ಸಿದ್ದರಾಮಯ್ಯನಿಗೆ ಹುಚ್ಚು ಪ್ರಚಾರ ಪಡೆಯುವ ಬಯಕೆ ಹೆಚ್ಚಿದೆ ಅವರ ಈ ಕಾಯಿಲೆಗೆ ಯಾವುದೇ ಆಸ್ಪತ್ರೆಯಲ್ಲಿಯೂ ಔಷಧಿ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯಾದ್ಯಂತ ‘ಚಡ್ಡಿ ಸುಡುವ ಅಭಿಯಾನ’ ಆರಂಭಿಸುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಹುಚ್ಚನ ಕಟ್ಟಿಕೊಂಡು ಪಾರ್ಟಿ ಕಟ್ಟೋದು, ಸರ್ಕಾರ ಮಾಡೋದು ಹೇಗೆ ಅಂತ ಅವರ ಪಕ್ಷದ ನಾಯಕರು ಇಂದು ಗೋಳಾಡುತ್ತಿದ್ದಾರೆ. ಈ ಹುಚ್ಚ ತನ್ನ ಬೆಂಬಲಿಗರ ಮೂಲಕವೇ ತಾನೇ ಸಿಎಂ ಎಂದು ಹೇಳಿಸಿಕೊಂಡು ಓಡಾಡ್ತಾನೆ. ಇಂತಹ ಹುಚ್ಚನನ್ನು ನಾನು ದೇಶದಲ್ಲಿಯೇ ಕಂಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಆರ್‌ಎಸ್‌ಎಸ್ ಚಡ್ಡಿ ಹಾಕಿ ಸಂಸ್ಕಾರ ಪಡೆದ ಮೋದಿ ದೇಶ ಆಳುತ್ತಿದ್ದಾರೆ. ರಾಮನಾಥ್ ಕೋವಿಂದ್ ರಾಷ್ಟ್ರಪತಿಯಾಗಿದ್ದಾರೆ. ಹಲವರು ಪ್ರಭಾವಿ ನಾಯಕರಾಗಿ, ಮುಖ್ಯಮಂತ್ರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಈ ಚಡ್ಡಿ ಹಳ್ಳಿಯಿಂದ ದಿಲ್ಲಿಯವರೆಗೂ ಹೋಗಿದೆ. ಭಾರತೀಯ ಸಂಸ್ಕೃತಿಯನ್ನು ಚಡ್ಡಿ ನಮಗೆಲ್ಲಾ ಕಲಿಸಿಕೊಟ್ಟಿದೆ. ಚಡ್ಡಿಯ ಪ್ರಭಾವ ಇಂದು ವಿಶ್ವದಾದ್ಯಂತ ಹರಡಿದೆ ಎಂದರು.
ಆರ್‌ಎಸ್‌ಎಸ್ ನಿಷೇಧ ಮಾಡುವ ಸಾಹಸಕ್ಕೆ ಕೈಹಾಕಿ ಇಂದಿರಾಗಾಂಧಿ ಅಧಿಕಾರ ಕಳೆದುಕೊಂಡರು. ಆರ್‌ಎಸ್‌ಎಸ್ ಚಡ್ಡಿ ಸುಡೋದಕ್ಕೆ ಕೈ ಹಾಕಿದರೆ ಹುಷಾರ್. ಸಿದ್ದರಾಮಯ್ಯಗೆ ಸೋನಿಯಾ ಹೇಳಲ್ಲ, ರಾಹುಲ್‌ಗೆ ಬುದ್ಧಿ ಇಲ್ಲ. ಡಿ.ಕೆ.ಶಿವಕುಮಾರ್ ಕೂಡ ಬುದ್ದಿ ಹೇಳಲ್ಲ. ಹುಚ್ಚ ಸಿದ್ದರಾಮಯ್ಯಗೆ ಹೇಳೋರು, ಕೇಳೋರು ಯಾರೂ ಇಲ್ಲ. ಸಿದ್ದರಾಮಯ್ಯ ಇಪ್ಪತ್ತು ಕಡೆ ನಿಲ್ಲಲ್ಲಿ, ಎಲ್ಲಾ ಕಡೆ ನಾವು ಸೋಲಿಸುತ್ತೇವೆ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಗೆ ರಸ್ತೆಯಲ್ಲಿ ಹೋಗೋ ನಾಯಿನೂ ಗೌರವ ಕೊಡೋದಿಲ್ಲ. ವಿಪಕ್ಷ ನಾಯಕ ಸ್ಥಾನದಲ್ಲಿರಲು ಯೋಗ್ಯವಲ್ಲದ ಸಿದ್ದರಾಮಯ್ಯ ಆಯೋಗ್ಯ. ರಾವಣ ಹನುಮಂತನ ಸುದ್ದಿಗೆ ಬಂದು, ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿದ ಲಂಕೆಯೇ ಸುಟ್ಟುಹೋಯಿತು. ಹಾಗೆಯೇ ಈಗ ಕಾಂಗ್ರೆಸ್ ಆರ್‌ಎಸ್‌ಎಸ್ ಸುದ್ದಿಗೆ ಬಂದಿದೆ. ಹೀಗಾಗಿ ಕಾಂಗ್ರೆಸ್ ಸುಟ್ಟುಹೋಗಲಿದೆ. ಆರ್‌ಎಸ್‌ಎಸ್‌ನಲ್ಲಿ ಹಿಂದುಳಿದವರು ದಲಿತರು ಪದಾಧಿಕಾರಿಗಳಾಗಿಲ್ಲ. ಆದರೆ, ಆರ್‌ಎಸ್‌ಎಸ್‌ನಲ್ಲಿ ಇರುವವರು ಎಲ್ಲರೂ ಹಿಂದೂಗಳೇ. ಆರ್‌ಎಸ್‌ಎಸ್‌ನಲ್ಲಿ ಜಾತಿಯೇ ಇಲ್ಲ. ಕಾಂಗ್ರೆಸ್‌ನಲ್ಲಿ ಇರುವ ಎಲ್ಲರೂ ಇದೀಗ ಮುಸಲ್ಮಾನರಾಗಲಾರಂಭಿಸಿದ್ದಾರೆ. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿದೆ. ಮುಂದಿನ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿಯೂ ಇರುವುದಿಲ್ಲ ಎಂದು ವ್ಯಂಗ್ಯವಾಡಿದರು.
ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನ ಗೆಲ್ಲುವುದು ನಿಶ್ಚಿತ. ಡಿ.ಕೆ. ಶಿವಕುಮಾರ್, ಸಿದ್ಧರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ ಒಟ್ಟಾಗಿ ಬಿಜೆಪಿ ಸೋಲಿಸುವುದೇ ಗುರಿ ಎಂದು ಎಷ್ಟೇ ಪ್ರಯತ್ನಪಟ್ಟರೂ ಬಿಜೆಪಿಯನ್ನು ಸೋಲಿಸಲಾಗುವುದಿಲ್ಲ ಎಂದರು.
ಮೇಯರ್ ಸುನಿತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಸೂಡಾ ಅಧ್ಯಕ್ಷ ನಾಗರಾಜ್, ಪಾಲಿಕೆ ಸದಸ್ಯ ಜ್ಞಾನೇಶ್ವರ್, ಚನ್ನಬಸಪ್ಪ, ಕೆ.ವಿ. ಅಣ್ಣಪ್ಪ ಮೊದಲಾದವರಿದ್ದರು.
ಆರ್‌ಎಸ್‌ಎಸ್‌ನಲ್ಲಿ ಹಿಂದುಳಿದವರು ದಲಿತರು ಪದಾಧಿಕಾರಿಗಳಾಗಿಲ್ಲ. ಆದರೆ, ಆರ್‌ಎಸ್‌ಎಸ್‌ನಲ್ಲಿ ಇರುವವರು ಎಲ್ಲರೂ ಹಿಂದೂಗಳೇ. ಆರ್‌ಎಸ್‌ಎಸ್‌ನಲ್ಲಿ ಜಾತಿಯೇ ಇಲ್ಲ. ಕಾಂಗ್ರೆಸ್‌ನಲ್ಲಿ ಇರುವ ಎಲ್ಲರೂ ಇದೀಗ ಮುಸಲ್ಮಾನರಾಗಲಾರಂಭಿಸಿದ್ದಾರೆ.
–ಕೆ.ಎಸ್.ಈಶ್ವರಪ್ಪ