ಸಾವು ಎಂಬುದು ಹಿಂಗೆ ಕಣ್ರಿ ಯಾವ ಮಾಯದಲ್ಲಿ ಬಂದುಬಿಡುತ್ತೆ ಅನ್ನೋದೆ ತಿಳಿಯಲ್ಲ. ಇಪ್ಪತ್ತು ನಿಮಿಷ ಹೋಗಿದ್ದೆ ಮನೆ ಸೇರಬೇಕಿದ್ದ ಬಾಬು ಕಾರು ಚಲಾಯಿಸುವಾಗಲೇ ಕಾಲನ ಕರೆಗೆ ಸಮ್ಮತಿ ಸೂಚಿಸಿ ಇಹಲೋಕ ತ್ಯಜಿಸಿದ್ದಾರೆ.
ಶಿವಮೊಗ್ಗ ನಗರದ ಚಾಲುಕ್ಯ ನಗರದಲ್ಲಿ ತಮ್ಮ ಹೋಂಡಾ ಸಿಟಿ ಕಾರಿನಲ್ಲಿ ಹೋಗುತ್ತಿದ್ದ ಮಲವಗೊಪ್ಪ ನಿವಾಸಿ ಬಾಬ ಅವರಿಗೆ ತೀವ್ರ ಹೃದಯಾಘಾತವಾಗಿದೆ. ಚಲಾಯಿಸುತ್ತಿದ್ದ ಕಾರು ರಸ್ತೆ ಪಕ್ಕದಲ್ಲಿದ್ದ ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ. ಜನರು ಇದೇನಪ್ಪ ಈ ಹಗಲು ಹೊತ್ತಲ್ಲಿ ಯಾರಿದು ಹಿಂದೆ ಕಾರು ಚಲಾವಣೆ ಮಾಡುತ್ತಿದ್ದಾರೆ ಎಂದು ಗಾಬರಿಯಾಗಿ ಓಡಿದ್ದಾರೆ. ಕ್ಷಣಮಾತ್ರದಲ್ಲಿ ಮುಂದೆ ಹೋದ ಕಾರು ಕಾಂಪೌಂಡ್‌ಗೆ ಡಿಕ್ಕಿ ಹೊಡೆದು ನಿಂತಿದೆ. ಸ್ಥಳೀಯರು ಕಾರಿನ ಬಾಗಿಲು ತೆರೆದು ಬಾಬು ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದರಾದರೂ, ಅಲ್ಲಿಗೆ ಹೋಗುವಷ್ಟರಲ್ಲಿಯೇ ಅವರು ನಿಧನರಾಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಟ್ರಾಫಿಕ್ ಠಾಣೆಯಲ್ಲಿ ದೂರು ದಾಖಲಾಗಿದೆ.