ಶಿವಮೊಗ್ಗ ಡಿ: ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು, ಲೋಕೋಪಯೋಗಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ.ಎಸ್.ಸೆಲ್ವಕುಮಾರ್ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ಕಂದಾಯ ಇಲಾಖೆ ವಿಪತ್ತು ನಿರ್ವಹಣೆ, ಸಾಮಾಜಿಕ ಭದ್ರತೆ ಯೋಜನೆಗಳು, ಕೃಷಿ ಇಲಾಖೆ, ಆಹಾರ ಇಲಾಖೆ, ಕೌಶಲ್ಯಾಭಿವೃದ್ದಿ ಇಲಾಖೆ, ಜಿಲ್ಲಾ ನಗರಾಭಿವೃದ್ದಿ ಕೋಶ ಮತ್ತು ಆರೋಗ್ಯ ಇಲಾಖೆಗಳು ತಮ್ಮ ತಮ್ಮ ಇಲಾಖೆಯ ಕಾರ್ಯಕ್ರಮಗಳನ್ನು ನಿಗದಿತ ಅವಧಿಯೊಳಗೆ ಕೈಗೊಂಡು ನಿಗದಿತ ಗುರಿ ಸಾಧಿಸುವಂತೆ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್ ಹೊನ್ನಳ್ಳಿ ಪ್ರಗತಿ ವರದಿ ನೀಡಿ, ಜಿಲ್ಲೆಯಲ್ಲಿ ಜೂನ್ ಮಾಹೆಯಿಂದ ಇಲ್ಲಿಯವರೆಗೆ ಅತಿ ಹೆಚ್ಚು ಮಳೆಯಿಂದಾಗಿ 479 ಮನೆಗಳು ಜಲಾವೃತಗೊಂಡಿದ್ದು, ಅಷ್ಟು ಮನೆಗಳಿಗೂ ಒಟ್ಟು ರೂ.47.90 ಲಕ್ಷ ಪರಿಹಾರ ಒದಗಿಸಲಾಗಿದೆ. 06 ಮಾನವ ಹಾನಿಗೆ ರೂ.30 ಲಕ್ಷ ಪರಿಹಾರ ಒದಗಿಸಲಾಗಿದೆ. ಮನೆಗಳ ಹಾನಿಗೆ ಸಂಬಂಧಿಸಿದಂತೆ ಒಟ್ಟು ಹಾನಿಯಾದ 3544 ಮನೆಗಳಿಗೆ ಒಟ್ಟು ಇದುವರೆಗೆ ರೂ.2004.94 ಲಕ್ಷ ಪರಿಹಾರ ನೀಡಲಾಗಿದೆ.
ಬೆಳೆಹಾನಿಗೆ ಸಂಬಂಧಿಸಿದಂತೆ ಒಟ್ಟು 13803 ಹೆ. ನಮೂದಾಗಿದ್ದು 11419 ಹೆ. ಅನುಮೋದನೆಗೊಂಡಿದ್ದು, 9709 ಫಲಾನುಭವಿಗಳಿಗೆ ಪರಿಹಾರ ನೀಡಲಾಗಿದೆ. ಪರಿಹಾರ ತಂತ್ರಾಂಶದಲ್ಲಿ ಒಟ್ಟು 5097 ಬೆಳೆ ನಮೂದಾಗಿದ್ದು 4435.46 ಹೆ. ಸರ್ಕಾರಕ್ಕೆ ವರದಿ ಮಾಡಲಾಗಿದೆ.
ಪ್ರವಾಹದಿಂದ ಮೂಲಭೂತ ಸೌಕರ್ಯಗಳಾದ ಶಾಲೆ, ಅಂಗನವಾಡಿ, ಗ್ರಾಮೀಣ ರಸ್ತೆ, ಕೆರೆ, ಮೋರಿ/ಸೇತುವೆ ದುರಸ್ತಿ ಸೇರಿದಂತೆ ಒಟ್ಟು 94 ಕಾಮಗಾರಿ ಅನುಮೋದನೆಯಾಗಿದೆ.
ಕಲಂ 94-ಎ ರಡಿ ಅನಧಿಕೃತ ಸಾಗುವಳಿ ಸಕ್ರಮೀಕರಣ ನಮೂನೆ 50 ರಡಿ ಜಿಲ್ಲೆಯಲ್ಲಿ 110739 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 89085 ಅರ್ಜಿಗಳು ತಿರಸ್ಕøತಗೊಂಡಿವೆ. 21654 ಅರ್ಜಿದಾರರಿಗೆ ಸಾಗುವಳಿ ಚೀಟಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕೃಷಿ ಜಂಟಿ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಜಿಲ್ಲೆಯಲ್ಲಿ ಜನವರಿ 1 ರಿಂದ ನವೆಂಬರ್ 30 ವರೆಗೆ ಜಿಲ್ಲೆಯಲ್ಲಿ ಸರಾಸರಿ 2439 ಮಿ.ಮೀ ಮಳೆಯಾಗಿದೆ. 2022 ರ ಮುಂಗಾರು ಹಂಗಾಮಿನಲ್ಲಿ 79602 ಹೆ. ಭತ್ತದ ಗುರಿ ಇದ್ದು 79131 ಹೆಕ್ಟೇರ್ ಭೂಮಿಯಲ್ಲಿ ಭತ್ತ ಬೆಳೆಯಲಾಗಿದೆ. 46877 ಹೆ. ಮುಸಿಕಿನ ಜೋಳ, 742 ಹೆ. ನಲ್ಲಿ ಏಕದಳ(ರಾಗಿ & ಜೋಳ), 353 ಹೆ. ಪ್ರದೇಶದಲ್ಲಿ ದ್ವಿದಳ ಧಾನ್ಯ ಮತ್ತು 1127 ಹೆ.ನಲ್ಲಿ ವಾಣಿಜ್ಯ ಬೆಳೆ ಬೆಳೆಯಲಾಗಿದೆ.
