ಶಿವಮೊಗ್ಗಲ್ಲಿ ಫ್ಲೆಕ್ಸ್ ವಿಚಾರಕ್ಕೆ ಆದ ಗಲಾಟೆ ಬಳಿಕ ಅಮಾಯಕ ಯುವಕನ ಮೇಲೆ ಚಾಕು ಇರಿದಿದ್ದರೆನ್ನಲಾದ ಆರೋಪಿಯ ಮೇಲೆ ಗುಂಡು ಹಾರಿಸಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಬಿ ಆಲಿಯಾಸ್ ಚರ್ಬಿಯನ್ನು ಎನ್.ಟಿ ರಸ್ತೆ ಬಳಿ ಬಂಧಿಸಲು ಹೋದಾಗ ಪೊಲೀಸರ ಮೇಲೆ ಆತ ಹಲ್ಲೆ ಮಾಡಲು ಮುಂದಾದಾಗ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಜಬಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಲ್ಲದೆ ಪ್ರೇಮ್‌ಸಿಂಗ್ ಮೇಲೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆ.ಸಿ.ನಗರದ ನದೀಮ್(೨೫) ಬುದ್ದನಗರದ ಅಬ್ದುಲ್ ರೆಹಮಾನ್(೨೫) ಸೇರಿದಂತೆ
ಆರೋಪಿಗಳು ಸೋಮವಾರ ಉಪ್ಪಾರ ಕೇರಿ ಬಳಿ ಪ್ರೇಮ್ ಸಿಂಗ್ ಮೇಲೆ ಚಾಕುವಿನಿಂದ ಇರಿದ ಕಾರಣ ಶಿವಮೊಗ್ಗ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಸ್ವಾತಂತ್ರ್ಯದ ಅಮೃತಮಹೋತ್ಸವ ಸಮಾರಂಭದ ಸಂದರ್ಭ ಶಿವಪ್ಪನಾಯಕ ವೃತ್ತದಲ್ಲಿ ಅಳವಡಿಸಿದ್ದ ವೀರಸಾವರ್ಕರ್ ಪ್ಲೆಕ್ಸ್ ತೆರವುಗೊಳಿಸಿದ್ದರಿಂದ ಎರಡು ಕೋಮಿನ ನಡುವೆ ವಾಗ್ವಾದ ಆಗಿತ್ತು. ಈ ಸಂದರ್ಭ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು.
previous post