Malenadu Mitra
ರಾಜ್ಯ

ಕುವೆಂಪು ವಿವಿ: ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಉತ್ತಮ‌ ಪ್ರತಿಕ್ರಿಯೆ

ಕುವೆಂಪು ವಿವಿ: 2022-23ನೇ ಸಾಲಿನ ಸ್ನಾತಕೋತ್ತರ ಪದವಿ ಪ್ರವೇಶಾತಿ

ಶಂಕರಘಟ್ಟ, ಡಿ. 19: ಕುವೆಂಪು ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಸ್ನಾತಕೋತ್ತರ ಪದವಿ ಪ್ರವೇಶ ಕೌನ್ಸೆಲಿಂಗ್‌ನಲ್ಲಿ ಸುಮಾರು 30ಕ್ಕೂ ಹೆಚ್ಚು ವಿಭಾಗಗಳಿಗೆ ವಿದ್ಯಾರ್ಥಿಗಳು ಉತ್ಸಾಹದೊಂದಿಗೆ ಪ್ರವೇಶ ಪಡೆದುಕೊಂಡರು.

ವಿಶ್ವವಿದ್ಯಾಲಯದ ಮುಖ್ಯ ಆವರಣ, ಕಡೂರು ಪಿ.ಜಿ.ಕೇಂದ್ರ, ಚಿಕ್ಕಮಗಳೂರು ಪಿಜಿ ಕೇಂದ್ರ ಮತ್ತು 20ಕ್ಕೂ ಹೆಚ್ಚು ಸ್ನಾತಕೋತ್ತರ ಕಾಲೇಜುಗಳ ಎಲ್ಲಾ ವಿಭಾಗಗಳಿಗೆ ಡಿಸೆಂಬರ್ 19, 20, ಮತ್ತು 21ರಂದು ಪ್ರವೇಶಾತಿ ಕೌನ್ಸೆಲಿಂಗ್ ಹಮ್ಮಿಕೊಳ್ಳಲಾಗಿದೆ. ಮೊದಲ ದಿನವಾದ ಸೋಮವಾರದಂದು ಮೆರಿಟ್ ಸೀಟುಗಳಿಗೆ ಪ್ರವೇಶಾತಿ ಪ್ರಕ್ರಿಯೆ ಯಾವುದೇ ತೊಡಕುಗಳಿಲ್ಲದೆ ನಡೆಯಿತು. 20 ಹಾಗೂ 21ರಂದು ಪೇಮೆಂಟ್ ಮತ್ತು ಇತರೆ ಕೋಟಾಗಳ ಸೀಟುಗಳಿಗೆ ಪ್ರವೇಶಾತಿ ನಡೆಯಲಿದೆ.

ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದ ಪ್ರಕಾರ ಸೋಮವಾರ ಸಂಜೆ 4 ಗಂಟೆಯ ಹೊತ್ತಿಗೆ ಎಲ್ಲ ಸ್ನಾತಕೋತ್ತರ ವಿಭಾಗಗಳ ಶೇ.62ರಷ್ಟು ಸೀಟುಗಳು ಭರ್ತಿಯಾಗಿದ್ದವು.
ಕಳೆದ ಬಾರಿಯಂತೆ ವಾಣಿಜ್ಯ ಮತ್ತು ರಸಾಯನಶಾಸ್ತ್ರ ವಿಭಾಗಗಳ ಪ್ರವೇಶಾತಿಗಾಗಿ ಅತಿಹೆಚ್ಚು ಅಭ್ಯರ್ಥಿಗಳು ಆಗಮಿಸಿದ್ದು, ಭಾರೀ ಬೇಡಿಕೆಯಿತ್ತು. ಇದೇ ಮೊದಲ ಬಾರಿಗೆ ರಾಜ್ಯಸರ್ಕಾರದ ಕೇಂದ್ರಿಕೃತ ಶೈಕ್ಷಣಿಕ ಪೋರ್ಟಲ್ ಯು.ಯು.ಸಿ.ಎಂ.ಎಸ್. ಮೂಲಕ ಪ್ರವೇಶಾತಿ ಅರ್ಜಿ ಹಾಕಲು ಅವಕಾಶ ನೀಡಲಾಗಿದ್ದರೂ ಅಭ್ಯರ್ಥಿಗಳ ಪ್ರತಿಕ್ರಿಯೆ ಉತ್ತಮವಾಗಿದ್ದು, ಪ್ರವೇಶಾತಿ ಪ್ರಕ್ರಿಯೆ ಭರ್ಜರಿಯಾಗಿಯೇ ನಡೆಯಿತು.

ಪ್ರವೇಶಾತಿ ಪಡೆದ ಕೋರ್ಸುಗಳ ದಾಖಲಾತಿ ನಿರ್ವಹಣೆ ಹಾಗೂ ಶುಲ್ಕವನ್ನು ಭರಿಸಲು ವಿದ್ಯಾರ್ಥಿಗಳಿಗೆ ಸುಲಭ ಮಾದರಿಗಳಲ್ಲಿ ಅವಕಾಶಗಳನ್ನು ನೀಡಲಾಗಿತ್ತು. ಆಫ್‌ಲೈನ್‌ನಲ್ಲಿ ಶುಲ್ಕ ಭರಿಸುವವರ ಸಂಖ್ಯೆ ಹೆಚ್ಚಾದಂತೆ ಬ್ಯಾಂಕಿನಲ್ಲಿ ಮೂರು ಕೌಂಟರ್‌ಗಳನ್ನು ತೆರೆಯಲಾಗಿತ್ತು. ಹೆಚ್ಚುವರಿಯಾಗಿ ವಿವಿಯ ಆಡಳಿತ ಭವನದ ಹಣಕಾಸು ವಿಭಾಗದಲ್ಲಿ ಮತ್ತೆ ಮೂರು ಕೌಂಟರ್‌ಗಳನ್ನು ತೆರೆದು ಶುಲ್ಕ ಭರಿಸುವ ಪ್ರಕ್ರಿಯೆಯನ್ನು ಸುಲಲಿತಗೊಳಿಸಲಾಯಿತು.

ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಕ್ಕೂ ಹೆಚ್ಚು ಸೀಟು ಆಕಾಂಕ್ಷಿಗಳು ಮತ್ತು ಅವರ ಪೋಷಕರು ಉತ್ಸುಕತೆಯಿಂದ ಪ್ರವೇಶ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ವಿವಿಯ ವಿಭಾಗಗಳನ್ನು ಕಲೆ ಮತ್ತು ಸಮಾಜವಿಜ್ಞಾನ ವಿಷಯಗಳು, ವಾಣ ಜ್ಯ ಮತ್ತು ನಿರ್ವಹಣಾ ವಿಷಯಗಳು, ಅನ್ವಯಿಕ ವಿಜ್ಞಾನಗಳು ಮತ್ತು ಮೂಲ ವಿಜ್ಞಾನಗಳೆಂದು ವಿಂಗಡಿಸಿ ಅನುಕ್ರಮವಾಗಿ ಸಮಾಜವಿಜ್ಞಾನ, ವಾಣಿಜ್ಯಶಾಸ್ತ್ರ ಮತ್ತು ಬಸವ ಭವನ, ಗಣಿತ ವಿಜ್ಞಾನ ಮತ್ತು ಜೀವ ವಿಜ್ಞಾನ ವಿಷಯಗಳ ಸಮುಚ್ಚಯಗಳಲ್ಲಿ ಪ್ರವೇಶಾತಿ ಹಮ್ಮಿಕೊಳ್ಳಲಾಗಿತ್ತು. ಮುಂದಿನ ಎರಡು ದಿನವೂ ಇದೇ ಕಟ್ಟಡಗಳಲ್ಲಿ ಕೌನ್ಸೆಲಿಂಗ್ ನಡೆಯಲಿದೆ.

ವಿಶ್ವವಿದ್ಯಾಲಯಕ್ಕೆ ಆಗಮಿಸುವ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ವಿವಿಯದ್ವಾರದ ಬಳಿಯೇ ವಿಭಾಗವಾರು ಕೌನ್ಸೆಲಿಂಗ್ ಕಟ್ಟಡದ ವಿವರ, ಮಾರ್ಗತೋರುವ ಸೂಚನಾ ಫಲಕಗಳು, ಅಗತ್ಯ ದಾಖಲೆಗಳ ವಿವರ ಸೇರಿದಂತೆ ಸ್ವಾಗತಕೋರುವ ಫಲಕಗಳನ್ನು ಹಾಕಲಾಗಿತ್ತು. ಜೊತೆಗೆ ಪ್ರತಿಕಟ್ಟಡದ ಬಳಿಯೂ ಪೂರಕ ಮಾಹಿತಿ ನೀಡಲಾಗಿತ್ತು. ಸೀಟುಗಳ ವಿವಿರ, ವಿದ್ಯಾರ್ಥಿ ಮಾಹಿತಿ, ಕಾಲೇಜು ಆಯ್ಕೆ ಕುರಿತ ಮಾಹಿತಿಗಳನ್ನು ಯಾವುದೇ ಗೊಂದಲಗಳಿಗೆ ದಾರಿಯಾಗದಂತೆ ಡಿಜಿಟಲ್‌ಬೋರ್ಡ್ಗಳಲ್ಲಿ ಪ್ರದರ್ಶಿಸಲಾಗುತ್ತಿತ್ತು ಹಾಗೂ ಮೈಕ್ ಮೂಲಕ ಆಯ್ಕೆಗೊಂಡವರ ಹೆಸರುಗಳನ್ನು ಘೋಷಿಸಲಾಗುತ್ತಿತ್ತು.

#

Ad Widget

Related posts

ಮೀಸಲಾತಿಯಿಂದ ಅಭಿವೃದ್ಧಿ ಕುಂಠಿತವಾಗುವುದಿಲ್ಲ: ಬಿ.ಕೆ. ಹರಿಪ್ರಸಾದ್

Malenadu Mirror Desk

ಶಿವಮೊಗ್ಗ ನಗರದ ಹೊಸ ಬಡಾವಣೆಗಳಿಗೆ 96ಕೋಟಿ ರೂ. ವೆಚ್ಚದಲ್ಲಿ ನೀರು

Malenadu Mirror Desk

ಶಿವಮೊಗ್ಗದಲ್ಲಿ ಕೊರೊನಕ್ಕೆ 4 ಸಾವು, 147 ಸೋಂಕು,ಸಾಗರದಲ್ಲಿ ಒಂದೇ ಒಂದು ಕೇಸ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.