Malenadu Mitra
ರಾಜ್ಯ ಶಿವಮೊಗ್ಗ

ನೂತನ ಶಿಕ್ಷಣ ನೀತಿ ಬಹು ಶಿಸ್ತಿನ ಕಲಿಕಾ ಕ್ರಮದ ಅಧ್ಯಯನದ ವಿಧಾನವನ್ನು ಹೊಂದಿದೆ

 ನೂತನ ಶಿಕ್ಷಣ ನೀತಿ ಬಹು ಶಿಸ್ತಿನ ಕಲಿಕಾ ಕ್ರಮದ ಅಧ್ಯಯನದ ವಿಧಾನವನ್ನು ಹೊಂದಿದೆ ಎಂದು ಬಳ್ಳಾರಿ   ಕೃಷ್ಣದೇವರಾಯ ವಿ.ವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ರಾಬರ್ಟ್ ಜೋಸ್ ತಿಳಿಸಿದರು.
ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಕುವೆಂಪು ವಿ.ವಿ ಇಂಗ್ಲಿಷ್ ಅಧ್ಯಯನ ಮಂಡಳಿ,ಹಾಗೂ ಇಂಗ್ಲಿಷ್ ಅಧ್ಯಾಪಕರ ವೇದಿಕೆ ಇವರ ಪ್ರಾಯೋಜಕತ್ವದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ  ಅನ್ವಯ ಇಂಗ್ಲಿಷ್ ಪಠ್ಯಕ್ರಮ ಕುರಿತು ಸಾಧ್ಯತೆಗಳು ಮತ್ತು ಸವಾಲುಗಳ ಬಗ್ಗೆ  ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
 ನೂತನ ಶಿಕ್ಷಣ ನೀತಿಯಲ್ಲಿ ಅಧ್ಯಾಪಕರು ಒಂದು ರೀತಿಯ ಕತ್ತಲೆಯಲ್ಲಿ ಇದ್ದಾರೆ.ಅವರೆಲ್ಲ ಈ ಸವಾಲಿಗಳಿಂದ ಹೊರಬರಬೇಕು. ಉತ್ತಮಗೊಳ್ಳುವ ಕಡೆ ಎಲ್ಲರು ಶ್ರಮಿಶಬೇಕಿದೆ. ಪಠ್ಯಗಳು,ಬೋಧನೆ, ಭೌತಿಕ ತರಗತಿಗಳು ಸವಲತ್ತುಗಳನ್ನು ಸರ್ಕಾರ ನೀಡಿದೆ, ನಾವು ಕೈ ಜೋಡಿಸಿ ಸಾದಿಸಬೇಕಿದೆ ಎಂದರು.
ನೂತನ ಪಾಲಿಸಿಯು ವಿದ್ಯಾರ್ಥಿಗಳು ಏನು ಕಲಿಯಬೇಕು ಎಂಬುದಕ್ಕಿಂತ ಹೇಗೆ ಕಲಿಯಬೇಕು. ಎಂಬುದನ್ನು  ಕಲಿಸುವ ಉದ್ದೇಶವನ್ನು ಹೊಂದಿದೆ. ಭಾರತದ ಜ್ಞಾನಶಾಸ್ತ್ರ ಮೂಲಕ ಭಾರತದ ಪರಂಪರೆ, ತತ್ವಜ್ಞಾನವನ್ನು ಕಲಿಸುವ ಆಶಯವನ್ನು ಹೊಂದಿದೆ ಎಂದರು. 
 ಇಂಗ್ಲಿಷ್ ಅಧ್ಯಯನ ಮಂಡಳಿ ಅಧ್ಯಕ್ಷರಾದ ಡಾ ಬಿ ಎಚ್ ನಾಗ್ಯಾನಾಯ್ಕ ಮಾತನಾಡಿ,ಇಂಗ್ಲಿಷ್ ಪಠ್ಯಕ್ರಮವನ್ನು ರೂಪಿಸುವುದರ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂಗ್ಲಿಷ್ ಪ್ರಾಧ್ಯಾಪಕ ಡಾ. ರಾಮಪ್ರಸಾದ್ ಬಿ.ವಿ ಅವರು ಭಾಷಾಶಾಸ್ತ್ರದ ಬೋಧನೆ ಕುರಿತು  ಹಾಗೂ ಭಾಷಾಶಾಸ್ತ್ರದ ಪ್ರಾಧ್ಯಾಪಕ ಮೇಟಿ ಮಲ್ಲಿಕಾರ್ಜುನ ಅವರು ಪ್ರಬಂಧ ಮಂಡಿಸಿದರು.
ಕಾರ್ಯಾಗಾರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಇಂಗ್ಲಿಷ್ ಪಠ್ಯಕ್ರಮದ ಸಾಧಕ ಭಾದಕಗಳು, ಬೋಧನೆ ಮತ್ತು ಕಲಿಕಾ ವಿಧಾನಗಳ ಕುರಿತು ಚರ್ಚೆ, ಭಾಷಾ ಶಾಸ್ತ್ರದ ವಿಷಯ ಬೋಧನೆ ಕುರಿತು ತರಬೇತಿ, ಪರೀಕ್ಷೆ ಮತ್ತು ಮೌಲ್ಯಮಾಪನ ವಿಧಾನಗಳ ಕುರಿತ ಕಾರ್ಯಾಗಾರ,  ಪಠ್ಯಕ್ರಮವನ್ನು ರೂಪಿಸುವ ಬಗೆ ಮತ್ತು ಕಲಿಕಾ ವಿಧಾನಗಳ ಕುರಿತು ನುರಿತ  ಸಂನ್ಮೂಲ ವ್ಯಕ್ತಿಗಳಿಂದ ಚರ್ಚೆ ನಡೆಯಿತು.
ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಧನಂಜಯ ಕೆ.ಬಿ  ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಡಾ. ಅವಿನಾಶ್ ಟಿ, ಕಾರ್ಯದರ್ಶಿ ಇಂಗ್ಲಿಷ್ ಅಧ್ಯಾಪಕರ ವೇದಿಕೆ ಇವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಾಗಾರದಲ್ಲಿ ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಎಮ್.ಕೆ. ವೀಣಾ ಉಪಸ್ಥಿತರಿದ್ದರು.ಶೋಭಾ ಭಟ್ ಪ್ರಾರ್ಥಿಸಿದರು. ನಿಸರ್ಗ ಕಾರ್ಯಕ್ರಮ ನಿರೂಪಿಸಿದರು.

Ad Widget

Related posts

ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣ ಕ್ರಮಕ್ಕೆ ಸೂಚನೆ : ಆರಗ ಜ್ಞಾನೇಂದ್ರ

Malenadu Mirror Desk

ಈಶ್ವರಪ್ಪರ ರಾಜಕಾರಣಕ್ಕೆ ಹಿಂದೂಗಳ ಬಲಿಯಾಗಬೇಕಾ : ಕಾಂಗ್ರೆಸ್ ವಕ್ತಾರ ಕೆಬಿಪಿ ಪ್ರಶ್ನೆ

Malenadu Mirror Desk

ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.