Malenadu Mitra
ರಾಜ್ಯ ಶಿವಮೊಗ್ಗ

ಮಾದ್ಯಮ ಅಕಾಡೆಮಿ ಪ್ರಶಸ್ತಿ ಘೋಷಣೆ:೧೨೪ ಪತ್ರಕರ್ತರ ಆಯ್ಕೆ-೨೧ ಪತ್ರಕರ್ತರಿಗೆ ದತ್ತಿ ಪ್ರಶಸ್ತಿ

ಪ್ರಶಾಂತ ನಾತು,ರಂಗನಾಥ್,ಅಜಿತ್ ಹನುಮಕ್ಕನವರ್,ಮನೋಜ್,ದಿವಾಕರ್,ಆನಂದ್,ಜ್ಯೋತಿ ಇರ್ವತ್ತೂರ್,ಡಿ.ಪಿ ಸತೀಶ್, ಕಿರಣ್,ಆರ್.ರಾಮಕೃಷ್ಣ,ನಾಗರಾಜ ನೇರಿಗೆ,ಅರುಣ್ ಬಿ.ಎನ್ .ಧರಣೀಶ್ ಬೂಕನಕೆರೆ,ಹೊನ್ನಾಳಿ ಚಂದ್ರಶೇಖರ್,.ಚಿದಾನಂದ ಪಟೇಲ್,ಸುಕನ್ಯಾ,ಅರವಿಂದ ಬಿರಾದಾರ್ ಪ್ರಶಸ್ತಿ ಪುರಸ್ಕ್ರತರಲ್ಲಿ ಪ್ರಮುಖರು.

ಬೆಂಗಳೂರು: ಮಾದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ನೀಡಲಾಗುವ ಮಾದ್ಯಮ ಅಕಾಡೆಮಿ ಪ್ರಶಸ್ತಿಗಳು ಪ್ರಕಟವಾಗಿವೆ. ೨೦೧೯,೨೦೨೦,೨೦೨೧ ಮತ್ತು ೨೦೨೨ ರ ಸಾಲಿಗೆ ಅನ್ವಯವಾಗುವಂತೆ ಒಟ್ಟು ೧೨೪ ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾದವರಿಗೆ ತಲಾ ೫೦ ಸಾವಿರ,೨೫ ಸಾವಿರ ನಗದು ನಿಗಧಿಪಡಿಸಲಾಗಿದೆ.೨೧ ಪತ್ರಕರ್ತರನ್ನು ದತ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಪುರಸ್ಕ್ರತರ ಪಟ್ಟಿ ಕೆಳಕಂಡಂತಿದೆ.

೨೦೧೯ನೇ ಸಾಲಿನಲ್ಲಿ ಡೆಕ್ಕನ್ ಹೆರಾಲ್ಡ್ ನ ತಿಲಕ್ ಕುಮಾರ್ ಅವರಿಗೆ ವಿಶೇಷ ಪ್ರಶಸ್ತಿ ಜತೆಗೆ ೩೦ ಪತ್ರಕರ್ತರಿಗೆ ಪ್ರಶಸ್ತಿ ನೀಡಲಾಗಿದೆ,ಹರಿಪ್ರಕಾಶ್ ಕೋಣೆಮನೇ ,ಪ್ರಶಾಂತ ನಾತು,ಸುದರ್ಶನ ಚನ್ನಂಗಹಳ್ಳಿ,ಮನೋಜ್,ದಿವಾಕರ್,ಎಚ್.ವಿ ಕಿರಣ್,ರಾಘವೇಂದ್ರ ಗಣಪತಿ, ಜ್ಯೋತಿ ಇರ್ವತ್ತೂರು ಅವರು ಪ್ರಶಸ್ತಿಗೆ ಭಾಜನವಾದ ಪ್ರಮುಖರಾಗಿದ್ದಾರೆ.

