Malenadu Mitra
ರಾಜ್ಯ ಶಿವಮೊಗ್ಗ

ಪರಿಶ್ರಮವಿದ್ದಲ್ಲಿ ಯಶಸ್ಸು: ಡಾ.ರಶ್ಮಿ ಪರಮೇಶ್, ಈಡಿಗ ಮಹಿಳಾ ಸಂಘದಿಂದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ

ಯಾವುದೇ ಕ್ಷೇತ್ರವಾದರೂ ಪರಿಶ್ರಮ ಇಲ್ಲದಿದ್ದರೆ ಫಲ ಸಿಗುವುದಿಲ್ಲ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ ಅತ್ಯಗತ್ಯ ಎಂದು ಅರವಳಿಕೆ ತಜ್ಞೆ ಡಾ. ರಶ್ಮಿ ಪರಮೇಶ್ವರ್ ಹೇಳಿದರು.
ಶಿವಮೊಗ್ಗ ನಗರದ ಈಡಿಗರ ಭವನದಲ್ಲಿ ಶನಿವಾರ ಶಿವಮೊಗ್ಗ ಜಿಲ್ಲಾ ಬ್ರಹ್ಮಶ್ರೀ ನಾರಾಯಣಗುರು ಆರ್ಯ ಈಡಿಗ ಮಹಿಳಾ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಯಶಸ್ಸು ಸಿಗುವವರೆಗೂ ಮಿರಮಿಸಬಾರದು. ಮುಂದಿಟ್ಟ ಹೆಜ್ಜೆಯನ್ನು ಹಿಂದಿಡಬಾರದು ಎಂದು ಸಲಹೆ ನೀಡಿದರು.
ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರಮುಖ ಘಟ್ಟಗಳು. ಅದಾದ ಬಳಿಕ ಯಾವುದೇ ಕೋರ್ಸ್ ತೆಗೆದುಕೊಳ್ಳುವ ಮೊದಲು ಕೂಲಂಕಶವಾಗಿ ಆಲೋಚಿಸಬೇಕು. ಪಾಲಕರು, ಪರಿಣಿತರೊಂದಿಗೆ ಸಮಾಲೋಚಿಸಬೇಕು. ತನ್ನ ಸ್ನೇಹಿತ ಅಥವಾ ಸ್ನೇಹಿತೆ ಯಾವುದೋ ಕೋರ್ಸ್‌ಗೆ ಸೇರಿದ್ದಾರೆ ಎಂಬ ಕಾರಣಕ್ಕೆ ತಾವು ಅದೇ ಕೋರ್ಸ್ ಆಯ್ದುಕೊಳ್ಳುವುದು ಒಳ್ಳೆಯದಲ್ಲ. ಪ್ರಸ್ತುತ ಒಳ್ಳೆಯ ಕೋರ್ಸ್‌ಗಳಿವೆ. ಕುಳಿತು ಸಮಾಧಾನದಿಂದ ಆಲೋಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.
ಪದವಿ, ಸ್ನಾತಕೋತ್ತರ ಪದವಿ ಬಳಿಕ ಐಎಎಸ್, ಕೆಎಎಸ್ ಸೇರಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಿ. ಅದಕ್ಕಾಗಿ ಸಾಕಷ್ಟು ಅಧ್ಯಯನ ನಡೆಸಬೇಕು. ಸಮಾಜದಲ್ಲಿ ಎಷ್ಟೋ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದ್ದರೂ ಶಿಕ್ಷಣ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಅಂತಹವರನ್ನು ಗುರುತಿಸಿ ಆರ್ಥಿಕ ನೆರವು ನೀಡಬೇಕು. ಅವರೇ ಮುಂದೆ ರಾಷ್ಟ್ರಕ್ಕೆ ಗೌರವ ತಂದು ಕೊಡುವ ಮಟ್ಟಕ್ಕೆ ಬೆಳೆಯುವರು ಎಂದು ಹೇಳಿದರು.


