Malenadu Mitra
ರಾಜಕೀಯ ರಾಜ್ಯ ಶಿವಮೊಗ್ಗ ಸೊರಬ

ಹಲವೆಡೆ ಬಡವರ ಬಂಧು ಬಂಗಾರಪ್ಪ ಸ್ಮರಣೆ
 ಮಧು ಬಂಗಾರಪ್ಪ ಅವರಿಂದ ಸಮಾಧಿಗೆ ಪೂಜೆ

ಸೊರಬ: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ೧೧ನೇ ಪುಣ್ಯಸ್ಮರಣೆ ಅಂಗವಾಗಿ ಸೋಮವಾರ ಪಟ್ಟಣದ ಬಂಗಾರಧಾಮದಲ್ಲಿರುವ ಸಮಾಧಿಗೆ ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್.ಮಧುಬಂಗಾರಪ್ಪ ಅವರು ಪಕ್ಷದ ಮುಖಂಡರು ಹಾಗೂ ಕುಟುಂಬ ಸದಸ್ಯರೊಂದಿಗೆ ಪೂಜೆ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಮಧುಬಂಗಾರಪ್ಪ, ಎಸ್.ಬಂಗಾರಪ್ಪ ಅವರು ತಮ್ಮ ಅಧಿಕಾರಾವಧಿಯಲ್ಲಿ ಬಡವರ, ಹಿಂದುಳಿದ ವರ್ಗಗಳ, ರೈತರ ಪರವಾದ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರು. ಅವು ಇಂದಿಗೂ ಜನಮಾನಸದಲ್ಲಿ ಉಳಿದಿವೆ. ಅವರ ಆದರ್ಶ ರಾಜಕೀಯವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡು ಸದಾ ಜನ ಸೇವೆಯಲ್ಲಿ ತೊಡಗಿದ್ದೇನೆ ಎಂದರು.
ಕಾರವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ.ಅಣ್ಣಪ್ಪ ಹಾಲಘಟ್ಟ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ಜೋತಾಡಿ, ಮುಖಂಡರಾದ ಎಚ್.ಗಣಪತಿ, ಎನ್.ಜಿ.ನಾಗರಾಜ್, ಭಾಸ್ಕರ್ ಬರಗಿ, ರವಿ ಬರಗಿ, ಸಂಜೀವ ನೇರಲಿಗೆ, ಹಬೀಬುಲ್ಲಾ ಹವಾಲ್ದಾರ್, ಜಗದೀಶ್, ಕುಮಾರಸ್ವಾಮಿ, ಯು.ಫಯಾಜ್ ಅಹಮ್ಮದ್, ಸಂತೋಷ್ ಕೊಡಕಣಿ, ಶ್ರೀಕಾಂತ ಚಿಕ್ಕಶಕುನ, ಪಾಂಡು ಕೊಡಕಣಿ, ಸಂಜಯ್ ದೇವತಿಕೊಪ್ಪ, ಮೋಹನ ಕುಪ್ಪೆ, ರವಿಕುಮಾರ್ ಶೆಟ್ಟಿ, ಲಕ್ಷ್ಮಣಪ್ಪ. ನಾಗಪ್ಪ ಮಾಸ್ತರ್ ಇತರರಿದ್ದರು.


ರಾಜಕಾರಣದ ವಿಶ್ವ ವಿದ್ಯಾಲಯವಾಗಿದ್ದರು: ಬೇಳೂರು

ಶಿವಮೊಗ್ಗ,ಡಿ.೨೬ ಬಂಗಾರಪ್ಪ ಬಡವರ ಭಾಗ್ಯನಿಧಿಯಾಗಿದ್ದರು. ಅವರ ಬಡವರ ಪರವಾದ ಯೋಜನೆಗಳು ಇಂದಿಗೂ ರಾಜಕಾರಣಿಗಳಿಗೆ ಮಾರ್ಗದರ್ಶಕವಾಗಿವೆ ಎಂದು ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದರು.
ಜಿಲ್ಲಾ ಆರ್ಯ ಈಡಿಗರ ಭವನದಲ್ಲಿ ಜಿಲ್ಲಾ ಆರ್ಯ ಈಡಿಗರ ಸಂಘದ ವತಿಯಿಂದ ನಡೆದ ಬಂಗಾರಪ್ಪ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.
ಬಂಗಾರಪ್ಪ ರಾಜಕಾರಣದ ಒಂದು ವಿಶ್ವವಿದ್ಯಾನಿಲಯವಿದ್ದಂತೆ. ಅವರ ರಾಜಕೀಯ ಮೀಮಾಂಸೆಯನ್ನು ಕಲಿತ ಅನೇಕರು ಇಂದು ಬೇರೆಬೇರೆ ಪಕ್ಷಗಳಲ್ಲಿ ತಮ್ಮದೇ ಆದ ವಿಶೇಷ ಸ್ಥಾನ ಪಡೆದಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಬಡವರ ಪರವಾದ ಅನೇಕ ಯೋಜನೆಗಳನ್ನು ಜಾರಿಗೆ ತಂದವರು. ಅವರಿಗೆ ಬಡವರ ಬೆವರಿನ ಬೆಲೆ ಗೊತ್ತಿತ್ತು. ಹಾಗಾಗಿಯೇ ಇಡೀ ಕರ್ನಾಟಕದಲ್ಲಿ ಅವರೊಬ್ಬ ಧೀಮಂತ ನಾಯಕ ಎನಿಸಿಕೊಂಡರು ಎಂದರು.
 ನನ್ನಂತಹ ಅನೇಕ ವ್ಯಕ್ತಿಗಳನ್ನು ಗುರುತಿಸಿ ನಮಗೊಂದು ರಾಜಕೀಯ ಶಕ್ತಿಯನ್ನು ಅವರು ನೀಡಿದ್ದಾರೆ. ಅವರಿಂದ ಬೆಳಕಿಗೆ ಬಂದ ಕೆಲವರು ಅವರನ್ನೇ ಮರೆತಿರುವುದು ವಿಷಾದನೀಯ. ಅವರ ಸಿದ್ಧಾಂತಗಳು ಪಕ್ಷಾತೀತವಾಗಿವೆ. ಅದನ್ನು ಅನುಸರಿಸುವುದು ಇಂದಿನ ಎಲ್ಲಾ ರಾಜಕಾರಣಿಗಳ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಹುಲ್ತಿಕೊಪ್ಪ ಆರ್. ಶ್ರೀಧರ್, ಜಿ.ಡಿ. ಮಂಜುನಾಥ್, ಹೊನ್ನಪ್ಪ, ಸುರೇಶ್ ಬಾಳೇಗುಂಡಿ, ಕಾಗೋಡು ರಾಮಪ್ಪ, ಎಸ್.ಎಂ. ಮಹೇಶ ಬಂಡಿ, ರಾಮಚಂದ್ರಪ್ಪ, ತೇಕಲೆ ರಾಜಪ್ಪ, ಡಿ. ದೇವಪ್ಪ, ಹೆಚ್.ಎನ್. ಮಹೇಂದ್ರ, ವೆಂಕಟೇಶ ಮೂರ್ತಿ, ಕೃಷ್ಣಮೂರ್ತಿ ತಡಗಣಿ ನಾಗರಾಜ್, ಕುಪ್ಪಯ್ಯ, ರಮೇಶ್, ಕೆ.ಎಲ್. ಉಮೇಶ್, ರಾಜಕುಮಾರ್, ನಾಗರಾಜ್ ಇನ್ನಿತರರಿದ್ದರು.

