ದಾವಣಗೆರೆ,ಮಾ.೧೬: ಹೊನ್ನಾಳಿ ತಾಲೂಕು ಗೋವಿನಕೋವಿಯಲ್ಲಿ ಹಂದಿ ಅಣ್ಣಿ ಕೊಲೆ ಆರೋಪಿ ಆಂಜನೇಯನನ್ನು ಕೊಲೆಮಾಡಿ ಮಧು ಮೇಲೆ ಹಲ್ಲೆ ಮಾಡಿದ್ದ ನಾಲ್ವರನ್ನು ದಾವಣಗೆರೆ ಜಿಲ್ಲೆ ಹೊನ್ನಾಳಿ ಪೊಲೀಸರು ಗುರುವಾರ ಶಿಗ್ಗಾವಿಯಲ್ಲಿ ಬಂಧಿಸಿದ್ದಾರೆ.
ಶಿವಮೊಗ್ಗ ಮೂಲದ ಸುನೀಲ್, ವೆಂಕಟೇಶ್, ಅಭಿಲಾಷ್, ಪವನ್ ಬಂಧಿತ ಆರೋಪಿಗಳು. ಹೊನ್ನಾಳಿ – ನ್ಯಾಮತಿ ತಾಲೂಕಿನ ಗೋವಿನಕೋವಿ ಬಳಿ ಸ್ಕಾರ್ಪಿಯೋದಲ್ಲಿ ಬಂದಿದ್ದ ಆರೋಪಿಗಳು, ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ಆಂಜನೇಯ ಅಲಿಯಾಸ್ ಅಂಜಿನಿ ಮತ್ತು ಮಧು ಮೇಲೆ ದಾಳಿ ನಡೆಸಿತ್ತು. ಈ ವೇಳೆ ಆಂಜ ನೇಯ ಸ್ಥಳದಲ್ಲಿ ಕೊನೆಯುಸಿರೆಳೆ ದಿದ್ದರೆ, ಮಧು ತಲೆಗೆ ಹೊಡೆತ ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಅವರು ಹೊನ್ನಾಳಿಯಲ್ಲಿ ಮಾಹಿತಿ ನೀಡಿದ್ದಾರೆ.
ಆಂಜನೇಯ ಹಾಗೂ ಮಧು ಪ್ರಕರಣ ಸಂಬಂಧ ವಿಚಾರಣೆಗಾಗಿ ಶಿವಮೊಗ್ಗ ಕೋರ್ಟ್‌ಗೆ ಹೋಗಿದ್ದರು. ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ಶಿವಮೊಗ್ಗದಿಂದ ಹರಿಹರಕ್ಕೆ ಬರುತ್ತಿದ್ದ ವೇಳೆ ಬೈಕ್ ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿಗಳು ಕೊಲೆ ಮತ್ತು ಕೊಲೆ ಯತ್ನ ಮಾಡಿ ವಾಹನ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು.
. ಭೂಗತ ಪಾತಕಿ ಹೆಬ್ಬೆಟ್ಟು ಮಂಜನ ಜೊತೆ ಗುರುತಿಸಿಕೊಂಡಿದ್ದ ಹಂದಿ ಅಣ್ಣಿಯನ್ನು ೨೦೨೨ರ ಜುಲೈ ೧೪ರಂದು ಆತನ ವಿರೋಧಿಗಳಾಗಿದ್ದ ಕಾರ್ತಿಕ್ ನೇತೃತ್ವದ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಆ ಬಳಿಕ ಆರೋಪಿಗಳು ಶರಣಾಗಿದ್ದರು.
ಸದ್ಯಕ್ಕೆ ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣ ದಲ್ಲಿ ಬೇರೆ ಯಾರಾದರೂ ಇದ್ದಾರೆಯೋ, ನಾಲ್ವರು ಈ ಕೃತ್ಯ ಎಸಗಿದ್ದರೇ ಎಂಬುದನ್ನು ಈಗಲೇ ಹೇಳಲಾಗದು. ಹತ್ಯೆಗೆ ಕಾರಣ ಏನು ಎಂಬ ಬಗ್ಗೆ ತನಿಖಾಕಾರಿಗಳು ವಿಚಾರಣೆ ನಡೆ ಸುತ್ತಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು.