ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗುರುತರ ಆರೋಪದಡಿಯಲ್ಲಿ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಡಾ ಶಿವರಾತ್ರಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಶನಿವಾರ ಸಂಜೆ ಸ್ವಾಮಿಗಳಿಗೆ ಧೈರ್ಯ ಹೇಳಲು ಬಂದ ವಿವಿಧ ಮಠಗಳ ಸ್ವಾಮಿಗಳು ಹಾಗೂ ಮಠದ ಭಕ್ತರಿಗೆ ಸ್ವತಃ ಮುರುಘಾ ಶರಣರೇ ಸಭೆ ಕರೆದು ತಮ್ಮ ಮೇಲೆ ಬಂದಿರುವ ಅತ್ಯಚಾರದ ಸುಳ್ಳು ಆರೋಪಕ್ಕೆ ತಾವು ವಿಚಲಿತರಾಗಿಲ್ಲ, ತನಿಖೆಯ ನಂತರ ಸತ್ಯ ಹೊರ ಬರಲಿ ಸತ್ಯಕ್ಕೆ ಜಯ ಸಿಗಲಿದೆ ಮಠದ ಭಕ್ತರು ಈ ಪ್ರಕರಣದಿಂದ ಧೈರ್ಯಗೆಡುವ ಅವಶ್ಯಕತೆ ಇಲ್ಲ ಗಾಳಿಪಟ ಎತ್ತರಕ್ಕೆ ಹೋದಂತೆಲ್ಲ ಗಾಳಿಯ ಹೊಡೆತ ಜೋರಾಗಿರುತ್ತದೆ, ಸಣ್ಣವರಿಗೆ ಸಣ್ಣ ಪೆಟ್ಟು, ದೊಡ್ಡವರಿಗೆ ದೊಡ್ಡ ಹೊಡೆತ ಏಸುಕ್ರಿಸ್ತನಿಗೆ ಶಿಲುಬೆಗೆ ಏರಿಸಿದವರು, ಬುದ್ದನಿಗೆ ಹಂದಿಯ ರಸ ಕುಡಿಸಿದವರು ಅವರ ನಿಕಟವರ್ತಿಗಳೆ, ನಮಗೂ ನಿಕಟವರ್ತಿಯಿಂದಲೇ ಸಂಕಷ್ಟ ಒದಗಿದೆ ನಮ್ಮ ನಮ್ಮ ಸತ್ಯ ನಮಗೆ ಕಾಪಾಡಲಿದೆ ನಾವು ಸಂಧಾನಕ್ಕು ಸಿದ್ಧ, ಸಮರಕ್ಕೂ ಸಿದ್ಧ ಎಂದು ಧೈರ್ಯ ತುಂಬಿದ್ದಾರೆ. ಸಭೆಯಲ್ಲಿ ಹೊಳಲ್ಕೆರೆ ಶಾಸಕ ಚಂದ್ರಪ್ಪ ಭಾಗವಹಿದ್ದು ವಿಶೇಷವಾಗಿತ್ತು.
ಪ್ರಕರಣದ ಹಿನ್ನೆಲೆ:
ಚಿತ್ರದುರ್ಗ ಮುರುಘಾಮಠದಲ್ಲಿರುವ ಬಾಲಕಿಯರನ್ನು ಮಹಿಳಾ ವಾರ್ಡನ್, ಸ್ವಾಮೀಜಿಗಳಿಗೆ ಹಣ್ಣು ಕೊಟ್ಟು ಬನ್ನಿ ಎಂದು ಕಳುಹಿಸುತ್ತಿದ್ದರು. ತಮ್ಮ ಬಳಿ ಬಂದ ವಿದ್ಯಾರ್ಥಿನಿಯರನ್ನು ಸ್ವಾಮೀಜಿ ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಮತ್ತು ಬರುವಂತೆ ಮಾಡಿ ಅಪ್ರಾಪ್ತ ಮಕ್ಕಳ ಮೇಲೆ ಸ್ವಾಮಿಜಿ ಲೈಂಗಿಕ ದೌರ್ಜನ್ಯವೆಸಗುತ್ತಿದ್ದರು ಎಂದು ಹಲವು ಮಕ್ಕಳು ಆರೋಪಿಸಿದ್ದಾರೆ.
ಮೂರುವರೆ ವರ್ಷಗಳಿಂದ ಸ್ವಾಮೀಜಿ ದೌರ್ಜನ್ಯ ಹಾಗೂ ಮಠದವರ ಕಿರುಕುಳದಿಂದ ನೊಂದ ಮಕ್ಕಳು ಮೊದಲು ಚಿತ್ರದುರ್ಗ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾರೆ. ಆದರೆ ಸ್ವಾಮೀಜಿ ಹಾಗೂ ಮಠದ ವಿರುದ್ಧ ದೂರು ದಾಖಲಿಸಿಕೊಂಡಿಲ್ಲ.
ಅಂತಿಮವಾಗಿ ಮಕ್ಕಳು ಮೈಸೂರಿನ ಒಡನಾಡಿ ಸಂಸ್ಥೆ ಮೊರೆ ಹೋಗಿದ್ದು, ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ. ಮೈಸೂರಿನ ನಜಾರಾಬಾದ್ ಠಾಣೆಯಲ್ಲಿ ಡಾ.ಶಿವಮೂರ್ತಿ ಶರಣರು ಸೇರಿದಂತೆ ಮಠದ ಐವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮುರುಘಾಶ್ರೀ ಡಾ.ಶಿವಮೂರ್ತಿಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ, ವಾರ್ಡನ್ ರಶ್ಮಿ ವಿರುದ್ಧ ಅಪ್ರಾಪ್ತೆಯರನ್ನು ಸ್ವಾಮೀಜಿ ಬಳಿ ಕಳುಹಿಸುತ್ತಿದ್ದ ಆರೋಪ ಹಾಗೂ ಬಸವಾದಿತ್ಯ, ಪರಮಶಿವಯ್ಯ, ಗಂಗಾಧರಯ್ಯ ವಿರುದ್ಧ ಲೈಂಗಿಕ ದೌರ್ಜನ್ಯಕ್ಕೆ ಸಹಾಯ ಆರೋಪ ಕೇಳಿಬಂದಿದೆ. ಐವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪ್ರಸ್ತುತ ಪ್ರಕರಣವನ್ನು ಚಿತ್ರದುರ್ಗದ ಕೋಟೆ ಠಾಣೆಗೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.