Malenadu Mitra
ರಾಜ್ಯ

ಕಾಗೋಡು ತಿಮ್ಮಪ್ಪರನ್ನು ಅವಿರೋಧ ಆಯ್ಕೆ ಮಾಡಲಿ, ಹಿರಿಯ ಜನನಾಯಕನಿಗೆ ಗೆಲುವಿನ ನಿವೃತ್ತಿ ಕೊಡಲಿ ಎಲ್ಲಾ ಪಕ್ಷಗಳಿಗೂ ಅಭಿಮಾನಿಗಳ ಮನವಿ

ಹಿರಿಯ ರಾಜಕಾರಣಿ ಸಮ ಸಮಾಜದ ಚಿಂತಕ ಕಾಗೋಡು ತಿಮ್ಮಪ್ಪ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಬೇಕು ಎಂದು ಅವರ ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಜಿಪಂ. ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಹೊನುಗೋಡು ರತ್ನಾಕರ್ ಅವರು, ಕಾಗೋಡು ತಿಮ್ಮಪ್ಪನವರು ಸುಮಾರು ೬೦ ವರ್ಷಗಳ ಕಾಲ ರಾಜಕಾರಣದಲ್ಲಿದ್ದಾರೆ. ಅನೇಕ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಚುನಾವಣೆಯಲ್ಲಿ  ಅವರ ನಿವೃತ್ತಿ ಸೋಲಿನ ಮೂಲಕಗೆದ್ದರೂ ಸೋತರೂ ಸಮಜಮುಖಿಯಾಗಿ. ಪಕ್ಷಾತೀತವಾಗಿ ಕೆಲಸ ಮಾಡಿದ್ದಾರೆ. ಅನಿರೀಕ್ಷಿತವಾಗಿ ಕಳೆದ ಚುನಾವಣೆಯಲ್ಲಿ ಅವರನ್ನು ಜನರು ಸೋಲಿಸಿದ್ದಾರೆ. ಅವರು ಸೋತು ರಾಜಕೀಯ ನಿವೃತ್ತಿಯಾಗಬಾರದು. ಅವರನ್ನು ಗೆಲ್ಲಿಸಿ ನಿವೃತ್ತಿಗೊಳಿಸಬೇಕು. ಹಾಗಾಗಿ ಎಲ್ಲ ಪಕ್ಷಗಳು ಚುನಾವಣೆಯಿಂದ ಹಿಂದೆ ಸರಿದು ಅವರನ್ನು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಅವರಿಗೆ ರಾಜಕೀಯ ಗೌರವ ನೀಡಬೇಕು ಎಂದರು.
ಬಿ.ಎಸ್. ಯಡಿಯೂರಪ್ಪ ಕೆ.ಎಸ್. ಈಶ್ವರಪ್ಪ, ಹೆಚ್.ಡಿ. ದೇವೇಗೌಡರು, ಆಮ್ ಆದ್ಮಿ ಪಕ್ಷದವರು, ಎಲ್ಲರೂ ಕಾಗೋಡು ತಿಮ್ಮಪ್ಪನವರನ್ನು ಪ್ರೀತಿಸುತ್ತಾರೆ. ಗೌರವ ನೀಡುತ್ತಾರೆ. ಈ ಗೌರವವನ್ನು ಚುನಾವಣೆಯ ಸಂದರ್ಭದಲ್ಲೂ ತೋರಿಸಿ ತಮ್ಮ ಅಭ್ಯರ್ಥಿಗಳನ್ನು ಹಾಕದೆ ಅವಿರೋಧವಾಗಿ ಅಯ್ಕೆ ಮಾಡಲು ಸಹಕಾರ ನೀಡಬೇಕು ಎಂದರು.
