ವಿಶ್ವವಿಖ್ಯಾತ ಜೋಗ ಜಲಪಾತ ನೋಡಲು ಭಾನುವಾರ ಸಾಗರೋಪಾದಿಯಲ್ಲಿ ಪ್ರವಾಸಿಗರು ಬಂದಿದ್ದರು. ವೀಕೆಂಡ್ ಆಗಿದ್ದರಿಂದ ರಾಜ್ಯಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಮಳೆ ಮತ್ತು ಮಂಜಿನ ಕಾರಣ ಜಲಪಾತ ಧುಮ್ಮಿಕ್ಕುವುದು ಅಷ್ಟಾಗಿ ಕಾಣುತಿರಲಿಲ್ಲವಾದರೂ ಒಮ್ಮೊಮ್ಮೆ ಇಣುಕುವ ಸೂರ್ಯ ಕಿರಣ ಮಂಜು ಸರಿಸಿ ಜಲಪಾತ ದರ್ಶನ ಮಾಡಿಸುತ್ತಿತ್ತು.
ಶರಾವತಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಗಣನೀಯವಾಗಿ ಏರುತ್ತಿದೆ. ಜೋಗಕ್ಕೆ ತೆರಳುವ ಮಾರ್ಗದುದ್ದಕ್ಕೂ ಝರಿತೊರೆಗಳ ದರ್ಶನವಾಗುತ್ತಿದ್ದು, ದೂರದೂರಿನ ಪ್ರವಾಸಿಗರು ಮಲೆನಾಡಿನ ಮಳೆಯ ಸೊಗಸನ್ನು ಸಂಭ್ರಮಿಸಿದರು.
ರುದ್ರ ರಮಣೀಯವಾದ ಫಾಲ್ಸ್ ಮುಂದೆ ನಿಂತು ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.
previous post