ಪ್ರಸ್ತಾವಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ, ಮಹಿಳೆಯರ ಮೇಲಿನ ದೌರ್ಜನ್ಯ, ತಾರತಮ್ಯ ನಮ್ಮ ನಮ್ಮ ಮನೆಗಳಿಂದಲೇ ಶುರುವಾಗುತ್ತದೆ. ಅದನ್ನು ತಡೆಗಟ್ಟಬೇಕಿದೆ. ಮಹಿಳೆ ಎಂಬ ತಾತ್ಸರ ಮಾಡಬಾರದು. ವಿದ್ಯೆಯಿಂದ ಸ್ವಾತಂತ್ರ್ಯರಾಗಬೇಕು. ಸಂಘಟನೆಯಿಂದ ಬಲಯುತರಾಗಬೇಕು ಎಂದು ೧೫೦ ವರ್ಷಗಳ ಹಿಂದೆಯೇ ನಾರಾಯಣಗುರುಗಳು ಹೇಳಿದ್ದಾರೆ. ತೋಳ್ಬಲ, ದೈಹಿಕ ಸಾಮರ್ಥ್ಯವನ್ನು ನಂಬಿದರೆ ನಾವು ಜೀತದಾಳುಗಳಾಗಿಯೇ ಇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮೀಣ ಭಾಗದ ಮಕ್ಕಳು ಹೆಚ್ಚು ಅಂಕ ಪಡೆಯುತ್ತಿರುವುದು ಹೆಮ್ಮೆಯ ವಿಚಾರ. ಮಕ್ಕಳಿಗೆ ಆರ್ಥಿಕ ಸಹಾಯ ಮಾಡಬೇಕು. ಇದು ಚೈನ್‌ಲಿಂಕ್ ಆಗಬೇಕು. ಓದಿ ತಮ್ಮ ಕಾಲ ಮೇಲೆ ನಿಂತ ಮೇಲೆ ಮತ್ತೊಬ್ಬರ ನೆರವಿಗೆ ಮುಂದಾಗಬಹುದು ಎಂದು ಹೇಳಿದರು. ಹಸೆ ಚಿತ್ತಾರ ಕಲಾವಿದೆ ಲಕ್ಷ್ಮೀ ರಾಮಪ್ಪ, ಜನಪದ ಕಲಾವಿದೆ ಡಾ. ಜಯಲಕ್ಷ್ಮೀ ನಾರಾಯಣಪ್ಪ, ರಾಷ್ಟ್ರಪ್ರಶಸ್ತಿ ಪುರಸ್ಕೃತೆ ತನುಜಾ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಉಪನ್ಯಾಸಕಿ ಪ್ರತಿಭಾ ರವಿಕುಮಾರ್, ಗೌರವಾಧ್ಯಕ್ಷೆ ರೀತಾ ಪೂಜಾರಿ, ಉಪಾಧ್ಯಕ್ಷರಾದ ಸಾವಿತ್ರಮ್ಮ ಕೆಜಿ ಶಿವಪ್ಪ, ಲಲಿತಾ ಹೊನ್ನಪ್ಪ, ಪ್ರೇಮಾ ವಿಜೇಂದ್ರ, ಕಾರ್ಯದರ್ಶಿ ಸರಸ ಮಹಾದೇವಪ್ಪ, ಸಹ ಕಾರ್ಯದರ್ಶಿ ಲಲಿತಾ ಪದ್ಮನಾಭ, ಖಜಾಂಚಿ ವೀಣಾ ವೆಂಕಟೇಶ್, ನಿರ್ದೇಶಕರಾದ ಜಯಲಕ್ಷ್ಮೀ ಕಲ್ಲನ, ಪ್ರೇಮಾ ಚಂದ್ರಶೇಖರ್, ಪ್ರಭಾ ಹೊಳಲೂರು, ಜ್ಯೋತಿ ಸಂಜೀವ್, ಜಯಲಕ್ಷ್ಮೀ, ರೇಷ್ಮಾ, ಸರ್ವಮಂಗಳ ಮತ್ತಿತರರಿದ್ದರು.

ವಿದ್ಯೆಯಿಂದ ಸ್ವಾತಂತ್ರ್ಯರಾಗಬೇಕು. ಸಂಘಟನೆಯಿಂದ ಬಲಯುತರಾಗಬೇಕು ಎಂದು ೧೫೦ ವರ್ಷಗಳ ಹಿಂದೆಯೇ ನಾರಾಯಣಗುರುಗಳು ಹೇಳಿದ್ದಾರೆ
ಗೀತಾಂಜಲಿ

ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಕ್ತ ಆಯ್ಕೆಗಳಿವೆ. ವಿದ್ಯಾರ್ಥಿನಿಯರು ಕೋರ್ಸ್ ಆಯ್ಕೆಯಲ್ಲಿ ಎಚ್ಚರವಹಿಸಬೇಕು. ತಜ್ಞರ ಅಭಿಪ್ರಾಯ ಪಡೆಯಬೇಕು
ಡಾ.ರಶ್ಮಿ ಪರಮೇಶ್

Ad Widget

Related posts

ಸಾಗರ ಕಾಸ್ಪಾಡಿ ಕೆರೆಗೆ ಬಿದ್ದ ಬಸ್:27ಕ್ಕೂ ಹೆಚ್ಚು ಜನಕ್ಕೆ ಗಾಯ , ಒಬ್ಬ ಸಾವು

Malenadu Mirror Desk

ಮಧು ಕಾಂಗ್ರೆಸ್‍ಗೆ ಬಂದ್ರೆ ನಾವ್ ಹೊರ ಹೋಗ್ತೇವೆ

Malenadu Mirror Desk

ಅಂತೂ ಇಂತೂ ಶೆಟ್ಟಿಹಳ್ಳಿಗೆ ಕರೆಂಟ್ ಬರ್‍ತದಂತೆ……,ಆರು ದಶಕಗಳ ಕನಸಿಗೆ ಭಾನುವಾರ ಅಡಿಗಲ್ಲು, 3.6 ಕೋಟಿ ವೆಚ್ಚದಲ್ಲಿ ಭೂಗತ ಕೇಬಲ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.