ಕಾಗೋಡು ತಿಮ್ಮಪ್ಪನವರು ಚುನಾವಣೆಯಲ್ಲಿ ಸೋತರೂ, ಗೆದ್ದರೂ ತಮ್ಮ ಕ್ಷೇತ್ರದಲ್ಲಿ ಜನರ ಬಳಿ ಹೋಗುತ್ತಾರೆ. ಹಾಸ್ಟೆಲ್‌ಗಳ ನಿರ್ಮಾಣ, ಜನರಿಗೆ ಭೂಮಿ ನೀಡುವುದು ಸೇರಿದಂತೆ ಹಲವು ಸಮಸ್ಯೆಗಳತ್ತ ಗಮನ ಹರಿಸಿದ್ದಾರೆ. ೯೧ ವರ್ಷದ ಇಳಿ ವಯಸ್ಸಿನಲ್ಲೂ ಕೂಡ ಯುವಕರಂತೆ ಓಡಾಡುತ್ತಾರೆ. ಅವರಿಗೆ ಚುನಾವಣೆಗೆ ನಿಲ್ಲಲು ಇಷ್ಟವಿಲ್ಲ. ಅವರನ್ನು ನಾವು ಸಂಪರ್ಕಿಸಲೂ ಇಲ್ಲ. ಆದರೆ ಅವರ ಇಷ್ಟು ವರ್ಷದ ಪ್ರೀತಿಯ ರಾಜಕಾರಣ ನೋಡಿ ಅವರು ಕಳೆದ ಬಾರಿ ಸೋತಿದ್ದಕ್ಕೆ ನೊಂದು ಈ ಅವಕಾಶದಲ್ಲಾದರೂ ಅವರು ಮತ್ತೆ ರಾಜಕಾರಣಕ್ಕೆ ಬಂದು ನಂತರ ನಿವೃತ್ತಿಯಾಗಲಿ ಎಂಬುದು ನಮ್ಮ ಅಭಿಲಾಷೆ ಎಂದರು.
ಅಕಸ್ಮಾತ್ ಕಾಂಗ್ರೆಸ್ ಪಕ್ಷ ಅವರಿಗೆ ಟಿಕೆಟ್ ನೀಡಿದರೆ ಈ ಬಾರಿ ಖಂಡಿತ ನಾವು ಅವರನ್ನು ಗೆಲ್ಲಿಸುತ್ತೇವೆ. ಹಾಗಂತ ಅವರಿಗೆ ಟಿಕೆಟ್ ಸಿಗೆ ಬೇರೆಯವರಿಗೆ ಟಿಕೆಟ್ ಸಿಕ್ಕರೂ ಕೂಡ ನಾವು ಅವರ ಪರವಾಗಿ ನಿಲ್ಲುತ್ತೇವೆ. ಬೇಳೂರು ಗೋಪಾಲಕೃಷ್ಣ ಅವರಿಗೆ ಟಿಕೆಟ್ ಕೊಡಬಾರದು ಎಂಬ ಉದ್ದೇಶದಿಂದ ನಾವು ಈ ಪತ್ರಿಕಾಗೋಷ್ಠಿಯನ್ನು ನಡೆಸುತ್ತಿಲ್ಲ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಭರಮಪ್ಪ, ಜ್ಯೋತಿ, ಯಶೋಧಮ್ಮ, ಮೋಹನ್‌ಕುಮಾರ್, ಪ್ರಕಾಶ್, ಗಣಪತಿ, ಸುರೇಶ್ ಇದ್ದರು.

Ad Widget

Related posts

ಸಿಮ್ಸ್ ಗೆ ಒಬ್ಬಉತ್ಸಾಹಿ ನಿರ್ದೇಶಕರ ನೇಮಿಸಿ: ಶ್ರೀಪಾಲ್

Malenadu Mirror Desk

ಸಹ್ಯಾದ್ರಿ ಕ್ಯಾಂಪಸ್ ಉಳಿಸಿ: ರಸ್ತೆ ತಡೆ ನಡೆಸಿ ಪ್ರತಿಭಟನೆ

Malenadu Mirror Desk

ಶಿವಮೊಗ್ಗದಲ್ಲಿ ಕೊರೊನಕ್ಕೆ 3 ಸಾವು, 133 ಸೋಂಕು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.