ಚಿಕ್ಕಮಗಳೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದ ಹಂದಿ ಅಣ್ಣಿ ಕೊಲೆ ಆರೋಪಿಗಳನ್ನು ಮಂಗಳವಾರ ರಾತ್ರಿ ಶಿವಮೊಗ್ಗಕ್ಕೆ ಕರೆತರಲಾಗಿದೆ. ಶಿವಮೊಗ್ಗದಿಂದ ಹೋಗಿದ್ದ ತಂಡಗಳು ಅಲ್ಲಿನ ಪೊಲೀಸರು ಎಲ್ಲಾ ೮ ಆರೋಪಿಗಳನ್ನು ಕೋರ್ಟಿಗೆ ಹಾಜರು ಪಡಿಸಿದ ಮೇಲೆ ತಮ್ಮ ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರಿನಲ್ಲಿ ಆರೋಪಿಗಳ ಮೇಲೆ ಯಾವುದೇ ಕೇಸು ಇಲ್ಲದ ಕಾರಣ ನ್ಯಾಯಾಲಯ ಆರೋಪಿಗಳನ್ನು ಶಿವಮೊಗ್ಗ ಪೊಲೀಸರಿಗೆ ಒಪ್ಪಸಿದೆ.
ಆರೋಪಿಗಳನ್ನು ಜಯನಗರ ಪೋಲಿಸ್ ಠಾಣೆಯಲ್ಲಿ ಇರಿಸಲಾಗಿದ್ದರು, ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್, ಅಡಿಷನಲ್ ಎಸ್ಪಿ ವಿಕ್ರಮ್ ಆಮ್ಟೆ, ಡಿವೈಎಸ್‌ಪಿ ಬಾಲ್‌ರಾಜ್ ಜಯನಗರ ಠಾಣೆಗೆ ಭೇಟಿ ನೀಡಿದ್ದರು.
ಈ ಸಂದರ್ಭ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಸ್ಪಿ ಲಕ್ಷ್ಮೀಪ್ರಸಾದ್ ಅವರು, ಚಿಕ್ಕಮಗಳೂರಿನಲ್ಲಿ ಶರಣಾಗತಿ ದಾಖಲಾತಿ ಮುಗಿದಿದ್ದು, ಕೋರ್ಟ್‌ಗೆ ಪ್ರೊಡ್ಯೂಸ್ ಮಾಡಲಾಗಿತ್ತು. ಅದಾದ ಬಳಿಕ ಅಲ್ಲಿ ಅವರ ವಿರುದ್ಧ ಯಾವುದೇ ಕೇಸ್‌ಗಳಿಲ್ಲದ ಕಾರಣಕ್ಕೆ ಶಿವಮೊಗ್ಗ ಪೊಲೀಸ್ ಇಲಾಖೆ ಅವರನ್ನು ವಶಕ್ಕೆ ಪಡೆದುಕೊಂಡು ಶಿವಮೊಗ್ಗಕ್ಕೆ ಕರೆದುಕೊಂಡು ಬಂದಿದೆ. ೨೪ ಗಂಟೆಯಲ್ಲಿ ಅವರನ್ನು ಬಂಧಿಸಿ ಕೋರ್ಟ್‌ಗೆ ಹಾಜರು ಮಾಡಲಾಗುವುದು. ಆನಂತರ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆಯನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.