Malenadu Mitra
ರಾಜ್ಯ ಶಿವಮೊಗ್ಗ

ಯುವಕರು ಪ್ರಜಾಪ್ರಭುತ್ವದ ಕಾವಲುಗಾರರಾಗಿ : ವಿಶ್ವೇಶ್ವರ ಹೆಗಡೆ ಕಾಗೇರಿ

ಜಾತಿ, ಹಣ ಮತ್ತು ತೋಳ್ಬಲಗಳಿಂದ ಚುನಾವಣೆಯಲ್ಲಿ ಜಯಶಾಲಿಯಾಗುವುದು ಸಾಧ್ಯವಾಗದು ಎಂಬ ಸಂದೇಶವನ್ನು ಎಲ್ಲಾ ಅರ್ಹ ಮತದಾರರು ಮತದಾನದ ಮೂಲಕ ಉಮೇದುವಾರರಿಗೆ ತಲುಪಿಸಬೇಕು ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಚುನಾವಣಾ ಸುಧಾರಣಾ ಕ್ರಮಗಳ ಕುರಿತು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರತಿ ಮತದಾರರು ತಮ್ಮ ಮತ ಮಾರಾಟಕ್ಕಿಲ್ಲ ಎಂಬುದನ್ನು ಖಚಿತವಾಗಿ ದೃಢಪಡಿಸಬೇಕು.

ಯುವ ಮತದಾರರು ಜಾಗೃತರಾಗಿ ದೃಢಸಂಕಲ್ಪ ಮಾಡುವುದರ ಜೊತೆಗೆ ಪ್ರಜಾಪ್ರಭುತ್ವದ ಕಾವಲುಗಾರರಾಗಿ ಕಾರ್ಯನಿರ್ವಹಿಸಬೇಕು. ನಿವೃತ್ತರು, ಸಾಹಿತಿಗಳು, ಬುದ್ದಿಜೀವಿಗಳು, ವಕೀಲರು, ಗಣ್ಯರು, ಹಿರಿಯರು, ಅನುಭವಿಗಳು ಮೌನ ಮುರಿದು ಚುನಾವಣಾ ವ್ಯವಸ್ಥೆಗಳ ಕುರಿತು ಸಕಾಲಿಕವಾಗಿ ಪ್ರತಿಕ್ರಿಯಿಸಬೇಕು. ಸಾರ್ವಜನಿಕ ಹಿತಾಸಕ್ತಿಯ ಪ್ರಕರಣಗಳನ್ನು ದಾಖಲಿಸಲು ಮುಂದಾಗಬೇಕು. ಇಂತಹ ವಿಷಯಗಳಲ್ಲಿ ರಾಜಕೀಯ ಪಕ್ಷಗಳ ಬಹುದೊಡ್ಡ ಹೊಣೆಗಾರಿಕೆ ಇದ್ದು, ಜವಾಬ್ದಾರಿಯುತ ಪ್ರತಿನಿಧಿಗಳು ಆ ನಿಟ್ಟಿನಲ್ಲಿ ಹೆಜ್ಜೆ ಇಡಬೇಕೆಂದರು.

ಕಳೆದೆರಡು ದಶಕಗಳಿಂದ ಚುನಾವಣಾ ಕ್ರಮಗಳಲ್ಲಿ ಅನೇಕ ಸುಧಾರಣೆಗಳಾಗಿವೆ. ಆಧಾರ್-ಎಪಿಕ್‌ನ ಜೋಡಣೆ ಕಾರ್ಯ ನಡೆದಿದೆ. ಆದರೂ ಚುನಾವಣೆಗಳು ನ್ಯೂನತೆಗಳಿಂದ ಹೊರತಾಗಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಚುನಾವಣೆಗಳು ಹಣ, ಹೆಂಡ ಮತ್ತು ಬಲದ ಮೇಲೆ ನಡೆಯುತ್ತಿವೆ. ನೈತಿಕ ಮೌಲ್ಯಗಳು ದಿವ್ಯನಿರ್ಲಕ್ಷ್ಯಕ್ಕೊಳಗಾಗಿವೆ. ಜಾತಿ ವ್ಯವಸ್ಥೆಯ ಮೇಲೆ ಪ್ರಜಾಪ್ರಭುತ್ವ ಎನ್ನುವ ವಾತಾವರಣ ಸೃಷ್ಟಿಗೊಳ್ಳುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ ಅವರು, ಇದು ಹೀಗೆಯೆ ಮುಂದುವರೆದಲ್ಲಿ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲಾರದು ಎಂದರು.

ಕಾರ್ಯಾಂಗದಲ್ಲೂ ಅನೇಕ ನ್ಯೂನತೆಗಳು ಎದ್ದು ತೋರುತ್ತಿವೆ. ಆಡಳಿತ ವ್ಯವಸ್ಥೆ ಜಡತ್ವದಿಂದ ಕೂಡಿದೆ. ಜವಾಬ್ದಾರಿಯುತ ಅಧಿಕಾರಿಗಳು ಮಾನವೀಯತೆ ಮರೆತಿದ್ದಾರೆ. ಸಾರ್ವಜನಿಕರಿಗೆ ಸೂಕ್ತ ಸ್ಪಂದನೆ ದೊರೆಯದಾಗಿದೆ. ಕೇವಲ ಕಡತಗಳ ಮೇಲೆಯೇ ವ್ಯವಸ್ಥೆಯ ನಿರ್ವಹಣೆಯಾಗುತ್ತಿದ್ದು, ಜನರ ಅವಹೇಳನಕ್ಕೆ ಆಹಾರವಾಗಿದೆ ಎಂದರು.
ಸಭೆಯಲ್ಲಿ ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರ್‌ನಾಯ್ಕ್, ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಸಿ.ಇ.ಒ. ಎಂ.ಡಿ.ಪ್ರಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಅನುರಾಧ ಜಿ., ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ಮಲ್ಲಿಕಾರ್ಜುನ್, ಉಮೇಶ್ ಮುಂತಾದವರು ಉಪಸ್ಥಿತರಿದ್ದರು.

ಸಾಹಿತಿಗಳು, ಬುದ್ದಿಜೀವಿಗಳು, ವಕೀಲರು, ಗಣ್ಯರು, ಹಿರಿಯರು, ಅನುಭವಿಗಳು ಮೌನ ಮುರಿದು ಚುನಾವಣಾ ವ್ಯವಸ್ಥೆಗಳ ಕುರಿತು ಸಕಾಲಿಕವಾಗಿ ಪ್ರತಿಕ್ರಿಯಿಸಬೇಕು. ಸಾರ್ವಜನಿಕ ಹಿತಾಸಕ್ತಿಯ ಪ್ರಕರಣಗಳನ್ನು ದಾಖಲಿಸಲು ಮುಂದಾಗಬೇಕು.

ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್

Ad Widget

Related posts

ಶಿವಮೊಗ್ಗದಲ್ಲಿ ಶೇ.೮೩ ಮತದಾನ

Malenadu Mirror Desk

ಕೊರೋನಾ ಹತೋಟಿಗೆ ಕ್ಷಿಪ್ರಕಾರ್ಯ : ಕುಮಾರ್ ಬಂಗಾರಪ್ಪ

Malenadu Mirror Desk

ಸಾರ್ವಜನಿಕ ಸೇವೆಯ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ : ಎಡಿಜಿಪಿ , ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ನಿರ್ಗಮನ ಪಥಸಂಚಲನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.