೨೦೨೦ ರ ಸಾಲಿನಲ್ಲಿ ವಿಜಯವಾಣಿ ಸಂಸ್ಥಾಪಕರಾದ ವಿಜಯ್ ಸಂಕೇಶ್ವರ ಅವರನ್ನು ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಡಿ.ಪಿ ಸತೀಶ್,ರಾಕೇಶ್,ಅಜಿತ್ ಹನುಮಕ್ಕನವರ್,ಆರ್.ರಾಮಕೃಷ್ಣ,ಧರಣೀಶ್ ಬೂಕನಕೆರೆ,ಬಿ.ಎ ಅರುಣ್,ಹೊನ್ನಾಳಿ ಚಂದ್ರಶೇಖರ್,ಚಂದ್ತಹಾಸ ಹಿರೇ ಮಳಲಿ ಅವರು ಈ ಸಾಲಿನಲ್ಲಿ ಪ್ರಶಸ್ತಿ ಪಡೆದ ಇತರೆ ಪ್ರಮುಖರು.

೨೦೨೧ ರ ಸಾಲಿನಲ್ಲಿ ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ರಂಗನಾಥ್ ಅವರನ್ನು ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಇದರ ಜತೆಗೆ ಶಶಿಧರ್ ನಂದಿಕಲ್,ರುದ್ರಪ್ಪ,ರಾಮಸ್ವಾಮಿ ಹುಲ್ಕೋಡ್,ವಿಜಯ ಜೊನ್ನೇನಹಳ್ಳಿ,ಭಂಡಿಗಡಿ ನಂಜುಡಪ್ಪ,ಚಿದಾನಂದ ಪಟೇಲ್ ಈ ಸಾಲಿನಲ್ಲಿ ಪ್ರಶಸ್ತಿಗೆ ಭಾಜನರಾಗುತ್ತಿರುವ ಪ್ರಮುಖರಾಗಿದ್ದಾರೆ.

ಇನ್ನು ೨೦೨೨ ರಲ್ಲಿ ಹಿರಿಯ ಆರ್ಥಿಕ ತಜ್ಞರಾದ ಸುಶೀಲ ಸುಬ್ರಮಣ್ಯರವರನ್ನು ವಿಶೇಷ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಶಿವಮೊಗ್ಗ ಕ್ರಾಂತಿ ದೀಪ ಪತ್ರಿಕೆಯ ಸುದ್ದಿ ಸಂಪಾದಕ ನಾಗರಾಜ ನೇರಿಗೆ,ಅರವಿಂದ ಅಕ್ಲಾಪರ,ಸುಕನ್ಯಾ,ಅರವಿಂದ ಬಿರಾದಾರ್,ಮೇಲ್ಕಂಡ ಸಾಲಿನಲ್ಲಿ ಪ್ರಶಸ್ತಿ ಪಡೆದ ಪ್ರಮುಖರಾಗಿದ್ದಾರೆ.

ತಳ ಸಮುದಾಯದ ಬಗೆಗಿನ ಬರಹಗಳಿಗೆ ನೀಡಲಾಗುವ ಡಾ.ಬಿ.ಆರ್ ಅಂಬೇಡ್ಕರ್ ಅವರ ಸ್ಮರಣಾರ್ಥದ ಮೂಕನಾಯಕ ಪ್ರಶಸ್ತಿಯನ್ನು ದಲಿತ ವಾಯ್ಸ್ ಪತ್ರಿಕೆ(೨೦೧೯),ಪ್ರೊ.ಇಂದಿರರಾಜ್ ( ೨೦೨೦),ಪ್ರೊ.ಜಿ.ಎಸ್.ಜಯದೇವ್ (೨೦೨೧) ,ಪ್ರೊ.ಮುಜಾಫರ್ ಅಸ್ಸಾದಿ( ೨೦೨೨) ಅವರು ಪಡೆದಿದ್ದಾರೆ.

