ಮಾಲಾಧಾರಿಯಾಗಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದ ಗೃಹಸಚಿವ ಆರಗ ಜ್ಞಾನೇಂದ್ರ.
ಆಪ್ತರೊಂದಿಗೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳಿರುವ ಆರಗ ಜ್ಞಾನೇಂದ್ರ.
ನಿನ್ನೆಯೇ ಕೇರಳಕ್ಕೆ ತೆರಳಿರುವ ಆರಗ ಜ್ಞಾನೇಂದ್ರ ಸೋಮವಾರ ಇರುಮುಡಿಯೊಂದಿಗೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ.
ಈ ಹಿಂದೆಯೂ ಆರಗ ಜ್ಞಾನೇಂದ್ರರನ್ನು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಕರೆದೊಯ್ಯಲು ಅವರ ಆಪ್ತರು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ.
ಆದರೆ ಈ ಬಾರಿ ತಮ್ಮ ಆಪ್ತರ ಸಲಹೆ ಹಿನ್ನೆಲೆಯಲ್ಲಿ ಆರಗ ಜ್ಞಾನೇಂದ್ರ ಶಬರಿಮಲೆಗೆ ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನಪಡೆದಿದ್ದಾರೆ.