ಎಸ್. ಬಂಗಾರಪ್ಪ ಎಂದೂ ಮರೆಯದ ರಾಜಕಾರಣಿ : ಎಂ.ಡಿ. ಉಮೇಶ

ಸೊರಬ : ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಎಂದೂ ಮರೆಯದ ರಾಜಕಾರಣಿ. ಬಂಗಾರಪ್ಪನವರಿಗೆ ಬಂಗಾರಪ್ಪನವರೇ ಸಾಟಿ. ಅವರ ಆಶೀರ್ವಾದ-ಕೃಪೆಯೊಂದಿದ್ದರೆ ರಾಜಕೀಯರಂಗದಲ್ಲಿ ಏನು ಬೇಕಾದರೂ ಆಗಬಹುದು ಮತ್ತು ಸಾಧಿಸಬಹುದು ಎಂದು ಪುರಸಭಾ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಎಂ.ಡಿ. ಉಮೇಶ ಹೇಳಿದರು.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ೧೧ನೇ ಪುಣ್ಯ ಸ್ಮರಣೆ ಅಂಗವಾಗಿ ತಾಲ್ಲೂಕು ಬಿಜೆಪಿ ವತಿಯಿಂದ ಪಟ್ಟಣದ ಬಸ್ಟ್ಯಾಂಡ್ ಆವರಣದಲ್ಲಿರುವ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ರಾಜ್ಯದಲ್ಲಿ ಬರಗಾಲ ಬಿದ್ದಾಗ ಜಿಲ್ಲೆಯ ಲಕ್ಷಾಂತರ ರೈತವರ್ಗಕ್ಕೆ ಬಿತ್ತನೆ ಬೀಜ ಹಾಗೂ ಜೋಳವನ್ನು ಉಚಿತವಾಗಿ ಹಂಚಿದರು. ಇದೊಂದು ಬಂಗಾರಪ್ಪನವರಿಗೆ ದೊಡ್ಡ ಸಡಗರವೇ ಆಯಿತು. ಬಡವರನ್ನು ಕಂಡು ಅವರ ಗೋಳನ್ನು ನೋಡಿ ಸಹಾಯ ಮಾಡದೇ ಮುಂದಕ್ಕೆ ಹೋಗುವುದು ಬಂಗಾರಪ್ಪನವರ ಜಾಯಮಾನವಲ್ಲ ಎಂದರು.
 ಪುರಸಭಾ ಸದಸ್ಯರಾದ ಪ್ರಭು ಮೇಸ್ತ್ರಿ, ನಟರಾಜ ಉಪ್ಪಿನ,  ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಟೌನ್ ಅಧ್ಯಕ್ಷ ಅಶೋಕ ಶೇಟ್, ಗುರುಮೂರ್ತಿ ಹಿರೇಶಕುನ, ಡ್ರೈವರ್ ಸ್ವಾಮಿ, ಆಟೋ ಶಿವಕುಮಾರ ಮೊದಲಾದವರು ಇದ್ದರು.

Ad Widget

Related posts

ಷೇರುದಾರರ ಸಹಕಾರದಿಂದ ಸಂಘದ ಪ್ರಗತಿ

Malenadu Mirror Desk

ಮಲೆನಾಡಲ್ಲಿ ಮಳೆ ಅಬ್ಬರ ಮೈದುಂಬಿದ ನದಿಗಳು ಜಲಾಶಯಗಳ ನೀರಿನ ಮಟ್ಟ ಏರಿಕೆ

Malenadu Mirror Desk

ಶಾಸಕ ಹಾಲಪ್ಪಪುತ್ರ ಚೇತನ್ ಅದ್ದೂರಿ ವಿವಾಹ,ಗಣ್ಯರಿಂದ ಶುಭಹಾರೈಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.