಸ್ಥಿತಿಗತಿಯ ಬಗ್ಗೆ ಸಮೀಕ್ಷೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ.  
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ  ಶಿವಮೊಗ್ಗ ತಾಲ್ಲೂಕಿನ ಅಗಸವಳ್ಳಿಯಲ್ಲಿ  ಶರಾವತಿ , ಚಕ್ರ ವರಾಹಿ ಸಂತ್ರಸ್ಥರಿಗೆಂದು ಮೀಸಲಿಟ್ಟಿರುವ  ೨೦೩೩ ಎಕರೆಯ ಕಂದಾಯ ಜಮೀನಿನ ಬಗ್ಗೆ ಚರ್ಚೆ ನಡೆಯಿತು.  ಮೇ ಅಂತ್ಯದ ಒಳಗೆ  ಜಾಗದಲ್ಲಿ ಅನುಭವದಲ್ಲಿರುವ ಮೂಲ ಸಂತ್ರಸ್ಥರು , ಹೆಚ್ಚುವರಿಯಾಗಿ ಒತ್ತುವರಿ ಮಾಡಿಕೊಂಡಿರುವವರು , ಯಾವ ದಾಖಲೆಯು ಇಲ್ಲದೆ ಅನಧಿಕೃತವಾಗಿ ಅತಿಕ್ರಮಣ ಮಾಡಿಕೊಂಡಿರುವವರ ಸಮಗ್ರ ಮಾಹಿತಿಯನ್ನು ತಯಾರು ಮಾಡಲು ಸಭೆಯಲ್ಲಿ ಸೂಚಿಸಲಾಯಿತು.

ಜಿಲ್ಲೆಯ ಶಿವಮೊಗ್ಗ,ಹೊಸನಗರ, ಸಾಗರ, ತೀರ್ಥಹಳ್ಳಿ ಹಾಗೂ ಸೊರಬ ತಾಲೂಕಿನಲ್ಲಿರುವ ಶರಾವತಿ ಸಂತ್ರಸ್ತರ ಭೂಮಿಯನ್ನು ಸರ್ವೆ ಮಾಡಿ ಅಲ್ಲಿನ ಸರಕಾರ ಮತ್ತು ನ್ಯಾಯಾಲಯದ ಮಟ್ಟದಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಸಮಿತಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ. ಸಾಗರ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ , ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಎಡಿಸಿ ನಾಗೇಂದ್ರ ಹೊನ್ನಳ್ಳಿ, ತಹಸೀಲ್ದಾರ್ ಡಾ.ನಾಗರಾಜ್, ಕರ್ನಾಟಕ ಕಾಂಪೋಸ್ಟ ಅಭಿವೃದ್ದಿ ನಿಗಮದ  ಉಪಾಧ್ಯಕ್ಷರಾದ ಬೇಗುವಳ್ಳಿ ಸತೀಶ್ ,ಜಿಲ್ಲಾರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್, ಪ್ರಮುಖರಾದ ಬೆಳ್ಳೂರು ತಿಮ್ಮಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಸಾಲೆಕೊಪ್ಪ ರಾಮಚಂದ್ರ , ಸಂತ್ರಸ್ಥರ ಪರವಾಗಿ ಹೂವಪ್ಪ , ಹಣಗೆರೆ ಗ್ರಾ ಪಂ ಅಧ್ಯಕ್ಷರಾದ ಯಶೋದ , ಉಪಾಧ್ಯಕ್ಷರಾದ ಅಶೋಕ , ಸದಸ್ಯರಾದ ರಾಘವೇಂದ್ರ ಮತ್ತಿತರರು ಭಾಗವಹಿಸಿದ್ದರು.

ವಿಶೇಷ ಜಿಲ್ಲಾಧಿಕಾರಿ ತಂಡ

ಶರಾವತಿ ಸಂತ್ರಸ್ಥರ ಪುನರ್ವಸತಿ ಕಾರ್ಯಕ್ಕಾಗಿ ಸರಕಾರ ವಿಶೇಷ ಜಿಲ್ಲಾಧಿಕಾರಿ ನೇತೃತ್ವದ ತಂಡವನ್ನು ರಚಿಸಿ ಆದೇಶ ಹೊರಡಿಸಿದೆ. ವಿಶೇಷ ಜಿಲ್ಲಾಧಿಕಾರಿ ನೇಮಕವಾಗುವ ತನಕ ಶಿವಮೊಗ್ಗ ಅಪರ ಜಿಲ್ಲಾಧಿಕಾರಿ ಜವಾಬ್ದಾರಿ ನಿರ್ವಹಿಸಲಿದ್ದು, ಸಹಾಯಕ ಅರಣ್ಯಾಧಿಕಾರಿ, ೬ ಮಂದಿ ಸರ್ವೆಯರುಗಳು ಹಾಗೂ ಒಬ್ಬ ದ್ವಿತೀಯ ದರ್ಜೆ ಸಹಾಯಕರ ಹುದ್ದೆಯನ್ನು ಸೃಜಿಸಿ ಸರಕಾರ ಆದೇಶ ಹೊರಡಿಸಿದೆ.
ಒಂದು ವರ್ಷದ ಅವಧಿಯ ಕಾಲಮಿತಿಯಲ್ಲಿ ಸಮಿತಿಯು ಇಡೀ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಯಧುಕುಮಾರ್ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

Ad Widget

Related posts

ಡಾ.ಶಿವರಾಮಕೃಷ್ಣ ವಿಚಾರದಲ್ಲಿ ಇದೆಂತಾ ಕುಚೋದ್ಯ ?

Malenadu Mirror Desk

ಮಗಳೇ ಧೃತಿ….ಧೈರ್ಯ ತಂದುಕೊ……ಅಪ್ಪು ಮಗಳಿಗೆ ಅಭಿಮಾನಿಗಳ ಸಾಂತ್ವನ

Malenadu Mirror Desk

ಗೃಹ ಸಚಿವ ಸ್ಥಾನಕ್ಕೆ ತಕ್ಕ ಪ್ರಬುದ್ದತೆ ತೋರಿಸಿ: ಕಿಮ್ಮನೆ ಸಲಹೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.