Malenadu Mitra
ರಾಜ್ಯ

ಮುಸ್ಲಿಂ ಬಂಧುಗಳನ್ನು ಕೂಡ ನಮ್ಮ ಜೊತೆ ಕರೆದುಕೊಂಡು ಹೋಗುತ್ತೇವೆ :ಯಡಿಯೂರಪ್ಪ

ಶಿವಮೊಗ್ಗ: ಸ್ಥಳೀಯ ಕಾರ್ಯಕರ್ತರು ಹಾಗೂ ಶಾಸಕರು ಹೆಚ್ಚಿನ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಸಲಹೆ ಕೊಟ್ಟಿದ್ದಾರೆ. ಮನೆ ಮನೆಗೆ ಕಾರ್ಯಕರ್ತರು ಭೇಟಿ ಮಾಡಬೇಕು ಎಂದಿದ್ದಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು  ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
  ಸೋಗಾನೆ ವಿಮಾನ ನಿಲ್ದಾಣದ ಕಾಮಗಾರಿಯನ್ನು ಬುಧವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾವು ಮೋದಿಯವರು ಹೇಳಿದ ಕೆಲಸವನ್ನು ಪ್ರಾರಂಭಿಸಿದ್ದೇವೆ. ವಿಶೇಷವಾಗಿ ಮುಸ್ಲಿಂ ಬಂಧುಗಳನ್ನು ಕೂಡ ನಮ್ಮ ಜೊತೆ ಕರೆದುಕೊಂಡು ಹೋಗುತ್ತೇವೆ. ಅವರನ್ನು ಚೆನ್ನಾಗಿ ನೋಡಿಕೊಂಡಿದ್ದೇವೆ ನಮ್ಮ ಬಗ್ಗೆ ಅವರಿಗೂ ಗೌರವವಿದೆ, ಮುಂಬರುವ ದಿನಗಳಲ್ಲಿ ಅವರನ್ನು ಇನ್ನಷ್ಟು ಸಂಪರ್ಕ ಸಾಧಿಸುವ ಪ್ರಯತ್ನ ಮಾಡುತ್ತೇವೆ ಎಂದರು.
 ಮುಂದಿನ ವಿಧಾನಸಭೆ ಚುನಾವಣೆ ಗೆಲ್ಲುವ ಬಗ್ಗೆ ಚರ್ಚೆ ನಡೆಯಿತು. ಸುಮಾರು ಒಂದು ಗಂಟೆಗಳ ಕಾಲ ನಮಗೆ ಪ್ರಧಾನಿ ಮಾರ್ಗದರ್ಶನ ನೀಡಿದರು. ಬಹಳ ಉತ್ಸಾಹದಿಂದ ನಾವೆಲ್ಲರೂ ವಾಪಸ್ ಬಂದಿದ್ದೇವೆ, ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸವನ್ನು ಬಿ ಎಸ್ ವೈ  ವ್ಯಕ್ತಪಡಿಸಿದರು.
೧೪೦ ಕ್ಕೂ ಹೆಚ್ಚು ಕ್ಷೇತ್ರ:
 ರಾಜ್ಯದಲ್ಲಿ ಪಕ್ಷದ ಗೆಲುವಿಗಾಗಿ ಮೋದಿಜಿ ಅವರು ಹಾಗೂ ಅಮಿತ್ ಶಾ ಅವರು ಹೆಚ್ಚಿನ ಸಮಯವನ್ನು ಕೊಡುತ್ತಾರೆ, ಅವರುಗಳ ಸಮಯವನ್ನ ಸದುಪಯೋಗಪಡಿಸಿಕೊಂಡು ೧೪೦ ಕ್ಕೂ ಹೆಚ್ಚು ಸ್ಥಾನವನ್ನುಗೆದ್ದು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ತರುತ್ತೇವೆ ಎಂದು ಭರವಸೆಯನ್ನು ಕೊಟ್ಟು ಬಂದಿದ್ದೇವೆ, ಆ ವಿಶ್ವಾಸವೂ ನನಗಿದೆ ಎಂದರು.

ಏರ್‌ಪೋರ್ಟ್‌ ಉದ್ಘಾಟನೆ

ಫೆಬ್ರವರಿ ೨೭ ರ ಒಳಗಾಗಿ ಶಿವಮೊಗ್ಗದ ಏರ್‌ಪೋರ್ಟ್‌ನ್ನು ಉದ್ಘಾಟನೆ ಮಾಡಲಾಗುವುದು. ಈ ಸಂಬಂಧ ದಿನಾಂಕ ನಿಗದಿ ಆಗಿಲ್ಲ. ಇನ್ನೂ ನಾಲ್ಕೈದು ದಿನಗಳಲ್ಲಿ ದಿನಾಂಕ ಗೊತ್ತಾಗಲಿದೆ. ಪ್ರಧಾನಿಯವರು ಒಂದು ದಿನ ಸಮಯ ನೀಡಬಹುದು. ೯೫ ಪರ್ಸೆಂಟ್ ವರ್ಕ್ ಮುಗಿದಿದೆ. ಕೆಲವೊಂದು ಕ್ಲಿಯರೆನ್ಸ್ ಸಿಗಬೇಕಿದೆ. ಅದರ ಬಗ್ಗೆ ಮಾತನಾಡಿದ್ದೇವೆ. ಅದು ಸಹ ಆಗಲಿದೆ ಎಂದರು.

ReplyForward
Ad Widget

Related posts

ಮಲೆನಾಡಿನ ಅಡಕೆ ಮತ್ತು ಭೂಮಿ ಸಮಸ್ಯೆ ಕುರಿತು ಕೇಂದ್ರ ಸಚಿವರಿಗೆ ಮನವಿ, ಜಿಲ್ಲೆಯ ರೈತರ ಆತಂಕ ದೂರ ಮಾಡುವ ಭರವಸೆ

Malenadu Mirror Desk

ಶಿಕ್ಷಣದಿಂದ ಸಮಾಜದ ಏಳಿಗೆ : ಡಾ ರಾಮಪ್ಪ, ಶಾಲೆಗಳಿಗೆ ಸುಣ್ಣಬಣ್ಣ, ಗ್ರಂಥಾಲಯಗಳಿಗೆ ಪುಸ್ತಕ ಕೊಡುಗೆ

Malenadu Mirror Desk

ಪಂಚಮಸಾಲಿ 2Aಗೆ ಬೇಡ: ನಾರಾಯಣಗುರು ವೇದಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.