ರೈತರ ಆತ್ಮಹತ್ಯೆಯ 69 ಪ್ರಕರಣದಲ್ಲಿ 67 ಪ್ರಕರಣಗಳಿಗೆ ಪರಿಹಾರ ವಿತರಿಸಲಾಗಿದೆ. ಬಣವೆ ನಷ್ಟ 77 ಪ್ರಕರಣದಲ್ಲಿ 72 ಕ್ಕೆ ಪರಿಹಾರ ಹಾಗೂ 62 ಹಾವು ಕಡಿತ ಪ್ರಕರಣದಲ್ಲಿ 58 ಕ್ಕೆ ಪರಿಹಾರ ಒದಗಿಸಲಾಗಿದೆ ಎಂದರು.
ಆಹಾರ ಇಲಾಖೆ ಜಂಟಿ ನಿರ್ದೇಶಕರು ಮಾತನಾಡಿ, ಹೊಸ ಆದ್ಯತಾ ಪಡಿತರ ಚೀಟಿ ಕೋರಿ ಈವರೆಗೆ 18248 ಅರ್ಜಿ ಬಂದಿದ್ದು, 13219 ವಿಲೇವಾರಿ ಮಾಡಲಾಗಿದೆ ಎಂದರು.
ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮೂಕಪ್ಪ ಕರಿಭೀಮಣ್ಣನವರ್ ಮಾತನಾಡಿ, 2021-22 ನೇ ಸಾಲಿಗೆ ಡಾ.ಬಿ.ಆರ್.ಅಂಬೇಡ್ಕರ್ ನಗರ ವಸತಿ ಮತ್ತು ವಾಜಪೇಯಿ ನಗರ ವಸತಿ ಯೋಜನೆಯಡಿ ಪ.ಜಾತಿ, ಪ.ಪಂ, ಸಾಮಾನ್ಯ ಮತ್ತು ಅಲ್ಪಸಂಖ್ಯಾತ ಸಮುದಾಯದಿಂದ ಒಟ್ಟು 935 ಅರ್ಜಿಗಳು ಬಂದಿದ್ದು, 773 ಫಲಾನುಭವಿಗಳ ಆಯ್ಕೆ ಮಾಡಲಾಗಿದೆ ಎಂದರು.
ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ, ಜಿಲ್ಲೆಯಲ್ಲಿ 85 ವೆಂಟಿಲೇಟರ್ ಬೆಡ್‍ಗಳಿದ್ದು, 52 ಪೀಡಿಯಾಟ್ರಿಕ್ ವೆಂಟಿಲೇಟರ್ ಬೆಡ್‍ಗಳಿವೆ. 61 ಕೆಎಲ್ ಆಕ್ಸಿಜನ್ ಸ್ಟೋರೇಜ್ ಸಾಮಥ್ರ್ಯವಿದ್ದು 2900 ದಿನವೊಂದಕ್ಕೆ ಕೋವಿಡ್ ಟೆಸ್ಟ್ ಸಾಮಥ್ರ್ಯವಿದೆ. ಪ್ರಸ್ತುತ 02 ಕೋವಿಡ್ ಪಾಸಿಟಿವ್ ಮತ್ತು 02 ಹೋಮ್ ಐಸೋಲೇಷನ್ ಪ್ರಕರಣಗಳಿವೆ. ನಿಯಮಿತವಾಗಿ ಗ್ರಾಮ ಮತ್ತು ತಾಲ್ಲೂಕು ಮಟ್ಟದ ಟಾಸ್ಕ್‍ಪೋರ್ಸ್ ಸಮಿತಿ ಸಭೆ ನಡೆಯುತ್ತಿದ್ದು, ಎಲ್ಲ ಅವಶ್ಯಕ ಔಷಧಿಗಳು ಮತ್ತು ಸಲಕರಣಗಳ ದಾಸ್ತಾನು ಇದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿ.ಪಂ ಸಿಇಓ ಎನ್.ಡಿ.ಪ್ರಕಾಶ್, ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ,ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
![](https://malenadumirror.com/wp-content/uploads/2022/12/SAVE_20221227_173729-1024x486.jpg)