Malenadu Mitra
ರಾಜ್ಯ ಶಿವಮೊಗ್ಗ

ಹಂದಿ ಅಣ್ಣಿ ಕೊಲೆ ಆರೋಪಿ ಹತ್ಯೆ, ಮತ್ತೊಬ್ಬ ಗಂಭೀರ, ರಿವೇಂಜ್ ಮರ್ಡರ್ ಪೊಲೀಸರ ಶಂಕೆ


ಶಿವಮೊಗ್ಗ ಕುಖ್ಯಾತ ರೌಡಿ ಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣದಲ್ಲಿ ಬಂಽತರಾಗಿ ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದ ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ಕೊಲೆ ಮಾಡಿ, ಮತತೊಬ್ಬನ ಮೇಲೆ ಗಂಭೀರ ಹಲ್ಲೆ ನಡೆಸಲಾಗಿದೆ.
ಹೊನ್ನಾಳಿ ತಾಲ್ಳುಕು ಗೋವಿನ ಕೋವಿಯ ತೋಟದಲ್ಲಿ ಹತ್ಯೆ ನಡೆದಿದ್ದು, ಆಂಜನೇಯ ಎಂಬಾತ ಸಾವೀಗಿಡಾಗಿದ್ದು, ಮತ್ತೊಬ್ಬ ಆರೋಪಿ ಮಧು ಗಂಭೀರವಾಗಿ ಗಾಯಗೊಂಡಿದ್ದಾನೆ.
ಹಂದಿ ಅಣ್ಣಿ ಕೊಲೆ ಪ್ರಕರಣದ ವಿಚಾರಣೆ ಶಿವಮೊಗ್ಗ ಕೋರ್ಟ್‌ನಲ್ಲಿ ಬುಧವಾರ ನಡೆದಿತ್ತು. ನ್ಯಾಯಾಲಯಕ್ಕೆ ಹಾಜರಾಗಿ ಮಧು ಮತ್ತು ಆಂಜನೇಯ ಹರಿಹರಕ್ಕೆ ಬೈಕಿನಲ್ಲಿ ತೆರಳುತ್ತಿರುವಾಗ ಚೀಲೂರು ಬಳಿ ದಾಳಿ ನಡೆಸಲಾಗಿದೆ. ಶಿವಮೊಗ್ಗದಲ್ಲಿ ಮತ್ತು ಇವರಿಬ್ಬರಿದ್ದ ಬೈಕನ್ನು ಸ್ಕಾರ್ಪಿಯೋ ಗಾಡಿಯಲ್ಲಿ ಹಿಂಬಾಲಿಸಲಾಗಿತ್ತು. ಚೀಲೂರಿನ ಗೋವಿನ ಕೋವಿಯ ಬಳಿಯಲ್ಲಿ ಮಧು ಮತ್ತು ಆಂಜನೇಯರಿದ್ದ ಬೈಕ್‌ಗೆ ಸ್ಕಾರ್ಪಿಯೋ ಡಿಕ್ಕಿ ಹೊಡೆಸಿ ಅವರ ಮೇಲೆ ದಾಳಿ ಮಾಡಲಾಗಿದೆ.

ಆಂಜನೇಯ


ಮಧು ಮತ್ತು ಆಂಜನೇಯ ಇಬ್ಬರೂ ಹರಿಹರ ತಾಲೂಕು ಭಾನುವಳ್ಳಿಯವರು. ಗಾಯಗೊಂಡ ಮಧುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ವರ್ಷದ ಜೂನ್ ೧೪ರಂದು ಅಣ್ಣಿ ಕೊಲೆ ಶಿವಮೊಗ್ಗ ವಿನೋಬನಗರ ಪೊಲೀಸ್ ಚೌಕಿಯಲ್ಲಿ ನಡೆದಿತ್ತು. ಆನಂತರ ಪರಾರಿಯಾಗಿದ್ದ ಆರೋಪಿಗಳು ಕೆಲವು ದಿನದ ನಂತರ ಚಿಕ್ಕಮಗಳೂರು ಎಸ್‌ಪಿ ಎದುರು ಶರಣಾಗಿದ್ದರು. ಇವರನ್ನು ಬಂಧಿಸಿ ಕಲಬುರಗಿ ಜೈಲಿಗೆ ಕಳುಹಿಸಲಾಗಿತ್ತು. ಇತ್ತೀಚೆಗಷ್ಟೆ ಜೈಲಿನಿಂದ ಬಿಡುಗಡೆಯಾಗಿದ್ದರು. ಅಂದಿನಿಂದಲೂ ಇವರ ಹತ್ಯೆಗೆ ಅಣ್ಣಿ ಸಹಚರರು ಸಂಚು ನಡೆಸಿದ್ದರು ಎನ್ನಲಾಗಿದೆ.

