ಶಿವಮೊಗ್ಗ ಸಮೀಪ ಲಾರಿ-ಕಾರು ನಡುವೆ ಭಾನುವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಯುವಕರು ಸಾವಿಗೀಡಾಗಿದ್ದು, ಒಬ್ಬ ತೀವ್ರಗಾಯಗೊಂಡು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ
ದಾವಣಗೆರೆ ಮೂಲದ ವಿವೇಕ್ ,ಕಾರ್ತಿಕ್ ಹಾಗೂ .ಮೋಹನ್ ಮೃತರು. ಎಲ್ಲರೂ 21 ವರ್ಷದವರಾಗಿದ್ದು, ಶಿವಮೊಗ್ಗದಿಂದ ಸವಳಂಗ ಮಾರ್ಗವಾಗಿ ದಾವಣಗೆರೆಗೆ ಬಲೆನೊ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಸವಳಂಗ ಸಮೀಪದ ಕಲ್ಲಾಪುರ ಬಳಿ ಶಿವಮೊಗ್ಗಕ್ಕೆ ಬರುತಿದ್ದ ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿಯಾಗಿ ಢಿಕ್ಕಿಯಾಗಿದೆ.
ಗಂಭೀರ ಗಾಯಗೊಂಡ ಮತ್ತೊಬ್ಬನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.