Malenadu Mitra
ರಾಜ್ಯ ಶಿವಮೊಗ್ಗ

ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕರಾಗಿ ಮಂಜುನಾಥ್

ಶಿವಮೊಗ್ಗ : ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅನುಮೋದನೆ ಮೇರೆಗೆ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಮಧು ಬಂಗಾರಪ್ಪನವರು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕರನ್ನಾಗಿ ಜಿ.ಡಿ ಮಂಜುನಾಥ್ ಅವರನ್ನು ನೇಮಕ ಮಾಡಿದ್ದಾರೆ.
ಜೆಡಿಎಸ್‌ನಲ್ಲಿದ್ದ ಮಂಜುನಾಥ್ ಅವರು ಮಧುಬಂಗಾರಪ್ಪ ಅವರೊಂದಿಗೆ ಕಾಂಗ್ರೆಸ್ ಸೇರಿದ್ದು, ಶಿವಮೊಗ್ಗ ಜಿಲ್ಲಾ ಮುಖಂಡರಾಗಿ ಕೆಲಸ ಮಾಡಿದ್ದಾರೆ. ಉತ್ತಮ ಸಂಘಟಕರಾದ ಮಂಜುನಾಥ್ ಅವರ ಸೇವೆಯನ್ನು ಪರಿಗಣಿಸಿ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕರನ್ನಾಗಿ ಮಾಡಲಾಗಿದೆ. ಅದೇ ರೀತಿ ಕಾಶಿ ವಿಶ್ವನಾಥ್ ಮತ್ತು ರಘು ಅವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ನೇಮಕಕ್ಕೆ ಸಹಕರಿಸಿದ ರಾಜ್ಯ ಹಾಗೂ ಜಿಲ್ಲೆಯ ಎಲ್ಲ ಮುಖಂಡರಿಗೆ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಯೋಜಕರಾದ ಜಿ.ಡಿ ಮಂಜುನಾಥ್ ಧನ್ಯವಾದಗಳು ಸಲ್ಲಿಸಿದ್ದಾರೆ.

Ad Widget

Related posts

ಸಿಗಂದೂರು ಮುಜರಾಯಿಗೆ ಸೇರಿಸುವ ಪ್ರಯತ್ನದ ವಿರುದ್ಧ ದೊಡ್ಡ ಹೋರಾಟ, ಗಂಗಾವತಿ ಈಡಿಗರ ಚಿಂತನ-ಮಂಥನ ಸಭೆಯಲ್ಲಿ ಗುತ್ತೇದಾರ್ ಎಚ್ಚರಿಕೆ

Malenadu Mirror Desk

ಶಿವಮೊಗ್ಗಕ್ಕೆ ಕ್ಯಾನ್ಸರ್ ಆಸ್ಪತ್ರೆ, ಆಯುಷ್ ವಿವಿ

Malenadu Mirror Desk

ಮಹಿಳೆ ಕೊಲೆ ಮಾಡಿ 35 ಲಕ್ಷ ಲಟಪಾಯಿಸಿದ ಗ್ಯಾಂಗ್ ಅಂದರ್, ಚಾಲಕನಾದರೂ ಮಗನಂತೆ ನೋಡಿಕೊಂಡ ಮನೆಯೊಡತಿಯನ್ನೇ ಕೊಲೆಮಾಡಿದ ಪಾತಕಿಗಳು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.