Malenadu Mitra
ರಾಜ್ಯ ಶಿವಮೊಗ್ಗ

ಪಂಚರತ್ನ ರಥಯಾತ್ರೆ ಬಗ್ಗೆ ಪದಾಧಿಕಾರಿಗಳು ಪೂರ್ವತಯಾರಿ: ಎಂ.ಶ್ರೀಕಾಂತ್

ಮುಂಬರುವ ವಿಧಾನಸಭಾ ಚುನಾವಣೆಯ ಸಿದ್ಧತೆ ಹಾಗೂ ಪಂಚರತ್ನ ರಥಯಾತ್ರೆ ಬಗ್ಗೆ ಪದಾಧಿಕಾರಿಗಳು ಪೂರ್ವತಯಾರಿ ಮಾಡಬೇಕಾಗಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಶ್ರೀಕಾಂತ್ ಹೇಳಿದ್ದಾರೆ.
ಶಿವಮೊಗ್ಗನಗರದ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ಪ್ರಮುಖರು, ತಾಲ್ಲೂಕು ಅಧ್ಯಕ್ಷರು, ಜಿಲ್ಲಾ ಹಾಗೂ ವಿವಿಧ ವಿಭಾಗಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆಗುವುದು ನಿಶ್ಚಿತವಾಗಿದ್ದು, ಪ್ರತಿಯೊಬ್ಬರು ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಶ್ರಮವಹಿಸಬೇಕು.ಪಂಚರತ್ನ ಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದರು.
ಪಕ್ಷದ ಸಂಘಟನೆಯಲ್ಲಿ ಎಲ್ಲರೂ ಪ್ರಮುಖ ಪಾತ್ರವಹಿಸಬೇಕು, ಜಿಲ್ಲೆಯ ಪ್ರತಿ ತಾಲ್ಲೂಕಿನಿಂದ ಭೂತ್ ಮಟ್ಟದ ಕಮಿಟಿ ನಿರ್ಮಾಣಮಾಡಿ ರಾಜ್ಯ ಮಟ್ಟಕ್ಕೆ ಅವರ ಪಟ್ಟಿಯನ್ನು ಕಳುಹಿಸಬೇಕು. ಪ್ರತಿ ಕ್ಷೇತ್ರದಿಂದ ೫೦ ಅಲ್ಪಸಂಖ್ಯಾತ ಪ್ರಮುಖರ ಪಟ್ಟಿಯನ್ನು ರಾಜ್ಯ ಸಮಿತಿಗೆ ಕಳುಹಿಸಬೇಕು. ಈ ನಿಟ್ಟಿನಲ್ಲಿ ಜೆಡಿಎಸ್ ತಾಲ್ಲೂಕು ಪ್ರಮುಖರು ಕೆಲಸ ನಿರ್ವಹಿಸಬೇಕೆಂದು ಹೇಳಿದರು.
ಶಾರದಾ ಅಪ್ಪಾಜಿಗೌಡ ಮಾತನಾಡಿ, ಸಭೆ ಕರೆದಾಗ ಮಾತ್ರ ಬರುತ್ತೀವಿ ಹೋಗುತ್ತಿವಿ ಅಂತ ಆಗಬಾರದು. ಎಲ್ಲರೂ ಸಂಘಟಿತರಾದರೆ ಜೆಡಿಎಸ್ ಗೆಲುವು ನಿಶ್ಚಿತ. ಕುಮಾರಸ್ವಾಮಿ ಮುಖ್ಯಮಂತ್ರಿಗಳಾದಾಗ ಅವರು ರಾಜ್ಯಕ್ಕೆ ನೀಡಿದ ಕೊಡುಗೆಯನ್ನು ಜನರು ಈಗಲೂ ಸ್ಮರಿಸುತ್ತಾರೆ. ಸಂಘಟನೆಯತ್ತ ಗಮನಕೊಡಿ ಎಂದರು.
ಯಡಿಯೂರು ರಾಜಾರಾಮ್ ಮಾತನಾಡಿ, ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ನಿಶ್ಚಿತ. ಸಂಘಟನೆ ಬಹಳ ಮುಖ್ಯ. ಹಿಂದಿನ ಸೋಲಿಗೆ ಕಾರಣವೇನು ಎಂಬುದು ವಿಮರ್ಶಿಸಿ ತಿದ್ದುಕೊಂಡು ಜವಾಬ್ದಾರಿಯಿಂದ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಅದು ಎಲ್ಲರ ಕರ್ತವ್ಯವು ಹೌದು ಫೆ.೧೬ರಂದು ತೀರ್ಥಹಳ್ಳಿಗೆ ಪಂಚರತ್ನ ಯಾಥ್ರೆ ಆಗಮಿಸಲಿದ್ದು, ಕುಪ್ಪಳ್ಳಿಯಿಂದ ಚಾಲನೆಯನ್ನು ಕುಮಾರಸ್ವಾಮಿಯವರು ನೀಡಲಿದ್ದಾರೆ. ಈ ನಿಟ್ಟಿನಲ್ಲಿ ಪೂರ್ವಭಾವಿ ಸಿದ್ಧತೆಗಳು ಆಗುತ್ತಿದೆ ಎಂದರು.
 ಸಭೆಯಲ್ಲಿ ಪ್ರಮುಖರಾದ ರಾಮಕೃಷ್ಣ, ನಾಗರಾಜ್ ಕಂಕಾರಿ, ಶಾಂತ ಸುರೇಂದ್ರ, ಕಾಂತ್‌ರಾಜ್, ಸಿದ್ಧಪ್ಪ, ಪಾಲಾಕ್ಷಿ, ಗೀತಾ ಸತೀಶ್, ಗೋವಿಂದಪ್ಪ, ಸೊರಬ ಕ್ಷೇತ್ರದ ಬಾಸೂರು ಚಂದ್ರೇಗೌಡ, ಎಸ್.ಕೆ.ಭಾಸ್ಕರ್, ಮಹಮ್ಮದ್ ಯುಸೂಫ್ ಭಾಯ್ಯ, ಹನುಮಂತಪ್ಪ, ಮುದುವಾಲ ನಾಗರಾಜ್, ಚಾಬುಸಾಬ್, ತ್ಯಾಗರಾಜ್ ಮತ್ತಿತರರಿದ್ದರು