ಅತ್ಯುತ್ತಮ ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ನೀಡಲಾಗುವ ಆಂದೋಲನಾ ಪ್ರಶಸ್ತಿಯನ್ನು ೨೦೧೯ ರ ಸಾಲಿನಲ್ಲಿ ಕಲಬುರಗಿಯ ನೃಪತುಂಗ ಪತ್ರಿಕೆ,೨೦೨೦ ರ ಸಾಲಿನಲ್ಲಿ ಶಿವಮೊಗ್ಗದ ನಾವಿಕ ಪತ್ರಿಕೆ,೨೦೨೧ನೇ ಸಾಲಿಗೆ ಹುಬ್ಬಳ್ಳಿಯ ಸಂಜೆದರ್ಪಣ ಮತ್ತು ೨೦೨೨ ರ ಸಾಲಿನಲ್ಲಿ ಮಂಗಳೂರಿನ ಜಯಕಿರಣ ಪತ್ರಿಕೆ ಪಡೆದಿದೆ.

ಸಿನೆಮಾ ವರದಿಗಾರಿಕೆಗೆ ನೀಡಲಾಗುವ ಅರಗಿಣಿ ಪ್ರಶಸ್ತಿಯನ್ನು ೨೦೧೯ ರ ಸಾಲಿನಲ್ಲಿ ಜೋಡಿ(ಕನ್ನಡ ಪ್ರಭ),೨೦೨೦ ರಲ್ಲಿ ಗಣೇಶ ಕಾಸರಗೋಡು, ೨೦೨೧ ರಲ್ಲಿ ರಘುನಾಥ ಚ.ಹ ಮತ್ತು ೨೦೨೨ ರಲ್ಲಿ ಡಾ.ಶರಣ ಹುಲ್ಲೂರು ಪಡೆದಿದ್ದಾರೆ.

ಸಾಮಾಜಿಕ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಲೇಖನಗಳಿಗೆ ನೀಡುವ ಪ್ರಶಸ್ತಿಯನ್ನು ೨೦೧೯ ರ ಸಾಲಿನಲ್ಲಿ ಬಸವರಾಜ ಹವಾಲ್ದಾರ( ಪ್ರಜಾವಾಣಿ),೨೦೨೦ ರಲ್ಲಿ ಹಾಸನದ ಜ್ಞಾನದೀಪ ಪತ್ರಿಕೆಯ ಜೋಸೆಫ್ ಡಿಸೋಜಾ, ೨೦೨೧ ರಲ್ಲಿ ವಿಜಯವಾಣಿ ವರದಿಗಾರ ಹರೀಶ್ ಬೇಲೂರು ಮತ್ತು ಕಲಬುರ್ಗಿಯ ಸಂಜೆವಾಣಿ ಪತ್ರಿಕೆಯ ಹಟ್ಟಿ ನಜೀರ್ ಮಿಯಾನ್ ಅವರು ೨೦೨೨ ರ ಸಾಲಿನಲ್ಲಿ ತಮ್ಮ ಲೇಖನಕ್ಕಾಗಿ ಪಡೆದಿದ್ದಾರೆ.