ಹಂದಿ ಅಣ್ಣಿ

ಅಟ್ಯಾಕ್. ಮಾಡುವುದಕ್ಕೂ ಮೊದಲು ಶಿವಮೊಗ್ಗ ಕೋರ್ಟ್ ಸೇರಿದಂತೆ ಶಿವಮೊಗ್ಗ ನಗರದ ಕೆಲೆವೆಡೆ ಮಧು ಹಾಗೂ ಆಂಜನೇಯನನ್ನು ಸ್ಕಾರ್ಪಿಯೋ ಗಾಡಿಯಲ್ಲಿ ಫಾಲೋ ಮಾಡಲಾಗಿತ್ತು ಎಂಬ ಮಾಹಿತಿಯಿದೆ. ಅಂತಿಮವಾಗಿ ಚೀಲೂರಿನ ಗೋವಿನ ಕೋವಿಯ ಬಳಿಯಲ್ಲಿ ಮಧು ಮತ್ತು ಆಂಜನೇಯರಿದ್ದ ಬೈಕ್​ಗೆ ಸ್ಕಾರ್ಪಿಯೋ ಮೂಲಕ ಡಿಕ್ಕಿ ಹೊಡೆಸಿ ಅವರ ಮೇಲೆ ದಾಳಿ ಮಾಡಲಾಗಿದೆ.ಈ ಮಧ್ಯೆ ಮಧು ಹೇಗೆ ತಪ್ಪಿಸಿಕೊಂಡಿದ್ದ ಅನ್ನುವುದೇ ಅಚ್ಚರಿಯಾಗಿದೆ. ಇಬ್ಬರನ್ನು ಎತ್ತಬೇಕೆಂದೇ ಟೀಂ ಹೊರಟಿತ್ತು. ಇಬ್ಬರ ಮೇಲೆಯು ದಾಳಿ ಮಾಡಿದೆ ಆದಾಗ್ಯು ಮಧು ಅದೃಷ್ಟವಶಾತ್ ಬದುಕುಳಿದಿದ್ಧಾನೆ. ಇನ್ನೂ ಈ ಘಟನೆಯ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಳ್ಳುತ್ತಿದ್ದು, ಇದೊಂದು ಪೂರ್ವ ಯೋಜಿತ ಕೃತ್ಯ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಮಧು ಮತ್ತು ಆಂಜನೇಯ ಇಬ್ಬರು ಹರಿಹರದ ಬಾನುವಳ್ಳಿಯವರು. ಇವತ್ತು ಕೋರ್ಟ್​ಗೆ ಹಾಜರಾಗಲು ಬಂದಿದ್ದರು. ಈ ಮಾಹಿತಿಯನ್ನು ಸಹ ಹೊಂದಿದ್ದ ದುಷ್ಕರ್ಮಿಗಳು, ಅವರನ್ನ ಫಾಲೋ ಮಾಡಿ ದಾಳಿ ನಡೆಸಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಈ ಬಗ್ಗೆ ಇನ್ನಷ್ಟೆ ತನಿಖೆಯಿಂದ ಮತ್ತಷ್ಟು ಸತ್ಯಗಳು ಆಚೆ ಬರಬೇಕಿದೆ.

Ad Widget

Related posts

ರಾಮಾಯಣ ರಾಜಕಾರಣದ ಕೈಪಿಡಿ: ಡಾ. ಶಿವಾನಂದ

Malenadu Mirror Desk

ಕರ್ತವ್ಯನಿರತ ಎಹೆಚ್ ಸಿ ಸಾವು : ಸರ್ಕಾರಿ ಗೌರವದೊಂದಿಗೆ ಹುಟ್ಟೂರಲ್ಲಿ ಅಂತ್ಯಕ್ರಿಯೆ.

Malenadu Mirror Desk

ಶ್ರೀಕಾಂತ್‌ಗೆ ಅದ್ದೂರಿ ಸ್ವಾಗತ, ವಿಧ್ಯುಕ್ತವಾಗಿ ಕಾಂಗ್ರೆಸ್ ಸೇರ್ಪಡೆ, ತೆರೆದ ಕಾರಿನಲ್ಲಿ ಭವ್ಯ ಮೆರವಣಿಗೆ, ಅಭಿಮಾನಿಗಳ ಹರ್ಷೋದ್ಘಾರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.