Malenadu Mitra
ರಾಜ್ಯ ಶಿವಮೊಗ್ಗ

ಶಿವಮೊಗ್ಗದಲ್ಲಿ ಸಾವರ್ಕರ್ ಸಾಮ್ರಾಜ್ಯ : ಕೆ.ಎಸ್. ಈಶ್ವರಪ್ಪ

ಶ್ರೀಗಂಧ ಸಂಸ್ಥೆ, ಸಾಮಗಾನ ಇವರ ಸಂಯುಕ್ತ ಆಶ್ರಯದಲ್ಲಿ ಅ.೨೨ ರಂದು ಸಂಜೆ ೫ ಗಂಟೆಗೆ ಬಿ.ಹೆಚ್. ರಸ್ತೆಯಲ್ಲಿರುವ ಸೈನ್ಸ್ ಮೈದಾನದಲ್ಲಿ “ಸಾವರ್ಕರ್ ಸಾಮ್ರಾಜ್ಯ” ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀಗಂಧ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1944ರಲ್ಲಿ ವೀರ ಸಾವರ್ಕರ್ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು, ಇದರ ಸ್ಮರಣಾರ್ಥ ಈ ವಿಶೇಷ ಧನ್ಯತಾ ಭಾವದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಇದು ನನ್ನ ಪುಣ್ಯ ಎಂದರು.

ಸಾವರ್ಕರ್ ಜನಪ್ರಿಯ ವ್ಯಕ್ತಿ. ಸ್ವಾತಂತ್ರ್ಯ  ಹೋರಾಟದಲ್ಲಿ ಅವರದ್ದು ಒಂದು ರೋಚಕ ಅಧ್ಯಾಯ. ಜೀವನದುದ್ದಕ್ಕೂ ಸ್ವಾಭಿಮಾನ, ಸಶಕ್ತ ಭಾರತದ ಕನಸು ಕಂಡ ವೀರ ಸಾವರ್ಕರ್ ಅನುಭವಿಸಿದ ಕಠಿಣ ಕರಿನೀರಿನ ಶಿಕ್ಷೆಯ ಅಧ್ಯಾಯವನ್ನು ದೇಶಭಕ್ತರು ಮರೆಯಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಾವರ್ಕರ್ ಮೊಮ್ಮಗನಾದ ರಾಷ್ಟ್ರವಾದಿ ಚಿಂತಕ ಸಾತ್ಯಕಿ ಸಾವರ್ಕರ್ ಹಾಗೂ ಮನೋಹರ್, ಮಠದ್(ಮುನಿಯಪ್ಪಾಜೀ) ರಾಜ್ಯ ಸಂಯೋಜಕರು ಕರ್ನಾಟಕ ದೇವಸ್ಥಾನ ಸಂವರ್ಧನ ಸಮಿತಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾಷ್ಟ್ರವಾದಿ ಚಿಂತಕಿಯಾದ ಶ್ರೀಲಕ್ಷ್ಮೀ ರಾಜಕುಮಾರ್ ಪ್ರಧಾನ ಭಾಷಣ ರವರು ಮಾಡಲಿದ್ದು, ಅಧ್ಯಕ್ಷತೆಯನ್ನು ಶ್ರೀಗಂಧ ಸಂಸ್ಥೆಯ ಅಧ್ಯಕ್ಷರು ಶಾಸಕ ಕೆ.ಎಸ್. ಈಶ್ವರಪ್ಪ ವಹಿಸಲಿದ್ದು, ಸಾಮಗಾನ ಸಂಸ್ಥೆಯ ಗೌರವಧ್ಯಕ್ಷ ಕೆ.ಈ ಕಾಂತೇಶ್ ಉಪಸ್ಥಿತರಿರುವರು ಎಂದರು.

ಈ ಸಮಾರಂಭದಲ್ಲಿ ೬೦೦ಕ್ಕೂ ಹೆಚ್ಚು ದೇಶಭಕ್ತಿ ಮಾತೆಯರು ಹಾಗೂ ಮಹನೀಯರಿಂದ ಏಕಕಂಠದಲ್ಲಿ ದೇಶಭಕ್ತಿಯ ಸಮೂಹ ’ಗಾಯನವನ್ನು ಮಾತೆ, ಪೂಜಕ, ಸಾವರ್ಕರ್ ರಚನೆಯ ಜಯೋಸ್ತುತ ಹಾಗು ವಂದೇ ಮಾತರಂ) ವಿಶೇಷವಾಗಿ ಆಯೋಜಿಸಲಾಗಿದೆ. ಹಾಗೂ ಸಾತ್ಯಕಿ ಸಾವರ್ಕರ್ ರವರನ್ನು ಸ್ವಾಗತಿಸುವ ನಿಟ್ಟಿನಲ್ಲಿ ಸಂಜೆ ೪.೩೦ಕ್ಕೆ ಬೃಹತ್ ಬೈಕ್ ಹಾಗೂ ಆಟೋ ರ್ಯಾ ಲಿಯನ್ನು ಹಮ್ಮಿಕೊಳ್ಳಲಾಗಿದೆ.ಎಂದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಈ. ಕಾಂತೇಶ್, ಸೂಡಾ ಅಧ್ಯಕ್ಷ ನಾಗರಾಜ್, ಇ.ವಿಶ್ವಾಸ್, ವಿನಯ್, ಚೇತನ್ ದೀನದಯಾಳ್, ಕೆ.ವಿ. ಅಣ್ಣಪ್ಪ ಮುಂತಾದವರಿದ್ದರು.

Ad Widget

Related posts

ಮಾನವ ಸಂಪನ್ಮೂಲ ಸರಬರಾಜು ಸಂಸ್ಥೆಗಳ ಆಡಳಿತ ವ್ಯವಸ್ಥೆ ಪರಿಶೀಲಿಸಿ : ಡಾ|| ಆರ್.ಸೆಲ್ವಮಣಿ

Malenadu Mirror Desk

ಮಲೆನಾಡಿನ ಅಭಿವೃದ್ಧಿ ಪಥ ವಿಸ್ತಾರ
ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಆಶಯ

Malenadu Mirror Desk

ಸಿಎಂ ಬದಲಾವಣೆಯೇ ಬಿಜೆಪಿ ಅಜೆಂಡಾ : ಗೋಪಾಲಕೃಷ್ಣ ಬೇಳೂರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.