ನಿಷೇಧಾಜ್ಞೆ ನಡುವೆಯೇ ಮತ್ತೊಂದು ಕೃತ್ಯ
ಶಿವಮೊಗ್ಗ ನಗರ ನಿನ್ನೆಯ ಭಾವಚಿತ್ರ ತೆರವು ಮತ್ತು ಚಾಕು ಇರಿತದ ಘಟನೆಯಿಂದ ಹೊರಬಾರದಿರುವ ಮುನ್ನವೇ ಮಂಗಳವಾರ ಬೆಳಿಗ್ಗೆ ಭದ್ರಾವತಿಯಲ್ಲಿ ನಾಲ್ವರ ತಂಡ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದೆ.
ಭದ್ರಾವತಿಯ ನೆಹರೂ ನಗರದಲ್ಲಿ ಸುನಿಲ್ ಎಂಬಾತನ ಮೇಲೆ ಮುಬಾರಕ್ ಅಲಿಯಾಸ್ ಡಿಚ್ಚಿ ಮತ್ತು ಮೂವರು ಈ ಕೃತ್ಯ ನಡೆಸಿದ್ದಾರೆ ಎಂದು ವರದಿಯಾಗಿದೆ.
ಸುನಿಲ್ ಮೂಗಿಗೆ ತೀವ್ರ ಗಾಯವಾಗಿದೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ನಡೆಸಿದ ಮುಬಾರಕ್ ತಂಡ ಇರಿಯಲೆತ್ನಿದಾಗ ಕೂದಲೆಳೆಯ ಅಂತರದಲ್ಲಿ ಸುನಿಲ್ ಪಾರಾದನಾದರೂ ಮೂಗಿಗೆ ಗಾಯ ವಾಗಿದೆ.
ಹಳೆನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳದಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ. ನಿಷೇಧಾಜ್ಣೆ ನಡುವೆಯೇ ಈ ಘಟನೆ ಸಂಭವಿಸಿದೆ.