ಇನ್ನು ಅತ್ಯುತ್ತಮ ಮಾನವೀಯ ವರದಿಗಾರಿಕೆಯ ಲೇಖನಕ್ಕೆ ನೀಡುವ ಪ್ರಶಸ್ತಿಯನ್ನು ೨೦೧೯ ರಲ್ಲಿ ಉದಯವಾಣಿಯ ಬಾಗಲಕೋಟೆ ವರದಿಗಾರ ಚಂದ್ರಶೇಖರ ಮೋರೆ,೨೦೨೦ ರ ಸಾಲಿನಲ್ಲಿ ಪ್ರಜಾವಾಣಿಯ ಮಂಗಳೂರು ವರದಿಗಾರ ಪ್ರದೀಪ್ ಎಚ್.ಮರೋಡಿ ಮತ್ತು ೨೦೨೧ ರ ಸಾಲಿನಲ್ಲಿ ರಾಮನಗರದ ವಿಜಯಕರ್ನಾಟಕ ವರದಿಗಾರ ತಿ,ನಾ ಪದ್ನನಾಭ ಮತ್ತು ೨೦೨೨ ರ ಸಾಲಿನಲ್ಲಿ ವಿಜಯವಾಣಿ ಮೈಸೂರು ವರದಿಗಾರ ಶಿವಕುಮಾರ್ ಮತ್ತು ಶಿವಮೊಗ್ಗ ವಿಜಯವಾಣಿ ವರದಿಗಾರ ದೀಪಕ್ ಸಾಗರ್ ಹಂಚಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಗೆ ಸಿಂಹಪಾಲು ಪ್ರಶಸ್ತಿಗಳು

ಕರ್ನಾಟಕ ಮಾಧ್ಯಮ ಅಕಾಡೆಮಿಯು ೨೦೧೯ ರಿಂದ ೨೦೨೨ ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ಶಿವಮೊಗ್ಗ ಜಿಲ್ಲೆಗೆ ಸಿಂಹಪಾಲು ಪ್ರಶಸ್ತಿಗಳು ಲಭಿಸಿವೆ.
ಪ್ರೆಸ್ಟ್‌ನ ಪದಾಧಿಕಾರಿಗಳಾದ ನಾಗರಾಜ್‌ನೇರಿಗೆ, ಚಂದ್ರಹಾಸ್ ಹಿರೇಮಳಲಿ, ಹೊನ್ನಾಳಿ ಚಂದ್ರಶೇಖರ್ ಹಾಗೂ ಕೆ.ತಿಮ್ಮಪ್ಪ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ, ಉಳಿದಂತೆ ಹಿರಿಯ ಪತ್ರಕರ್ತರಾದ ಸಿ.ರುದ್ರಪ್ಪ,  ಡಿ.ಪಿ.ಸತೀಶ್,ರಾಮಸ್ವಾಮಿ ಹುಲಕೋಡು, ವಿ.ಎಸ್.ಸುಬ್ರಹ್ಮಣ್ಯ, ಪಿ.ವಿ.ವೆಂಕಟೇಶ್, ಭಂಡಿಗಡಿ ನಂಜುಂಡಪ್ಪ, ಎನ್.ಡಿ.ಶಾಂತಕುಮಾರ್, ಅರವಿಂದ ಅಕ್ಲಾಪುರ, ದೀಪಕ್ ಸಾಗರ್ ಅವರಿಗೆ ವಿವಿಧ ವರ್ಷಗಳ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪತ್ರಿಕೆಯೊಂದಕ್ಕೆ ನೀಡುವ ಆಂದೋಲನ ಪ್ರಶಸ್ತಿಯು ನಾವಿಕ ಪತ್ರಿಕೆಗೆ ಲಭಿಸಿದೆ.

Ad Widget

Related posts

ಹಕ್ಕುಪತ್ರಕ್ಕಾಗಿ ಹೋರಾಡಬೇಕಿರುವುದು ದುರಂತ: ಕಾಗೋಡು

Malenadu Mirror Desk

ಸರಕಾರಿ ಕಾರ್ಯಕ್ರಮ ಎಲ್ಲರೂ ಬನ್ನಿ, ವಿಮಾನ ನಿಲ್ದಾಣ ಉದ್ಘಾಟನೆಗೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆಹ್ವಾನ

Malenadu Mirror Desk

ಕರ್ತವ್ಯನಿರತ ಎಹೆಚ್ ಸಿ ಸಾವು : ಸರ್ಕಾರಿ ಗೌರವದೊಂದಿಗೆ ಹುಟ್ಟೂರಲ್ಲಿ ಅಂತ್ಯಕ್ರಿಯೆ.

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.