Malenadu Mitra
ರಾಜ್ಯ ಶಿವಮೊಗ್ಗ

ಅಣ್ಣಿ ಹಂತಕರು ಚಿಕ್ಕಮಗಳೂರಲ್ಲಿ ಶರಣು, ವಶಕ್ಕೆ ಪಡೆಯಲು ತೆರಳಿದ ಶಿವಮೊಗ್ಗ ಪೊಲೀಸರು

ರೌಡಿಶೀಟರ್ ಹಂದಿ ಅಣ್ಣಿ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂಟು ಆರೋಪಿಗಳು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ. ಆರೋಪಿಗಳಾದ ಕಾಡಾ ಕಾರ್ತಿಕ್, ನಿತಿನ್,ಮಧು,ಫಾರೂಕ್,ಆಂಜನೇಯ,ಮದನ್, ಮಧು ಮತ್ತು ಚಂದನ್ ಪೊಲೀಸರ ಮುಂದೆ ಹಾಜರಾಗಿದ್ದಾರೆ.
ಈ ಸಂಬಂಧ ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಅವರು, ಆರೋಪಿಗಳನ್ನು ಶಿವಮೊಗ್ಗ ಪೊಲೀಸರು ಬೆನ್ನತ್ತಿದ್ದರು. ಈಗ ಶರಣಾಗಿರುವ ಎಲ್ಲರ ಹೆಸರುಗಳೂ ತನಿಖಾ ಹಂತದಲ್ಲಿ ನಮಗೆ ಗೊತ್ತಾಗಿತ್ತು. ಅವರನ್ನು ವಶಕ್ಕೆ ಪಡೆಯಲು ನಮ್ಮ ಪೊಲೀಸ್ ತಂಡಗಳು ಚಿಕ್ಕಮಗಳೂರಿಗೆ ಹೋಗಿವೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಪೊಲೀಸ್ ಕಸ್ಟಡಿಗೆ ಕೇಳಲಾಗುವುದು ಎಂದು ಹೇಳಿದರು.
ಕಾಡಾ ಕಾರ್ತಿಕ್ ಮತ್ತು ನಿತಿನ್ ಎಂಬುವವರು ಎರಡು ವರ್ಷಗಳ ಹಿಂದೆ ಕೊಲೆಯಾಗಿದ್ದ ಬಂಕ್ ಬಾಲು ಸಹಚರರಾಗಿದ್ದು, ಬಾಲು ಕೊಲೆಯಲ್ಲಿ ಅಣ್ಣಿ ಪಾತ್ರ ಇದೆ ಎಂದು ಆತನನ್ನು ಕೊಲೆ ಮಾಡಿರುವ ಸಾಧ್ಯತೆಯಿದೆ ತನಿಖೆಯಲ್ಲಿ ಎಲ್ಲ ತಿಳಿಯಲಿದೆ. ಆದರೆ ಬಾಲಕು ಕೊಲೆಯಲಿ ಅಣ್ಣಿ ಆರೋಪಿಯಾಗಿರಲಿಲ್ಲ ಎಂದು ಎಸ್ಪಿ ತಿಳಿಸಿದರು.
ಆರೋಪಿಗಳ ಶರಣಾಗತಿ ಹಿಂದೆ ಪ್ರಭಾವಿಗಳ ಕೈ:

ಕೊಲೆ ಆರೋಪಿಗಳು ಚಿಕ್ಕಮಗಳೂರಲ್ಲಿ ಶರಣಾಗುವಲ್ಲಿ ಶಿವಮೊಗ್ಗದ ಮರಳು ದಂಧೆಯ ಪ್ರಭಾವಿಗಳ ಕೈವಾಡ ಇದೆ ಎಂದು ಹೇಳಲಾಗಿದೆ. ರಾಜಕೀಯ ನಾಯಕರ ಬೆಂಬಲಿಗರೂ ಇದರಲ್ಲಿ ಪಾತ್ರವಹಿಸಿದ್ದಾರೆನ್ನಲಾಗಿದೆ. ಶಿವಮೊಗ್ಗದಲ್ಲಿ ನಮಗೆ ಜೀವ ಭಯವಿದೆ ಎಂದು ಅವರು ಚಿಕ್ಕಮಗಳೂರಲ್ಲಿ ಶರಣಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ಜೀವ ಭಯ ಇರುವ ಕಾರಣ ಇಲ್ಲಿ ಬಂದಿದ್ದೇವೆ ಎಂದು ಆರೋಪಿಗಳು ನೇರವಾಗಿ ಎಸ್ಪಿ ಕಚೇರಿಗೆ ಬಂದು ಶರಣಾಗಿದ್ದಾರೆ. ಶಿವಮೊಗ್ಗ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಅವರು ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ
ಅಕ್ಷಯ್, ಎಸ್ಪಿ ಚಿಕ್ಕಮಗಳೂರು

ನಮ್ಮ ಪೊಲೀಸರು ತನಿಖಾ ಹಂತದಲ್ಲಿ ಗುರುತಿಸಿದವರೇ ಚಿಕ್ಕಮಗಳೂರಲ್ಲಿ ಶರಣಾಗಿದ್ದಾರೆ. ನಿಜವಾಗಿಯೂ ಆರೋಪಿಗಳೇ ಶರಣಾಗಿದ್ದಾರಾ ಅಥವಾ ಬೇರೆ ಯಾರನ್ನಾದರೂ ಶರಣು ಮಾಡಲಾಗಿದೆಯ ಎಂಬ ಬಗ್ಗೆ ತನಿಖೆ ಮಾಡುತ್ತೇವೆ. ಎಂಟು ಮಂದಿಯಲ್ಲಿ ಹಿಂದೆ ಕ್ರೈಂನಲ್ಲಿ ಭಾಗಿಯಾದವರೂ ಇದ್ದಾರೆ
ಲಕ್ಷ್ಮೀ ಪ್ರಸಾದ್, ಎಸ್ಪಿ, ಶಿವಮೊಗ್ಗ

Ad Widget

Related posts

ವೀರಶೈವ, ಲಿಂಗಾಯತ ಒಂದೇ: ಡಾ.ಮಹಾಂತ ಸ್ವಾಮೀಜಿ

Malenadu Mirror Desk

ರೈತ ಸಂಘಟನೆಗಳ ಹೋರಾಟಕ್ಕೆ ಶಕ್ತಿ ತುಂಬಿದ ಎನ್.ಡಿ.ಸುಂದರೇಶ್

Malenadu Mirror Desk

ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ:ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.