Malenadu Mitra
ರಾಜ್ಯ ಶಿವಮೊಗ್ಗ

ಮಲೆನಾಡಿಗರ ಸಮಸ್ಯೆಗಳ ಪರಿಹಾರಕ್ಕೆ ಸದಾಸಿದ್ಧ; ಹೆಚ್.ಹಾಲಪ್ಪ.ಸಾಗರ- ಹೊಸನಗರ ಬೆಂಗಳೂರು ನಿವಾಸಿಗಳ ಸ್ನೇಹ ಮಿಲನ ಕಾರ್ಯಕ್ರಮ.

ಬೆಂಗಳೂರು; ಮಲೆನಾಡಿಗರು ಪ್ರಸ್ತುತ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ವಿಶೇಷವಾಗಿ ಶರಾವತಿ ಸಂತ್ರಸ್ತರ ಸಮಸ್ಯೆಗಳನ್ನು ಸಂಸತ್ತು, ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಸಾಗರ,ಹೊಸನಗರ ಶಾಸಕ ಹರತಾಳು ಹಾಲಪ್ಪ ಹೇಳಿದರು.

ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಗರ ಹೊಸನಗರ ಕ್ಷೇತ್ರದ ಬೆಂಗಳೂರು ನಿವಾಸಿಗಳ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ
ಮಾತನಾಡಿದ ಅವರು, ಸಾಗರ ಹೊಸನಗರ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ. ಈಗಾಗಲೇ ಅಭಿವೃದ್ಧಿಯಾಗಿದೆ.ನಾನು ಸೊರಬ ಕ್ಷೇತ್ರದಲ್ಲಿ ನಿಲ್ಲುತ್ತೇನೆ ಎಂದು ಊಹಾಪೋಹ ಸುದ್ದಿಯನ್ನು ಹೇಳ್ತಾ ಇದ್ದಾರೆ. ನಾನು ಸಾಗರದಿಂದಲೇ ಸ್ಪರ್ದೆ ಮಾಡುವುದು ಈ ಬಗ್ಗೆ ಅನುಮಾನ ಬೇಡ. ಶಿವಮೊಗ್ಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಾ ಇವೆ. ಇನ್ನು ನಡೆಯಲಿವೆ. ನಾವೆಲ್ಲರೂ ಒಟ್ಟಾಗಿ ಮಲೆನಾಡಿಗರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗೋಣ ಎಂದು ಹೇಳಿದರು.

ಪ್ರಜಾವಾಣಿಯ ನಿವೃತ್ತ ಸುದ್ದಿ ಸಂಪಾಧಕ ಇ.ವಿ.ಸತ್ಯನಾರಾಯಣ ಮಾತನಾಡಿ,ಅಭಿವೃದ್ಧಿ ರಾಜಕಾರಣ,ಜನಪರ ರಾಜಕಾರಣ ಮಾಡುವ ರಾಜಕಾರಣಿಗಳನ್ನು ಜನರು ಬೆಂಬಲಿಸಿ ಗೆಲ್ಲಿಸಬೇಕು ಅಂತಹ ರಾಜಕಾರಣಿಗಳಲ್ಲಿ ಹರತಾಳು ಹಾಲಪ್ಪನವರು,
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಗರಡಿಯಲ್ಲಿ ಬೆಳೆದು ಬಂಗಾರಪ್ಪ ಅವರ ರೀತಿಯೇ ರಾಜಕಾರಣವನ್ನು ಮೈಗೂಡಿಸಿಕೊಂಡಿದ್ದಾರೆ. ವಿಶೇಷವಾಗಿ ಹೊಸನಗರ, ಸಾಗರ, ಸೊರಬ ಕ್ಷೇತ್ರದಲ್ಲಿ ಗೆದ್ದು ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಸಾಗರ ಕ್ಷೇತ್ರದಲ್ಲಿ ತಮ್ಮದೇ ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ.ಸಿಗಂದೂರು ಸಾಗರಕ್ಕೆ ಸಂಪರ್ಕ ಕಲ್ಪಿಸುವ ಬೃಹತ್ ಮಟ್ಟದ ಸೇತುವೆಯನ್ನು ನಿರ್ಮಾಣ ಕಾರ್ಯಕ್ಕೆ ಹಾಲಪ್ಪನವರ ಕೊಡುಗೆ ಸಾಕಷ್ಟಿದೆ. ಈ ಸೇತುವೆ ಪೂರ್ಣಗೊಂಡರೆ ಬೆಂಗಳೂರು- ಮೈಸೂರು ಕಾರಿಡಾರ್ ನಿರ್ಮಾಣ ಮಾಡಿದಂತಹ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸಚಿವರ ವಿಶೇಷಾಧಿಕಾರಿ ಧರ್ಮಪ್ಪ ಮಾತನಾಡಿ, ಹಾಲಪ್ಪನವರು ಕಾಲೇಜು ದಿನಗಳಲ್ಲಿ ನನ್ನ ಶಿಷ್ಯನಾಗಿ ಈ ಮಟ್ಟಕ್ಕೆ ಬೆಳೆದಿದ್ದು ಅತ್ಯಂತ ಖುಷಿ ತಂದಿದೆ.ಹಾಲಪ್ಪನವರು ಕಾಲೇಜು ದಿನಗಳಲ್ಲಿ ತಾವು ಏನೋ ಅಂದುಕೊಂಡಿದ್ದರೊ ಅದನ್ನ ರಾಜಕಾರಣದಲ್ಲಿ ಸಫಲಗೊಳಿಸಿದ್ದಾರೆ. ಅವರು ಮಂತ್ರಿಯಾಗಿದ್ದಾಗ ವಿಶೇಷಾಧಿಕಾರಿಯಾಗಿ ಕೆಲಸ ನಿರ್ವಹಿಸಿದ ವೇಳೆ ಅವರ ಅಭಿವೃದ್ಧಿಪರ ರಾಜಕಾರಣ ಗಮನಿಸಿದ್ದೇನೆ.ಯಾವಗಲೂ ದಲಿತರ,ಬಡವರು, ಕ್ಷೇತ್ರದ ಅಭಿವೃದ್ಧಿ ರಾಜಕಾರಣದ ಬಗ್ಗೆ ಸದಾ ಚಿಂತನೆ ಹೊಂದಿರುತ್ತಾರೆ ಎಂದರು.

