ಅಶ್ವಿನಿ ಮೇಕೋವರ್ ಮತ್ತು ಬ್ಯೂಟಿಪಾರ್ಲರ್ ಸಂಸ್ಥೆ ವತಿಯಿಂದ ಶಿವಮೊಗ್ಗ ನಗರದಲ್ಲಿ ಅತಿ ಕಡಿಮೆ ದರದಲ್ಲಿ ಯುವತಿಯರಿಗೆ ಮೇಕಪ್ ತರಬೇತಿ ನೀಡಲಾಗುವುದು ಎಂದು ಸಂಸ್ಥೆಯ ಮಾಲೀಕರಾದ ಎಸ್.ಎಂ. ಅಶ್ವಿನಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರು ಸ್ವಾಭಿಮಾನದಿಂದ ಸ್ವಾವಲಂಬನೆಯಿಂದ ಬದುಕಲು ಸ್ವ ಉದ್ಯೋಗ ಕಲಿಯಬೇಕಾಗಿರುವುದ ಅನಿವಾರ್ಯವಾಗಿದೆ. ಬ್ಯೂಟಿ ಪಾರ್ಲರ್ ಕೋರ್ಸ್‌ನಿಂದ ಮಹಿಳೆಯರು ಆರ್ಥಿಕಾಭಿವೃದ್ಧಿಯನ್ನು ಸಾಧಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆಯು ಮಹಿಳೆಯರಿಗಾಗಿ ಜೂನ್ ೨೦ರಿಂದ ಕೋರ್ಸ್ ಅನ್ನು ಆರಂಭಿಸುತ್ತಿದೆ ಎಂದರು.
ಇದು ಒಂದು ತಿಂಗಳ ಕೋರ್ಸ್ ಆಗಿದ್ದು, ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಹೇಳಿಕೊಡಲಾಗುತ್ತಿದ್ದರೂ ಲಕ್ಷಾಂತರ ರೂ. ಶುಲ್ಕವಾಗುತ್ತದೆ. ಮಧ್ಯಮ ಮತ್ತು ಬಡವರ್ಗದವರು ಕಲಿಯಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆ ಶಿವಮೊಗ್ಗದ ಲಕ್ಷ್ಮೀ ಟಾಕೀಸ್ ಸರ್ಕಲ್ ಬಳಿ ಇರುವ ಲಕ್ಷ್ಮೀ ಕಾಂಪ್ಲೆಕ್ಸ್‌ನ ಎರಡನೇ ಮಹಡಿಯಲ್ಲಿ ಮಹಿಳೆಯರಿಗೆ ಹೊರೆಯಾಗದಂತೆ ಸುಲಭರೀತಿಯಲ್ಲಿ ಎಲ್ಲ ರೀತಿಯ ಮೇಕಪ್ ತರಬೇತಿ ನೀಡಲಾಗುವುದು. ಇದನ್ನು ನಗರದ ಮತ್ತು ಜಿಲ್ಲೆಯ ಮಹಿಳೆಯರು ಬಳಸಿಕೊಂಡು ಸ್ವ ಉದ್ಯೋಗ ಆರಂಭಿಸಿ ತಮ್ಮ ಕುಟುಂಬ ಆರ್ಥಿಕ ಸ್ಥಿತಿಯನ್ನು ಉತ್ತಮ ಗೊಳಿಸಬಹುದು ಎಂದರು.
ಹೆಚ್ಚಿನ ವಿವರಕ್ಕೆ ಮತ್ತು ನೊಂದಣಿಗಾಗಿ ಮೊ: 99012 16093 ಗೆ ಸಂಪರ್ಕಿಸಬಹುದಾಗಿದೆ ಎಂದರು.
ಪತ್ರಿಕಾಗೊಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯೆಕ್ಷೆ ಶೀಲಾ ಇದ್ದರು.