Malenadu Mitra
ರಾಜ್ಯ ಶಿವಮೊಗ್ಗ

ಡ್ರಗ್ಸ್ ಹಾಗೂ ಮೂಲಭೂತವಾದದಿಂದಾಗಿ ಶಿವಮೊಗ್ಗದಲ್ಲಿ ಭೀತಿ ಹುಟ್ಟಿಸುವ ಕೆಲಸ ,ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಹರಿಕೃಷ್ಣ ಆರೋಪ

ಶಿವಮೊಗ್ಗದಲ್ಲಿ ಹರ್ಷ ಕೊಲೆಯ ಘಟನೆಯಿಂದ ಸೂಳೆಬೈಲಿನ ಘಟನೆವರೆಗೆ ಕಳೆದ ಆರು ತಿಂಗಳಿನಲ್ಲಿ ೭-೮ ಘಟನೆ ಆಗಿದೆ. ಇದಕ್ಕೆ ಡ್ರಗ್ ಮಾಫಿಯಾ ಮತ್ತು ಮೂಲಭೂತ ವಾದ ಎರಡು ಪ್ರಮುಖ ಕಾರಣವಾಗಿದ್ದು, ಯಾರೆ ಸಿಕ್ಕರೂ ಅವರನ್ನ ಗುರಿ ಮಾಡಿಕೊಂಡು ಹಲ್ಲೆ ನಡೆಸಿ, ಸಮಾಜದಲ್ಲಿ ಭೀತಿ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದು ಯುವ ಬಿಜೆಪಿ ಜಿಲ್ಲಾ ಅಧ್ಯಕ್ಷ ಹರಿಕೃಷ್ಣ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೀರ್ ಅಹ್ಮದ್ ಕಾಲೋನಿ, ಮಿಳಘಟ್ಟ, ಮೊದಲಾದ ಭಾಗಗಳಲ್ಲಿ ವಿನಾಕಾರಣ ಕೆಲ ಪುಂಡರು ಈ ಕಿಡಿಗೇಡಿಗಳು ಸಾಮಾನ್ಯರ ಮೇಲೂ ಹಲ್ಲೆ ನಡೆಸ್ತಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಡ್ರಗ್ ಮಾಫಿಯಾ ಮತ್ತು ಮೂಲಭೂತವಾದದ ಹಿನ್ನೆಲೆ ಕಾರಣವಾಗಿದ್ದು, ಇಲ್ಲಿ ಸಂಘಟನೆಯರನ್ನಷ್ಟೆ ಗುರಿಯಾಗಿಲ್ಲ, ಜನಸಾಮಾನ್ಯರಿಗೂ ತೊಂದರೆಯಾಗುತ್ತಿದೆ ಎಂದು ದೂರಿದ್ರು. ಇಸ್ಲಾಂನ ನೂನ್ಯತೆಗಳು ಚರ್ಚೆಗೆ ಬಂದಾಗ ಇಂತಹ ಘಟನೆಗಳು ನಡೆಯುತ್ತಿವೆ. ಈ ರೀತಿಯ ಪ್ರಕರಣಗಳನ್ನು ಸೂಕ್ಷ್ಮವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ ಅವರು ಹಲವೆಡೆ ಕೆಲ ಮುಸ್ಲಿಮರು ಅನೈತಿಕವಾಗಿ ಮನೆಗಳನ್ನ ಕಟ್ಟಿಕೊಂಡಿದ್ದಾರೆ. ಈ ಬಗ್ಗೆ ಪಾಲಿಕೆ ಹಾಗೂ ಕಂದಾಯ ಇಲಾಖೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಬಿ.ಎಸ್. ಯಡಿಯೂರಪ್ಪ ಹಾಗೂ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ ಸಾಧನೆಗೆ ಯುವಕರು ಸಹ ಸ್ಪಂದಿಸಿದ್ದು, ಯುವ ಮೋರ್ಚಾ ಜಿಲ್ಲೆಯಲ್ಲಿ ಧನಾತ್ಮಕವಾಗಿ ತಂಡ ರಚಿಸಿಕೊಂಡು ಸಂಘಟನೆಯಾಗಿ ಬೆಳೆಯುತ್ತಿದೆ ಎಂದರು.
ಜಿಲ್ಲೆಯ ಅಭಿವೃದ್ಧಿ ಮಧ್ಯದಲ್ಲಿ ಸಮಾಜದಲ್ಲಿ ಭೀತಿ ಉಂಟು ಮಾಡುವ ಘಟನೆಗಳು ನಡೆಯುತ್ತಿವೆ. ಹರ್ಷ ಕೊಲೆ, ಸೂಳೆಬೈಲ್ ಹಾಗೂ ಇನ್ನಿತರ ಕಡೆ ಹಲ್ಲೆಗಳು ಹೆಚ್ಚಾಗುತ್ತಿದ್ದು, ಕಳೆದ ೬ ತಿಂಗಳಿಂದ ಕಾರಣವಿಲ್ಲದೇ ಹಾಗೂ ವೈಯಕ್ತಿಕ ದ್ವೇಷವಿಲ್ಲದೇ ಇಂತಹ ಘಟನೆಗಳು ನಡೆಯುತ್ತಿವೆ.ಡ್ರಗ್ಸ್ ಪ್ರಕರಣಗಳಲ್ಲಿ ಡೋಪಿಂಗ್ ಟೆಸ್ಟ್ ಅನ್ನು ಕಡ್ಡಾಯ ಮಾಡಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಸ್ಲಿಂ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿರುವ ಬಡಾವಣೆಗಳಲ್ಲೇ ಇಂತಹ ಘಟನೆಗಳು ನಡೆಯುತ್ತಿದ್ದು, ಅಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕು ಸಮಾಜಘಾತುಕ ಶಕ್ತಿಗಳಿಗೆ ಕಡಿವಾಣ ಹಾಕಬೇಕು. ಇದಕ್ಕಾಗಿ ವಿಶೇಷ ತಂಡ ರಚಿಸಿ ಹತೋಟಿಗೆ ತರಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಗಣೇಶ್ ಬಿಳಕಿ, ಸುಹಾಸ್ ಶಾಸ್ತ್ರಿ, ಪಾಲಿಕೆ ಸದಸ್ಯ ಈ. ವಿಶ್ವಾಸ್, ಪ್ರಮುಖರಾದ ದರ್ಶನ್, ಅಭಿಷೇಕ್, ರಾಜೇಶ್, ಅಶೋಕ್, ವಿನ್ಸೆಂಟ್ ರೋಡ್ರಿಗಸ್ ಉಪಸ್ಥಿತರಿದ್ದರು.

Ad Widget

Related posts

ದನ ಕಾಯ್ತಿದಿರಾ ನೀವು?, ಸಚಿವರ ಆವಾಜ್

Malenadu Mirror Desk

ಡಾ.ಬಿ.ಆರ್. ಅಂಬೇಡ್ಕರ್ ದೇಶ ಕಂಡ ಮಹಾನ್ ಚೇತನ:ಎಂ.ಕೆ.ಪ್ರಾಣೇಶ್

Malenadu Mirror Desk

ಬೆಲೆಕುಸಿತ:ಶುಂಠಿ ಬೆಳೆಗಾರ ಆತ್ಮಹತ್ಯೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.