ಹೊಸನಗರ ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವಿರೇಶ್ ಅಲವಳ್ಳಿ ಮಾತನಾಡಿ, ಕಳೆದ ಐದು ವರ್ಷಗಳ ಅವಧಿಯಲ್ಲಿ ಶಾಸಕ ಹಾಲಪ್ಪನವರ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಕ್ಷೇತ್ರಕ್ಕೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗುವ ಅವಶ್ಯಕತೆ ಇದ್ದು. ಈ ಹಿನ್ನಲೆಯಲ್ಲಿ ಹಾಲಪ್ಪ ಅವರನ್ನು ನಾವೆಲ್ಲರೂ ಗೆಲ್ಲಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಹೆಸರಾಂತ ಆಯುರ್ವೇದ ವೈದ್ಯ ಡಾ.ಗಿರಿಧರ ಕಜೆ ಮಾತನಾಡಿ, ಮಾನವೀತೆಗೆ ಪ್ರತಿರೂಪ ಶಾಸಕ ಹಾಲಪ್ಪನವರು,ಸಾಗರ ಕ್ಷೇತ್ರದಿಂದ ಬೆಂಗಳೂರಿಗೆ ಆಗಮಿಸಿ ವಿದ್ಯಾಭ್ಯಾಸ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಬೇರೆಯವರಿಗೆ ಅನುಕೂಲವಾಗುವಂತೆ ಸಾಗರ ಭವನ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಾಗರದ ದಿನೇಶ್ ಜೋಶಿ, ಚಲನಚಿತ್ರ ನಟಿ, ನಿರ್ಮಾಪಕಿ ಸುಮಿತ್ರಾ ಭಟ್ಟ್, ಸಿಎನ್ ಎನ್ ಐಬಿಎನ್ ದಕ್ಷಿಣ ವಿಭಾಗದ ಮುಖ್ಯಸ್ಥರಾದ ಡಿ.ಪಿ.ಸತೀಶ್, ಹಾಲಪ್ಪ ಸ್ನೇಹ ಬಳಗದ ಸದಸ್ಯರಾದ ಅರಬಳ್ಳಿ ಮಂಜುನಾಥ್, ಬಸವರಾಜ ಓಟ್ಟೂರು, ಜಯಶೀಲ ಗೌಡ, ಪರಶುರಾಮ್ ತಾಳಗುಪ್ಪ, ಮಂಜು ತ್ಯಾಗರ್ತಿ, ದೀಪಕ್ ಬರಡೆ, ಹುಚ್ಚಫ್ಪ ಮರಸ, ಬೀರಪ್ಪ ಹೊಳೆಕೊಪ್ಪ, ಗಣಪತಿ ಕಾಸರಗುಪ್ಪೆ ಸೇರಿದಂತೆ ಅನೇಕರು ಹಾಜರಿದ್ದರು.

Ad Widget

Related posts

ಮಲೆನಾಡಿನಲ್ಲಿ ವರ್ಷಧಾರೆ, ಮೈದುಂಬಿದ ತುಂಗೆ

Malenadu Mirror Desk

ಬಿಜೆಪಿ ವಿಶೇಷ ಸಭೆ ಸಂಭ್ರಮ

Malenadu Mirror Desk

ಕಣ್ಣೂರು ಕಚ್ಚಾಬಾಂಬ್ ಸ್ಫೋಟದ ಹಿಂದಿನ ಅಸಲಿಯತ್ತು ಗೊತ್ತಾ ?, ಬಚ್ಚಲುಮನೆ ಒಲೆಯಲ್ಲಿ ಬಾಂಬಿಟ್ಟು ಕೊಲೆ ಸಂಚು ನಡೆದಿತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.