Malenadu Mitra
ರಾಜ್ಯ ಶಿವಮೊಗ್ಗ

ಭಗವಾದ್ವಜ ಹೇಳಿಕೆಗೆ ಈಗಲೂ ಬದ್ಧ ಎಂದ ಈಶ್ವರಪ್ಪ , ಹೇಳಿಕೆ ವಿರುದ್ಧ ದೂರು ನೀಡಿರುವ ಆಪ್ ಸಂಸದ

ಕೆಂಪು ಕೋಟೆಯ ಮೇಲೆ ಭಗವಾಧ್ವಜವನ್ನು ನೂರು ವರ್ಷನೋ, ಇನ್ನೂರು ವರ್ಷನೋ, ಐನೂರು ವರ್ಷನೋ ಯಾರಾದ್ರೂ ಹಾರಿಸ್ತಾರೆ, ಹಾರಿಸಬಹುದು ಎಂದು ನಾನು ಹೇಳಿದ್ದೆ, ಆ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ ಎಂದು ಮಾಜಿ ಸಚಿವ, ಶಾಸಕ ಕೆ.ಎಸ್ ಈಶ್ವರಪ್ಪನವರು ಪುನರುಚ್ಚರಿಸಿದರು.
ಈಶ್ವರಪ್ಪ ಈ ಹಿಂದೆ ನೀಡಿದ್ದ ಹೇಳಿಕೆ ದೇಶವಿರೋಧಿ ಹೇಳಿಕೆಯಾಗಿದ್ದು ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೆಹಲಿಯ ಆಮ್‌ಆದ್ಮಿ ಪಾರ್ಟಿಯ ರಾಜ್ಯಸಭಾ ಸದಸ್ಯ ದೂರು ಕೊಟ್ಟಿರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಈಶ್ವರಪ್ಪ ಪ್ರತಿಕ್ರಿಯಿಸಿದರು.
ನಾನು ಕಾನೂನಿನ ವಿರುದ್ಧವಾಗಿ ನಡೆದುಕೊಂಡಿಲ್ಲ. ಈಗ ಯಾರೋ ಪೇಪರ್ ನಲ್ಲಿ ಟಿವಿಯಲ್ಲಿ ತಮ್ಮ ಹೆಸರು ಬರಲಿ ಎನ್ನುವ ಕಾರಣಕ್ಕೆ ಮತ್ತೆ ವಿಷಯ ತಗೊಂಡು ಕೇಸ್ ಹಾಕಿದ್ದಾರೆ. ಇಂತಹ ನೂರು ಕಂಪ್ಲೇಂಟ್ ಕೊಟ್ಟರೂ ನಾನು ಜಗ್ಗುವುದಿಲ್ಲ ಎಂದು ಈಶ್ವರಪ್ಪ ಸವಾಲ್ ಹಾಕಿದರು. ರಾಷ್ಟ್ರಧ್ವಜ, ತ್ರಿವರ್ಣಧ್ವಜದ ಬಗ್ಗೆ ಅಪಮಾನ ಮಾಡಿದ್ರೆ ಅವರು ರಾಷ್ಟ್ರದ್ರೋಹಿ ಎಂದು ಸದನದಲ್ಲಿಯೇ ನಾನು ಹೇಳಿದ್ದೇನೆ . ಸಿಎಂ ಕೂಡ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ರೆ ಬಿಡೋದಿಲ್ಲ ಎಂದಿದ್ದಾರೆ. ಆದರೆ ಇವರ್ಯಾರೋ ಕಂಪ್ಲೇಂಟ್ ಕೊಟ್ರು, ಕೇಸ್ ಹಾಕಿದ್ರು ಅಂದ ತಕ್ಷಣ ಬಂಧಿಸ್ತಾರಾ ನಾನೇನು ಕುರಿ,ಕೋಳಿ ಅಲ್ಲ ಎಂದು ಈಶ್ವರಪ್ಪ ಹೇಳಿದರು.
ರಾಜ್ಯ ಸಭೆ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕುತಂತ್ರ ರಾಜಕಾರಣ ಮಾಡುತ್ತಿದೆ ಎಂದು ನೇರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಗೆಲ್ಲುವುದಿಲ್ಲ ಎಂದು ಗೊತ್ತಿದ್ದೂ ಮುಸ್ಲಿಮರಿಗೆ ಟಿಕೆಟ್ ನೀಡಿ ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಒಂದು ಕಡೆ ಜೆಡಿಎಸ್ ಮುಖಂಡರು ಬಿಜೆಪಿಗೆ ಬೆಂಬಲ ನೀಡಬಹುದು. ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷದ ಅತೃಪ್ತರು ಬಿಜೆಪಿಯ ಮೂರನೇ ಅಭ್ಯರ್ಥಿಗೆ ಮತ ಹಾಕಿದರೂ ಆಶ್ವರ್ಯವಿಲ್ಲ. ಹಾಗಾಗಿ ಬಿಜೆಪಿ ಮೂರು ಸ್ಥಾನಗಳನ್ನು ಗೆಲ್ಲುತ್ತದೆ. ಕಾಂಗ್ರೆಸ್ ತನ್ನಲ್ಲಿರುವ ಉಳಿದ ಮತಗಳನ್ನು ಉಳಿಸಿಕೊಳ್ಳುತ್ತದೋ, ಜೆಡಿಎಸ್‌ಗೆ ಕೊಡುತ್ತದೋ ಅದು ನಮಗೆ ಗೊತ್ತಿಲ್ಲ. ಅದು ಆ ಪಕ್ಷಕ್ಕೆ ಬಿಟ್ಟ ವಿಚಾರ. ಆದರೆ, ಸೋಲುತ್ತಾರೆ ಎಂದು ಗೊತ್ತಿದ್ದೂ ಎರಡನೇ ಅಭ್ಯರ್ಥಿಯನ್ನಾಗಿ ಮುಸ್ಲಿಮರನ್ನು ಕಣಕ್ಕಿಳಿಸಿರುವುದು ಆ ಜನಾಂಗಕ್ಕೆ ಮಾಡಿದ ಅವಮಾನ ಎಂದು ಹೇಳಿದರು.

Ad Widget

Related posts

ಸೂರ್ಯ ನಮಸ್ಕಾರಕ್ಕೂ ಸ್ವಾತಂತ್ರ್ಯೋತ್ಸವಕ್ಕೂ ಏನು ಸಂಬಂಧ ; ಡಿಎಸ್ ಎಸ್ ಗುರುಮೂರ್ತಿ ಪ್ರಶ್ನೆ

Malenadu Mirror Desk

ನಾಪತ್ತೆಯಾಗಿದ್ದ ಗಿರಿರಾಜ್ ಸಿಕ್ಕಿದ್ದು ಹೇಗೆ ಗೊತ್ತಾ ?

Malenadu Mirror Desk

ಹೋರಾಟದ ಸಾಗರಕ್ಕೆ,ನೂರಾರು ನದಿಗಳು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.