Malenadu Mitra
ರಾಜ್ಯ ಶಿವಮೊಗ್ಗ

ಕುವೆಂಪುರವರನ್ನು ಅವಮಾನಿಸಿದ ಪ್ರಕರಣ ಖಂಡಿಸಿ,ಜೂ.15 ರಂದು ಕುಪ್ಪಳಿಯ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆ

ಪಠ್ಯಪುಸ್ತಕ ಪರಿಷ್ಕರಣೆಯಲ್ಲಿನ ಬದಲಾವಣೆ ಹಾಗೂ ಕುವೆಂಪುರವರನ್ನು ಅವಮಾನಿಸಿದ ಪ್ರಕರಣ ಖಂಡಿಸಿ,ಜೂ.೧೫ ರಂದು ಕುಪ್ಪಳಿಯ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪರಿಷ್ಕರಣೆಯಿಂದ ಕುವೆಂಪು, ಅಂಬೇಡ್ಕರ್ ಸಹಿತ ಹಲವಾರು ಗಣ್ಯರನ್ನು ಅವಮಾನ ಮಾಡಲಾಗಿದೆ. ಅನೇಕ ಸಮಾಜಗಳಿಗೆ ಅನ್ಯಾಯವಾಗಿದೆ. ಜಾತಿ, ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಕಾರ್ಯ ಸರಕಾರದಿಂದ ನಡೆದಿದೆ ಎಂದು ಆರೋಪಿಸಿದರು.
ಜೂ.೧೫ರಂದು ಅಂದು ಬೆಳಗ್ಗೆ ೭ ಗಂಟೆಗೆ ಕುವೆಂಪು ಸಮಾದಿಗೆ ಪುಷ್ಪನಮನ ಸಲ್ಲಿಸಿ ಪಾದಯಾತ್ರೆ ಆರಂಭವಾಗಲಿದೆ. ಸುಮಾರು ೧೮ ಕಿಮೀ ಈ ಜಾಥಾ ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ತಿರ್ಥಹಳ್ಳಿಯ ಟೌನ್ ಹಾಲ್‌ಗೆ ಬಂದು ಬಹಿರಂಗ ಸಭೆ ನಡೆಸಲಾಗುತ್ತದೆ ಎಂದರು.
 ಇದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಬಸವರಾಜ್ ಹೊರಟ್ಟಿ, ವೈ.ಎಸ್.ವಿ. ದತ್ತಾ ಸೇರಿದಂತೆ ವಿವಿಧ ನಾಯಕರು, ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ, ರಮೇಶ್ ಹನಗವಾಡಿ, ರಾಜೇಂದ್ರ ಚೆನ್ನಿ, ರೈತ ಹೋರಾಟಗರರಾದ ಎಚ್.ಆರ್. ಬಸವರಾಜಪ್ಪ, ಕೆ.ಟಿ. ಗಂಗಾಧರ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದರು.
 ತಾವು ಶಿಕ್ಷಣ ಸಚಿವರಾಗಿದ್ದಾಗ ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಮಾಡಿದ್ದು, ಅದರಲ್ಲಿ ೨೭ ಉಪ ಸಮಿತಿಗಳಿದ್ದು, ಎರಡೂವರೆ ವರ್ಷ ಕಾಲ ದೀರ್ಘ ಅಧ್ಯಯನ ನಡೆಸಿ ಪರಿಷ್ಕರಣೆ ಮಾಡಲಾಗಿತ್ತು. ಆದರೆ ರೋಹಿತ್ ಚಕ್ರತೀರ್ಥ ಸಮಿತಿ ದಿಢೀರ್ ಹುಟ್ಟಿಕೊಂಡು ಪಠ್ಯಪುಸ್ತಕ ಪರಿಷ್ಕರಣೆ ಮಾಡಿ, ಸಮಿತಿಯೂ ವಿಸರ್ಜನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
  ಸಮಿತಿ ವಿಸರ್ಜನೆಯಾಗಿದೆಯಾದರೂ ಅದ್ವಾನವಾದ ಪಠ್ಯಗಳು ಹಾಗೆಯೇ ಉಳಿದುಕೊಂಡಿವೆ. ಪರಿಷ್ಕರಣೆ ಸಂಬಂಧ ಇದುವರೆಗೂ ಪಿಡಿಎಫ್ ಬಿಡುಗಡೆ ಮಾಡಿಲ್ಲ. ಚಕ್ರತಿರ್ಥ ಅತ್ಯಂತ ಕ್ರೋರತನದಿಂದ ತಮ್ಮನ್ನು ತಾವೇ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅವರ ವಿದ್ಯಾರ್ಹತೆ ಏನು ? ಬೋಧಾನಾ ಅನುಭವ ಏನೆಂಬುದು ಯಾರಿಗೂ ಗೊತ್ತಿಲ್ಲ ಎಂದರು.
     ಪರಿಷ್ಕರಣೆ ಸಂಬಂಧಾಗಿ ವಿಧಾನ ಸಭೆಯಲ್ಲಿ ಚರ್ಚೆಯಾಗಬೇಕಿತ್ತು. ಇದು ಆಗದಿದ್ದರೆ ವಿಷಯ ತಜ್ಞರ ಜತೆಗಾದರೂ ಚರ್ಚಿಸಬೇಕಿತ್ತು. ಇದನ್ನು ಮಾಡಿಲ್ಲ. ಬರಗೂರು ರಾಮಚಂದ್ರಪ್ಪ ಪರಿಷ್ಕರಣೆ ಮಾಡಿದಾಗ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿದ್ದರು. ಆಗ ಅವರು ಏನನ್ನೂ ಮಾತನಾಡಲಿಲ್ಲ. ಆದರೆ ಈಗ ಅಂದಿನ ಪರಿಷ್ಕರಣೆ ತಪ್ಪಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್, ವಕೀಲ ಕೆ.ಪಿ.ಶ್ರೀಪಾಲ್, ಸಾಹಿತಿ ಚಂದ್ರೇಗೌಡ ಇದ್ದರು.