ಪ್ರತಿ ಭೂತ್ ಕಮಿಟಿಯಿಂದ ಇಬ್ಬರನ್ನು ಆಯ್ಕೆಮಾಡಿ ರಾಜ್ಯ ಸಮಿತಿಗೆ ಕಳುಹಿಸಬೇಕಾಗಿದೆ. ಈ ಬಾರಿ ಜೆಡಿಎಸ್‌ಗೆ ಹೆಚ್ಚಿನ ಅವಕಾಶ ಜಿಲ್ಲೆಯಲ್ಲಿದೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಈಗಾಗಲೇ ಮನೆ ಮನೆ ಪ್ರಚಾರ ಮುಗಿದಿದೆ. ಇನ್ನೊಂದು ಹಂತದ ಪ್ರಚಾರಕ್ಕೆ ಸಿದ್ಧತೆಯಾಗಿದೆ. ಸಂಪೂರ್ಣ ವಾತಾವರಣ ಮತ್ತು ಮತದಾರರ ಒಲವು ಜೆಡಿಎಸ್ ಪರಇದ್ದು, ಯಾರು ಕೂಡ ನಿರ್ಲಕ್ಷ್ಯ ತಾಳದೆ ಶ್ರಮಹಾಕಿ ಪಕ್ಷದ ಪರ ಕೆಲಸಮಾಡಬೇಕು.

ಶಾರದಾ ಪೂರ್‍ಯನಾಯ್ಕ್ ಮಾಜಿ ಶಾಸಕಿ

Ad Widget

Related posts

ಈಡಿಗ ಸಮುದಾಯದ ಹಕ್ಕೊತ್ತಾಯ ಸಮಾವೇಶಕ್ಕೆ ಉತ್ತಮ ಪ್ರತಿಕ್ರಿಯೆ
50 ಸಾವಿರ ಜನ ಸೇರುವ ನಿರೀಕ್ಷೆ ; ಸತ್ಯಜಿತ್‌ ಸುರತ್ಕಲ್

Malenadu Mirror Desk

ಶಿವಮೊಗ್ಗದಲ್ಲಿ ಗ್ಯಾಂಗ್ ವಾರ್ ಇಬ್ಬರ ಬರ್ಬರ ಕೊಲೆ

Malenadu Mirror Desk

ಕಲ್ಲುಕ್ವಾರಿಗಳಿಗೆ ಅನುಮತಿ: ಪುನರ್ ಪರಿಶೀಲನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.