ಶಿವಮೊಗ್ಗ,ಜ.೨೦: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶ್ರೀ ನಾರಾಯಣಗುರು ಸಮಾಜ ಹಿತರಕ್ಷಣಾ ಹೋರಾಟ ಸಮಿತಿ ಜ.೨೨ ರಂದು ಶಿವಮೊಗ್ಗ ನಗರದಲ್ಲಿ ಹಮ್ಮಿಕೊಂಡಿರುವ ಹಕ್ಕೊತ್ತಾಯ ಸಮಾವೇಶವಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಸುಮಾರು ೫೦ ಸಾವಿರ ಮಂದಿ ಸೇರುವ ನಿರೀಕ್ಷೆಯಿದೆ
ಹಿಂದುಳಿದ ವರ್ಗದ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಈಡಿಗ ಅಭಿವೃದ್ಧಿ ನಿಗಮ ಘೋಷಣೆ ಮಾತ್ರ ಆಗಿದ್ದು, ಅದು ಆದೇಶವಾಗಬೇಕು. ಶಿವಮೊಗ್ಗ ವಿಮಾನನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಹೆಸರು ನಾಮಕಾರಣ ಮಾಡಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ಹಕ್ಕೊತ್ತಾಯ ಸಮಾವೇಶ ಆಯೋಜಿಸಲಾಗಿದೆ
ಜಿಲ್ಲೆ ಹಾಗೂ ಹೊರಜಿಲ್ಲೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರು ಬರಲಿದ್ದಾರೆ. ನಗರದ ಸೈನ್ಸ್ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಈಡಿಗರ ಭವನದಿಂದ ಬೃಹತ್ ಮೆರವಣಿಗೆ ಸಾಗಲಿದೆ. ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಮಾಡಲಾಗಿದೆ. ಈಡಿಗರ ಭವನದಿಂದ ಮೆರವಣಿಗೆ ಸಾಗಲಿದೆ. ಹಾದಿಯುದ್ದಕ್ಕೂ ಬಂಟಿಂಗ್ಸ್ ಹಾಕಲಾಗಿದ್ದು, ಸೈನ್ಸ್ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ.
ಹಳ್ಳಿಗಳಿಗೆ ಬಸ್ ವ್ಯವಸ್ಥೆ ಮಾಡಿದ್ದರೂ, ಜನರ ಸ್ವಯಂ ಪ್ರೇರಿತವಾಗಿ ಸಮಾವೇಶದಲ್ಲಿ ಭಾಗವಹಿಸುವರು. ಈಡಿಗ ಸಮಾಜದ ಗಣ್ಯರು, ಸ್ವಾಮೀಜಿಗಳು ಭಾಗವಹಿಸಲಿದ್ದಾರೆ.
ನಮ್ಮ ಹಕ್ಕೊತ್ತಾಯ ಸಮಾವೇಶ ಯಾವುದೇ ಪಕ್ಷ, ರಾಜಕಾರಣಿ ಹಾಗೂ ಸಿದ್ಧಾಂತದ ವಿರುದ್ಧ ಅಲ್ಲ. ನಮ್ಮ ಜನರಿಗೆ ಅನ್ಯಾಯವಾಗಿದೆ ಸರಕಾರ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಡಬೇಕಿದೆ
ಡಾ.ಎಸ್.ರಾಮಪ್ಪ, ಸಿಗಂದೂರು ಧರ್ಮದರ್ಶಿ
ಹಕ್ಕೊತ್ತಾಯ ಸಮಾವೇಶ ಇಲ್ಲಿಗೆ ಮುಗಿಯುವುದಿಲ್ಲ. ಸರಕಾರದ ಪ್ರತಿನಿಧಿಗಳ ಬಳಿ ನಿಯೋಗ ಹೋಗುತ್ತೇವೆ. ರಾಜ್ಯಮಟ್ಟದಲ್ಲಿಯೂ ದೊಡ್ಡ ಹೋರಾಟ ಕಟ್ಟುತ್ತೇವೆ. ಸಮಾವೇಶದ ಹಿಂದೆ ಯಾವುದೇ ವಯಕ್ತಿಕ ಉದ್ದೇಶವಿಲ್ಲ. ನಮ್ಮವರಿಗಾದ ಅನ್ಯಾಯಕ್ಕೆ ನ್ಯಾಯ ಕೇಳುತ್ತೇವೆ
ಸತ್ಯಜಿತ್ ಸುರತ್ಕಲ್. ಎಸ್‌ಎನ್‌ಜಿವಿ ರಾಜ್ಯಾಧ್ಯಕ್ಷ