ಶಿವಮೊಗ್ಗ ವಿನೋಬನಗರದಲ್ಲಿ ನಡೆದಿದ್ದ ರೌಡಿ ಹಂದಿ ಅಣ್ಣಿ ಕೊಲೆ ಪ್ರಕರಣ ತನಿಖೆ ಮಾಡುತ್ತಿದ್ದ ಪೊಲೀಸರಿಗೆ ಇನ್ನೊಂದು ಕೊಲೆಗೆ ಸ್ಕೆಚ್ ಹಾಕಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
೨೦೧೮ ರಲ್ಲಿ ನಡೆದಿದ್ದ ರೌಡಿ ಶೀಟರ್ ಬಂಕ್ ಬಾಲುವನ್ನು ಕೊಲೆ ಮಾಡಲಾಗಿತ್ತು. ಆ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಂಬುಯಾನೆ ಅನಿಲ್ ನನ್ನು ಕೊಲೆ ಮಾಡಲು ಸಿದ್ಧತೆ ನಡೆಸಿದ್ದ ಚಂದನ್ ಮತ್ತು ವಿಘ್ನೇಶ್ ಎಂಬುವರರನ್ನು ಹಾಗೂ ಇವರ ಆಯುಧಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಕಿರಣ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಹಂದಿ ಅಣ್ಣಿ ಕೊಲೆಯಲ್ಲಿ ಬಂಕ್ ಬಾಲು ಶಿಷ್ಯರ ಪಾತ್ರವಿದೆ ಎಂದು ಹೇಳಲಾಗುತಿದ್ದು, ಈ ನೆಲೆಯಲ್ಲಿ ತನಿಖೆ ಮುಂದುವರಿಸಿದ್ದ ಪೊಲೀಸರಿಗೆ ಅಂಬು ಕೊಲೆಗೂ ಸಂಚು ನಡೆದಿರುವ ಮಾಹಿತಿ ಲಭ್ಯವಾಗಿದೆ.
ಬಾಲು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಅಂಬು ಅಲಿಯಾಸ್ ಅನಿಲ್ ಜೈಲಿನಿಂದ ಹೊರಬಂದ ಮೇಲೆ ಮಂಗಳೂರಿನಲ್ಲಿದ್ದಾನೆ ಎಂದು ಹೇಳಲಾಗಿದೆ. ದೊಡ್ಡ ಪೇಟೆ ಪೊಲಿಸ್ ಠಾಣೆಯಲ್ಲಿ ಬಂಧಿತರ ವಿರುದ್ಧ ಪ್ರಕರಣ ದಾಖಲಾಗಿದೆ.