ಮಾಜಿ ಸಿಎಂ ಸಿದ್ದರಾಮಯ್ಯ,ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಬಸವರಾಜ್ ಹೊರಟ್ಟಿ, ವೈ.ಎಸ್.ವಿ. ದತ್ತಾ ಸೇರಿದಂತೆ ವಿವಿಧ ನಾಯಕರು, ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ, ರಮೇಶ್ ಹನಗವಾಡಿ, ರಾಜೇಂದ್ರ ಚೆನ್ನಿ, ರೈತ ಹೋರಾಟಗರರಾದ ಎಚ್.ಆರ್. ಬಸವರಾಜಪ್ಪ, ಕೆ.ಟಿ. ಗಂಗಾಧರ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ

ಕಿಮ್ಮನೆ ರತ್ನಾಕರ್

Ad Widget

Related posts

ಶಿವಮೊಗ್ಗ ಶಾಂತ, ನಿಷೇಧಾಜ್ಞೆ ಮುಂದುವರಿಕೆ, ಭದ್ರಾವತಿಯಲ್ಲಿ ಅಘೋಷಿತ ಬಂದ್ , ಐದು ಎಫ್‌ಐಆರ್ ದಾಖಲು, ಗಾಯಾಳು ಭೇಟಿ ಮಾಡಿದ ಸಂತೋಷ್‌ಜಿ

Malenadu Mirror Desk

ರೋಹಿತ್ ಚಕ್ರತೀರ್ಥ ಬಂಧಿಸಲು ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

Malenadu Mirror Desk

ಜ್ಞಾನ, ವಿಜ್ಞಾನ, ಕೈಗಾರಿಕಾ ಹೊಸ ಸಮಾಜ ಕಟ್ಟಿದವರು ನಾರಾಯಣಗುರು: ಡಾ.ಮೋಹನ್ ಚಂದ್ರಗುತ್ತಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.