Malenadu Mitra
ಶಿವಮೊಗ್ಗ

ಭೂಮಿ ನೀಡಬೇಕೆಂದು ಆಗ್ರಹಿಸಿ ರಾಜ್ಯ ಚಾಣಕ್ಯ ಸೇನೆ ಪ್ರತಿಭಟನೆ

ಭದ್ರಾವತಿ ತಾಲೂಕು ಹೊಳೆಹೊನ್ನೂರು ಹೋಬಳಿಯ ಜಂಬರಘಟ್ಟ ಗ್ರಾಮದ ಸರ್ವೇ ನಂ.97ರಲ್ಲಿರುವ 138 ಎಕರೆ ಭೂಮಿಯನ್ನು ವಿಧವೆಯರಿಗೆ, ಅಂಗವಿಕಲರಿಗೆ, ಬಡವರಿಗೆ, ಮಂಗಳಮುಖಿಯರಿಗೆ, ಪರಿಶಿಷ್ಟರು, ಅಲ್ಪಸಂಖ್ಯಾತರು, ಅಲೆಮಾರಿಗಳಿಗೆ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಚಾಣಕ್ಯ ಸೇನೆಯ ಭದ್ರಾವತಿ ತಾಲೂಕು ಘಟಕದ ಪದಾಧಿಕಾರಿಗಳು  ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಜಂಬರಘಟ್ಟ ಗ್ರಾಮದಲ್ಲಿರುವ138ಎಕರೆ ಜಮೀನು ದನಗಳಿಗಾಗಿ ಮೀಸಲಿಟ್ಟ ಜಮೀನಾಗಿದೆ. ಆದರೆ, ಇಲ್ಲಿ ಹಲವು ವರ್ಷಗಳಿಂದ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಕೋಟಿ ಕೋಟಿ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಕೋರೆಯವರಿಂದ ದೌರ್ಜನ್ಯ ಹೆಚ್ಚಾಗಿದ್ದು, ಪರಿಸರಕ್ಕೆ ಹಾನಿ ಕೂಡ ಆಗುತ್ತಿದೆ. ಜೊತೆಗೆ ಇದು ಪಾಳು ಬಿದ್ದಿದೆ ಎಂದು ಆರೋಪಿಸಿದರು.
ಈ ಜಮೀನನ್ನು ವಿಧವೆಯವರು, ಮಂಗಳಮುಖಿಯರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪಂಗಡವರಿಗೆ, ನಿರ್ಗತಿಕರಿಗೆ ನೀಡಬೇಕು. ಬಡವರು ತುಂಬಾ ಕಷ್ಟದಲ್ಲಿದ್ದು, ಸರ್ಕಾರದ ಯಾವುದೇ ಸೌಲಭ್ಯಗಳು ಇವರಿಗೆ ಸಿಕ್ಕಿಲ್ಲ. ಸಹಾಯಕರಾಗಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಈ ಪಾಳುಬಿದ್ದ ಜಮೀನನ್ನು ನಿವೇಶನಗಳನ್ನಾಗಿ ಮಾರ್ಪಡಿಸಿ ಬಡವರಿಗೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಚಾಣಕ್ಯ ಸೇನೆಯ ರಾಜ್ಯಾಧ್ಯಕ್ಷ ನಾರಾಯಣ ಐಹೊಳೆ, ಪ್ರಮುಖರಾದ ರಾಮಚಂದ್ರ, ಸೈಯದ್, ಟಿಪ್ಪು, ಸಾಬ್ ಜಾನ್ ಸಾಬ್, ಹೋರಾಟಗಾರ ಕೃಷ್ಣಪ್ಪ ಮೊದಲಾದವರಿದ್ದರು.

Ad Widget

Related posts

ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹೈಕಮಾಂಡ್ ಕ್ರಮ :ಬಿ ವೈ ವಿಜಯೇಂದ್ರ

Malenadu Mirror Desk

ಅಹಮದೀಯ ಸಂಘಟನೆಯಿಂದ ಸ್ವಚ್ಛತೆ, ಅಂಧರ ಶಾಲೆಗೆ ಉಡುಗೊರೆ, ಅರ್ಥಪೂರ್ಣ ಗಣರಾಜ್ಯೋತ್ಸವ ಆಚರಣೆ

Malenadu Mirror Desk

ಶಿವಮೊಗ್ಗದಲ್ಲೂ ಬೀದಿಗಿಳಿದ ರೈತರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.